»   » ಈ ಎಲ್ಲಾ ಸಮಸ್ಯೆಗಳಿಗೂ ಕ್ರೇಜಿಸ್ಟಾರ್ ಸೂಕ್ತ `ಉತ್ತರವಾದಿ'

ಈ ಎಲ್ಲಾ ಸಮಸ್ಯೆಗಳಿಗೂ ಕ್ರೇಜಿಸ್ಟಾರ್ ಸೂಕ್ತ `ಉತ್ತರವಾದಿ'

By: ಜೀವನರಸಿಕ
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರರಂಗವನ್ನೇ ಉಸಿರಾಗಿಸಿಕೊಂಡ ವ್ಯಕ್ತಿತ್ವ. ಸಿನಿಮಾದಲ್ಲಿ ರವಿಮಾಮ ತಡಕಾಡದ ವಿಭಾಗವಿಲ್ಲ. ಬಾಲಕನಾಗಿದ್ದಾಗಿನಿಂದಲೇ ಅಣ್ಣಾವ್ರ ಸಿನೆಮಾ ನೋಡುತ್ತ, ಮುಂದೆ ನಿರ್ಮಾಪಕನಾಗಿ, ಚಿತ್ರ ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ, ತಂತ್ರಜ್ಞನಾಗಿ ಸಿನೆಮಾದ ಎಲ್ಲ ಸಂಗತಿಗಳನ್ನು ಅರೆದು ಕುಡಿದಿದ್ದಾರೆ.

ನಿರ್ದೇಶಕನಾಗಿ ರವಿಮಾಮ ಯಶಸ್ವೀ ತಂತ್ರಜ್ಞ. ಕನ್ನಡ ಚಿತ್ರರಂಗದ 'ಕನಸುಗಾರ' ಹಲವಾರು ಸಿನೆಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಡಬ್ಬಿಂಗ್ ಮಾಡೋಕೆ ಹೊರಟ್ರೆ ನಿರ್ಮಾಪಕನಿಗೆ ಲಾಭವಿದ್ರೂ ನಿರ್ದೇಶಕನ ಹೊಟ್ಟೆಗೆ ಎಂತಹಾ ಹೊಡೆತ ಬಿಳುತ್ತೆ, ಸಾಮಾನ್ಯ ಕೆಲಸಗಾರನಿಗೆ ಊಟವಿಲ್ಲದಂತಾಗುತ್ತೆ ಅನ್ನೋದು ಅವರಿಗೆ ಗೊತ್ತಿದೆ. [ಅಧಿಕಪ್ರಸಂಗ ಚಿತ್ರರಂಗವನ್ನ ದಾರಿತಪ್ಪಿಸುತ್ತಿದೆ]

Ravichandran can solve these problems, but

'ಕಲಾವಿದ'ನಾಗಿ ಸ್ಟಾರ್ ಸ್ಥಾನದಲ್ಲಿ ನಿಂತು ಸಂಭಾವನೆಯನ್ನೂ ಪಡೆದಿದ್ದಾರೆ 'ರಸಿಕ'. ಅಷ್ಟೇ ಯಾಕೆ ಈಗ ಕಿರುತೆರೆಗೂ ಲಗ್ಗೆ ಇಟ್ಟು ನಿರ್ಮಾಪಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹೀಗೆ ಚಿತ್ರರಂಗದ ಎಲ್ಲ ಕ್ಷೇತ್ರಗಳ ಆಳ ಅಗಲ ಅರಿವಿರೋ ರವಿಮಾಮ ಈ ಸಮಸ್ಯೆಗೆ ಉತ್ತರ ಕೊಡೋಕೆ ಸೂಕ್ತ ವ್ಯಕ್ತಿ.

ತಾವೇ ಟಿವಿ ಶೋನಲ್ಲಿ ಜಡ್ಜ್ ಆಗಿರೋದು ಈ ಸಮಸ್ಯೆಗೆ ಪರಿಹಾರ ಹುಡುಕಲು ಎಂಟ್ರಿ ಕೊಡೋಕೆ 'ಹಠವಾದಿ'ಗೆ ಸವಾಲಾಗಿದೆ. ಆದ್ರೆ ಕ್ರೇಜಿ ಸ್ಟಾರ್ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಕೊಡೋಕೆ ಹೊರಟ್ರೆ ಆ ಉತ್ತರ ಏನಾಗಿರುತ್ತೆ ಅನ್ನೋ ಕುತೂಹಲ ಮಾತ್ರ ಚಿತ್ರರಂಗಕ್ಕೇ ಇದೆ. [ವರಮಹಾಲಕ್ಷ್ಮಿ ಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ']

English summary
Actor, producer, director V Ravichandran has worked in every department in the Kannada film industry. He knows in and out of every problem Kannada producers, workers are facing. He is capable of solving these problems too. But...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada