ಮತ್ತೆ ಒಂದಾದ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್
'ಮಾಣಿಕ್ಯ' ಮತ್ತು 'ಹೆಬ್ಬುಲಿ' ಚಿತ್ರದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ತೆರೆಮೇಲೆ ಬರ್ತಿದ್ದಾರೆ.
'ರವಿ ಬೋಪಣ್ಣ' ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಸುದೀಪ್ ಅವರ ಪಾತ್ರಕ್ಕೆ ಹೆಚ್ಚು ಮಹತ್ವವಿದ್ದು, ಅವರಿಗೆ ಸ್ಪೆಷಲ್ ಎಂಟ್ರಿ ಕುರಿತು ಪ್ಲಾನ್ ಮಾಡಲಾಗಿದೆಯಂತೆ.
'ರವಿ ಬೋಪಣ್ಣ' ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದರು. ಇದೀಗ, ನಟನೆ ಜೊತೆ ನಿರ್ದೇಶನವೂ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅಜಿತ್ ಅವರು ನಿರ್ದೇಶನದ ಜೊತೆ ನಿರ್ಮಾಣ ಮಾಡುತ್ತಿದ್ದರು. ಬಳಿಕ ನಿರ್ದೇಶನದಿಂದ ಹಿಂದೆ ಸರಿದಿರುವ ಅಜಿತ್ ಕ್ರೇಜಿಸ್ಟಾರ್ ಗೆ ಈ ಜವಾಬ್ದಾರಿ ಬಿಟ್ಟುಕೊಟ್ಟಿದ್ದಾರೆ.

ನಟನೆ ಮತ್ತು ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಕೂಡ ರವಿಚಂದ್ರನ್ ಅವರದ್ದೇ ಇದೆ. ಸಂಭಾಷಣೆ ನಟ ಮೋಹನ್ ರಚಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ಈ ಚಿತ್ರ ಸದ್ಯದಲ್ಲೇ ಚಿತ್ರೀಕರಣ ಕೂಡ ಆರಂಭಿಸಲಿದೆ.
ಅಂದ್ಹಾಗೆ, ರವಿ ಬೋಪಣ್ಣ ಸಿನಿಮಾ ಮಲಯಾಳಂ ಭಾಷೆಯ ಜೋಸೆಫ್ ಸಿನಿಮಾದ ರೀಮೇಕ್. ಈ ಚಿತ್ರದಲ್ಲಿ ಇಬ್ಬರು ನಾಯಕಿರಿದ್ದು, ಸದ್ಯಕ್ಕೆ ಕಾವ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬರು ಆಯ್ಕೆಯಾಗಿಲ್ಲ.


Click it and Unblock the Notifications











