ಮತ್ತೆ ತೆರೆ ಮೇಲೆ ಒಂದಾಯ್ತು 'ಮನೆದೇವ್ರು' ಜೋಡಿ
Recommended Video

ಸಿನಿಮಾ ಟೀಸರ್ ಗಾಗಿಯೇ ಲಕ್ಷಗಟ್ಟಲೆ ಖರ್ಚು ಮಾಡಿ ಸುದ್ದಿ ಮಾಡಿದ್ದ ಸಿನಿಮಾ 'ಪಡ್ಡೆಹುಲಿ'. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಪಡ್ಡೆಹುಲಿ ಚಿತ್ರ ಹಲವಾರು ಕಾರಣಗಳಿಂದ ವಿಶೇಷತೆ ಎನ್ನಿಸಿದ್ದು ಸಿನಿಮಾತಂಡಕ್ಕೆ ಇತ್ತೀಚಿಗಷ್ಟೆ ಕ್ರೇಜಿಸ್ಟಾರ್ ಎಂಟ್ರಿಕೊಟ್ಟಿದ್ದಾರೆ.
ಹೌದು. ಪಡ್ಡೆಹುಲಿ ಸಿನಿಮಾದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸ್ಪೆಷಲ್ ಎಂದರೆ ರವಿಮಾಮನ ಜೊತೆಯಲ್ಲಿ ಸುಧಾರಾಣಿ ಕೂಡ ಅಭಿನಯ ಮಾಡುತ್ತಿದ್ದಾರೆ.

ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಮತ್ತು ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತಿರುವುದರಿಂದ ರವಿಮಾಮನ ಪಾತ್ರಕ್ಕೆ ತಕ್ಕಂತೆ ಸಿನಿಮಾದ ಮನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ತೇಜಸ್ವಿನಿ ಎಂಟರ್‌ಪ್ರೈಸಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ನಿಮಾ೯ಪಕ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಾಜಹುಲಿ ಸಿನಿಮಾ ಖ್ಯಾತಿಯ ಗುರು ದೇಶಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರು ಮಾಡಿರುವ ಟೀಂ ಮತ್ತಷ್ಟು ವಿಸೇಷತೆಗಳನ್ನ ಅಭಿಮಾನಿಗಳ ಮುಂದೆ ತರಲಿದ್ದಾರೆ.


Click it and Unblock the Notifications











