»   » ಡ್ರಗ್ಸ್ ಮಾಫಿಯಾದಲ್ಲಿ ಪುತ್ರನ ಹೆಸರು: ಬೇಸರಗೊಂಡ ರವಿತೇಜಾ ತಾಯಿ.!

ಡ್ರಗ್ಸ್ ಮಾಫಿಯಾದಲ್ಲಿ ಪುತ್ರನ ಹೆಸರು: ಬೇಸರಗೊಂಡ ರವಿತೇಜಾ ತಾಯಿ.!

Posted By:
Subscribe to Filmibeat Kannada

ಡ್ರಗ್ಸ್ ಮಾಫಿಯಾದಲ್ಲಿ ಟಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿರುವ ಸುದ್ದಿ ತೆಲುಗು ಸಿನಿ ಅಂಗಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಸುಮಾರು 15 ಸೆಲೆಬ್ರಿಟಿಗಳಿಗೆ ತೆಲಂಗಾಣ ಅಬಕಾರಿ ಇಲಾಖೆ ಈಗಾಗಲೇ ನೋಟೀಸ್ ಕೂಡ ಜಾರಿ ಮಾಡಿದೆ.

ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

ಟಾಲಿವುಡ್ ನ 'ಮಾಸ್ ಮಹಾರಾಜ' ರವಿತೇಜಾ ಹೆಸರೂ 'ಡ್ರಗ್ಸ್ ಮಾಫಿಯಾ'ದಲ್ಲಿ ಕೇಳಿ ಬಂದಿದೆ. ಇದರಿಂದ ರವಿತೇಜಾ ತಾಯಿ ಅಸಮಾಧಾನಗೊಂಡಿದ್ದಾರೆ. ಪುತ್ರ ರವಿತೇಜಾ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರಿಂದ ತಾಯಿ ರಾಜ್ಯಲಕ್ಷ್ಮಿ ಬೇಸರಗೊಂಡಿದ್ದಾರೆ. ಮುಂದೆ ಓದಿರಿ...

ಚಾನ್ಸ್ ಇಲ್ಲ.!

''ನನ್ನ ಪುತ್ರ ರವಿತೇಜಾ ಧೂಮಪಾನವನ್ನೇ ಮಾಡುವುದಿಲ್ಲ. ಹೀಗಿರುವಾಗ ಮಾದಕ ವ್ಯಸನಿ ಆಗಲು ಚಾನ್ಸೇ ಇಲ್ಲ. ಡ್ರಗ್ಸ್ ಮಾಫಿಯಾಗೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲ'' ಎಂದು ರವಿತೇಜಾ ತಾಯಿ ರಾಜ್ಯಲಕ್ಷ್ಮಿ ತೆಲುಗು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ತಂದೆ ಹೆಸರು: ಕಿಡಿಕಾರಿದ ಪುರಿ ಜಗನ್ನಾಥ್ ಪುತ್ರಿ ಪವಿತ್ರ

ಆಘಾತದಿಂದ ಹೊರಬಂದಿಲ್ಲ

''ನಮ್ಮ ಮತ್ತೊಬ್ಬ ಮಗ ಭರತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಆಘಾತದಿಂದಲೇ ನಾವಿನ್ನೂ ಹೊರಬಂದಿಲ್ಲ. ಹೀಗಿರುವಾಗ, ಇಂಥ ಆರೋಪದಿಂದ ಮನಸ್ಸಿಗೆ ನೋವಾಗುತ್ತದೆ'' - ರಾಜ್ಯಲಕ್ಷ್ಮಿ, ರವಿತೇಜಾ ತಾಯಿ

ನಮಗೂ ಶಾಕ್ ಆಗಿದೆ

''ರವಿತೇಜಾ ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದಾನೆ. ಅಂಥದ್ರಲ್ಲಿ ಡ್ರಗ್ ಮಾಫಿಯಾದಲ್ಲಿ ರವಿತೇಜಾ ಹೆಸರು ಕೇಳಿಬಂದಿರುವುದು ನಮಗೂ ಶಾಕ್ ಆಗಿದೆ'' - ರಾಜ್ಯಲಕ್ಷ್ಮಿ, ರವಿತೇಜಾ ತಾಯಿ

ಅಮಾಯಕ ಎಂದು ಪ್ರೂವ್ ಆಗುತ್ತದೆ

''ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ರವಿತೇಜಾ ಅಮಾಯಕ ಎಂದು ಪ್ರೂವ್ ಆಗುತ್ತದೆ ಎಂಬ ನಂಬಿಕೆ ಇದೆ'' ಎಂದು ತಾಯಿ ರಾಜ್ಯಲಕ್ಷ್ಮಿ ಹೇಳಿದ್ದಾರೆ.

English summary
Ravi Teja's mother Rajya Lakshmi speaks up about Tollywood drug mafia

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada