ರವಿತೇಜಗೂ ಆಗ್ಲಿಲ್ಲ, ದೇವರಕೊಂಡಗೂ ಆಗ್ಲಿಲ್ಲ: ಅಲ್ಲೂ ಯಶ್ ನಂ.1.!

Recommended Video

KGF Kannada Movie : ತೆಲುಗು ಸೂಪರ್ ಸ್ಟಾರ್ ಗಳನ್ನ ಹಿಂದಿಕ್ಕಿದ ಯಶ್ ಕೆಜಿಎಫ್ ಟ್ರೈಲರ್ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆಶ್ಚರ್ಯ ಅಂದ್ರೆ, ಕನ್ನಡದ ಟ್ರೈಲರ್ ಗಿಂತ ಹಿಂದಿ ಮತ್ತು ತೆಲುಗು ಟ್ರೈಲರ್ ಗಳೇ ಹೆಚ್ಚು ಸದ್ದು ಮಾಡ್ತಿದೆ.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ 'ಕೆಜಿಎಫ್' ಸಿನಿಮಾ ಐಎಂಡಿಬಿ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿತ್ತು. ಶಾರೂಖ್ ಖಾನ್ ಮತ್ತು ರಜನಿಕಾಂತ್ ಅಂತಹ ಸೂಪರ್ ಸ್ಟಾರ್ ಗಳ ಚಿತ್ರವನ್ನೇ ಹಿಂದಿಕ್ಕಿದೆ. ಇದೀಗ, ಲೋಕಲ್ ಸ್ಟಾರ್ ಗಳನ್ನ ಕೂಡ ಸೆಡ್ಡು ಹೊಡೆದಿದೆ.

ಹೌದು, ಟಾಲಿವುಡ್ ನಲ್ಲಿ ಈಗ ಕೆಜಿಎಫ್ ಸಿನಿಮಾದ ಹವಾ ಮುಂದುವರಿದಿದೆ. ಮಾಸ್ ಮಹಾರಾಜ ರವಿತೇಜ ಮತ್ತು 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ ದೇವರಕೊಂಡ ಅವರಿಂದಲೂ ಯಶ್ ಅವರನ್ನ ಹಿಂದಿಕ್ಕಲು ಸಾಧ್ಯವಾಗ್ತಿಲ್ಲ. ಏನಿದು ಲೋಕಲ್ ಸ್ಟಾರ್ ಗಳ ಪೈಪೋಟಿ.? ಮುಂದೆ ಓದಿ...

ಟ್ರೆಂಡಿಂಗ್ ನಂ 1 'ಕೆಜಿಎಫ್'

ಟ್ರೆಂಡಿಂಗ್ ನಂ 1 'ಕೆಜಿಎಫ್'

ಸತತ ಮೂರನೇ ದಿನವೂ ಕೆಜಿಎಫ್ ತೆಲುಗು ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿಯವರೆಗೂ ತೆಲುಗು ವರ್ಷನ್ ಕೆಜಿಎಫ್ ಟ್ರೈಲರ್ 45.4 ಲಕ್ಷ ವೀಕ್ಷಕರನ್ನ ಸಂಖ್ಯೆಯನ್ನ ಹೊಂದಿದೆ. ಆದ್ರೆ, ಟಾಲಿವುಡ್ ಸ್ಟಾರ್ ಗಳು ಅಭಿನಯದ ಹೊಸ ಟ್ರೈಲರ್ ಗಳು ಬಿಡುಗಡೆಯಾಗಿದ್ದರೂ, ಕೆಜಿಎಫ್ ಓಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ.

ರವಿತೇಜ ಟ್ರೈಲರ್ ಗೂ ಆಗ್ಲಿಲ್ಲ

ರವಿತೇಜ ಟ್ರೈಲರ್ ಗೂ ಆಗ್ಲಿಲ್ಲ

ಯಶ್ 'ಕೆಜಿಎಫ್' ಟ್ರೈಲರ್ ಬಿಡುಗಡೆಯಾದ ಮರುದಿನ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಅವರ 'ಅಮರ್ ಅಕ್ಬರ್ ಆಂಟೋನಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವೀಕ್ಷಕರ ಸಂಖ್ಯೆಯಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಈ ಟ್ರೈಲರ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಬಹುಶಃ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದರೂ, ಸದ್ಯಕ್ಕಂತೂ ಆಗಿಲ್ಲ. ಅಮರ್ ಅಕ್ಬರ್ ಆಂಟೋನಿ ವೀಕ್ಷಕರ ಸಂಖ್ಯೆ 38.6 ಲಕ್ಷ ಇದೆ.

'ಟ್ಯಾಕ್ಸಿವಾಲ' ಮೂರನೇ ಸ್ಥಾನ

'ಟ್ಯಾಕ್ಸಿವಾಲ' ಮೂರನೇ ಸ್ಥಾನ

ಅರ್ಜುನ್ ರೆಡ್ಡಿ ಚಿತ್ರದ ನಂತರ ರಾಷ್ಟ್ರಮಟ್ಟದಲ್ಲಿ ಸ್ಟಾರ್ ಆದ ವಿಜಯ ದೇವರಕೊಂಡ ಈಗ ಟಾಲಿವುಡ್ ಪಾಲಿಗೆ ಟ್ರೆಂಡ್ ಸೆಟ್ಟರ್. ಇತ್ತೀಚಿಗಷ್ಟೆ ದೇವರಕೊಂಡ ಅಭಿನಯದ 'ಗೀತಾ ಗೋವಿಂದಂ' ಸಿನಿಮಾ ನೂರು ಕೋಟಿ ಕ್ಲಬ್ ಸೇರಿತ್ತು. ಇಂತಹ ಯಶಸ್ಸಿನಲ್ಲಿರುವ ದೇವರಕೊಂಡ ಈಗ 'ಟ್ಯಾಕ್ಸಿವಾಲ' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಈ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದ್ದು, 16 ಗಂಟೆಗಳಲ್ಲಿ 13.6 ಲಕ್ಷ ವೀವ್ಸ್ ಪಡೆದುಕೊಂಡಿದೆ.

ಟಾಪ್ ಮೂರರಲ್ಲೂ ತೆಲುಗು ಟ್ರೆಂಡಿಂಗ್.!

ಟಾಪ್ ಮೂರರಲ್ಲೂ ತೆಲುಗು ಟ್ರೆಂಡಿಂಗ್.!

ಅಲ್ಲಿಗೆ ಯೂಟ್ಯೂಬ್ ನ ಟಾಪ್ ಟ್ರೆಂಡಿಂಗ್ ನ ಮೂರು ಸ್ಥಾನದಲ್ಲೂ ತೆಲುಗು ಸಿನಿಮಾಗಳ ಟ್ರೈಲರ್ ಇರೋದು ವಿಶೇಷ. ಸದ್ಯದ ಮಟ್ಟಿಗೆ ಕೆಜಿಎಫ್ ಸಿನಿಮಾದ ಹಿಂದಿ ಟ್ರೈಲರ್ ಗೆ ಅತಿ ಹೆಚ್ಚು ವೀವ್ಸ್ ಸಿಕ್ಕಿದೆ. 95.8 ಲಕ್ಷ ವೀಕ್ಷಕರ ಸಂಖ್ಯೆ ಪಡೆದುಕೊಂಡಿದೆ. ಕನ್ನಡದಲ್ಲಿ 71 ಲಕ್ಷ ವೀವ್ಸ್ ಲಭಿಸಿದೆ.

More from Filmibeat

English summary
Kannada actor yash starrer kgf telugu trailer number 1 trending in youtube. ravi teja's amar akbar anthony trailer get second place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X