»   » ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ.!

ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ.!

Posted By:
Subscribe to Filmibeat Kannada

ಟಾಲಿವುಡ್ ನ ಅನೇಕ ನಟ-ನಟಿಯರು 'ಡ್ರಗ್ಸ್ ಮಾಫಿಯಾ'ದಲ್ಲಿ ತೊಡಗಿಕೊಂಡಿರುವ ಬಗ್ಗೆ ತೆಲಂಗಾಣ ಅಬಕಾರಿ ಇಲಾಖೆ ಸ್ಫೋಟಕ ಮಾಹಿತಿಯನ್ನ ಹೊರಹಾಕಿತ್ತು. ಇದಕ್ಕೆ ಸಂಬಂಧಿಸಿದಂತೆ 15 ಸೆಲೆಬ್ರಿಟಿಗಳಿಗೆ ನೋಟೀಸ್ ಕೂಡ ಕಳುಹಿಸಿತ್ತು. ಆ 15 ಜನರ ಪೈಕಿ ಒಬ್ಬೊಬ್ಬರೇ ನೋಟೀಸ್ ಗೆ ಉತ್ತರಿಸುತ್ತಿದ್ದಾರೆ.

ಟಾಲಿವುಡ್ ಡ್ರಗ್ಸ್ ಮಾಫಿಯಾ ಪಟ್ಟಿಯಲ್ಲಿ ಮಾಸ್ ಮಹಾರಾಜ ರವಿತೇಜ ಹೆಸರು ಕೂಡ ಇತ್ತು. ಈಗ ಈ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಟಾಲಿವುಡ್ ಡ್ರಗ್ಸ್ ಮಾಫಿಯಾ ಧಿಡೀರ್ ಎಂದು ಸ್ಫೋಟಗೊಳ್ಳಲು ರವಿತೇಜ ಸಹೋದರ ಭರತ್ ರಾಜ್ ಅವರ ಸಾವು ಕಾರಣ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು, ಜೂನ್ 25 ರಂದು ಭರತ್ ರಾಜ್ ರಸ್ತೆ ಅಪಘಾತದಲ್ಲಿ ಸಾವನ್ನಿಪ್ಪಿದ್ದರು. ಇದಕ್ಕೂ ಡ್ರಗ್ಸ್ ಮಾಫಿಯಾಗೂ ಏನ್ ಸಂಬಂಧ? ಪೊಲೀಸರಿಗೆ ರವಿತೇಜ ಸಾವಿನಲ್ಲಿ ಸಿಕ್ಕ ಸುಳಿವೇನು.? ಎಂದು ಮುಂದೆ ಓದಿ.......

ರವಿತೇಜಾ ಸಹೋದರ ಮೊಬೈಲ್ ಸುತ್ತ ಅನುಮಾನ

ನಟ ರವಿತೇಜ ಸಹೋದರ ಭರತ್ ರಾಜು ಜೂನ್ 25 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಭರತ್ ರಾಜು ಅವರ ಮೃತದೇಹವನ್ನ ಶವ ಪರೀಕ್ಷೆಗೆ ಕಳುಹಿಸಿ, ಅವರ ಮೊಬೈಲ್ ನ ವಶಪಡಿಸಿಕೊಂಡಿದ್ದರು.

ಡ್ರಗ್ಸ್ ಮಾಫಿಯಾದಲ್ಲಿ ಪುತ್ರನ ಹೆಸರು: ಬೇಸರಗೊಂಡ ರವಿತೇಜಾ ತಾಯಿ.!

ಮೊಬೈಲ್ ನಲ್ಲಿತ್ತು ಡ್ರಗ್ಸ್ ಮಾಫಿಯಾ ಮಾಹಿತಿ.!

ಭರತ್ ರಾಜು ಅವರ ಮೊಬೈಲ್ ವಶಪಡಿಸಿಕೊಂಡ ನಂತರ, ಅದರಲ್ಲಿನ ಮಾಹಿತಿ ಪರಿಶೀಲಿಸಿದಾಗ ಪೊಲೀಸರಿಗೆ ಡ್ರಗ್ಸ್ ಬಳಕೆದಾದರ ಜೊತೆ ಸಂಪರ್ಕವಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ವಿಚಾರಣೆ ಕೈಗೊಂಡ ಪೊಲೀಸರಿಗೆ ಈ ಜಾಲದಲ್ಲಿ ಟಾಲಿವುಡ್ ನ ಅನೇಕರು ಭಾಗಿಯಾಗಿರುವುದರ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಡ್ರಗ್ಸ್ ಮಾಫಿಯಾದಲ್ಲಿ ತಂದೆ ಹೆಸರು: ಕಿಡಿಕಾರಿದ ಪುರಿ ಜಗನ್ನಾಥ್ ಪುತ್ರಿ ಪವಿತ್ರ

ಬಂಧನವಾಗಿದ್ದ ರವಿತೇಜ ಸಹೋದರ

ರವಿತೇಜ ಸಹೋದರ ಭರತ್ ರಾಜು ಬದುಕಿದ್ದಾಗ ಹಿಂದೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದ್ದರು. ನಂತರ ವಿಚಾರಣೆ ಬಳಿಕ ಬಿಡುಗಡೆಯಾಗಿದ್ದರು. ಆ ಸಮಯದಲ್ಲಿ ಭರತ್ ಕೈವಾಡ ಇರುವುದರ ಬಗ್ಗೆ ಪುರಾವೆ ಸಿಕ್ಕಿರಲಿಲ್ಲ. ಆದ್ರೀಗ, ಭರತ್ ರಾಜು ಕೂಡ ಆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆಯಂತೆ.

ರವಿತೇಜ ಮೇಲೂ ಆರೋಪವಿದೆ

ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ 15 ಜನರ ಪಟ್ಟಿಯಲ್ಲಿ ತೆಲುಗು ನಟ ರವಿತೇಜ ಅವರ ಹೆಸರೂ ಕೂಡ ಇದೆ. ಟಾಲಿವುಡ್ ಡ್ರಗ್ಸ್ ಮಾಫಿಯಾದಲ್ಲಿ ರವಿತೇಜ ಸಹೋದರನ ಪಾತ್ರ ಪ್ರಮುಖವಾಗಿತ್ತು ಎನ್ನಲಾಗಿದೆ. ಈಗ, ರವಿತೇಜ ಹೆಸರು ಈ ಪಟ್ಟಿಯಲ್ಲಿ ಬಂದಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.

ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

ಆರೋಪ ನಿರಾಕರಿಸಿದ ರವಿತೇಜ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿತೇಜ, ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರು ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮತ್ತು ನನಗೆ ಯಾವುದೇ ನೋಟೀಸ್ ಕೂಡ ಬಂದಿಲ್ಲವೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

English summary
Ravi Teja Brother Bharath's Death has given hint about Drug Mafia in Tollywood. Bharath, Died in a Road Accident Few weeks ago. After the Fatal Accident Bharath’s Phone was Seized by the Cops.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada