ರವಿಚಂದ್ರನ್ ಮಗಳ ಅರಿಶಿಣ ಮತ್ತು ಮೆಹಂದಿ ಶಾಸ್ತ್ರದ ಸಂಭ್ರಮ

Recommended Video

ರವಿಚಂದ್ರನ್ ಮಗಳು ಗೀತಾಂಜಲಿ ಅರಿಶಿನ ಶಾಸ್ತ್ರ ಕಾರ್ಯಕ್ರಮ | FILMIBEAT KANNADA

ಸ್ಯಾಂಡಲ್ ವುಡ್ ನ ಕನಸುಗಾರ, ಪ್ರೇಮಲೋಕದ ಸರದಾರ ರವಿಚಂದ್ರನ್ ಈಗ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ಸುಮಾರು ತಿಂಗಳುಗಳಿಂದ ಚಿತ್ರರಂಗದ ಮತ್ತು ರಾಜಕೀಯ ಗಣ್ಯರಿಗೆ ಮಗಳ ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿಯಾಗಿದ್ದರು. ಈಗ ಮಗಳ ಮದುವೆ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.

ಮದುವೆ ಅಂದ್ಮೇಲೆ ಶಾಸ್ತ್ರಗಳು ಪ್ರಮುಖವಾಗಿರುತ್ತೆ. ಮದುವೆಯ ಆಕರ್ಷಣೆಯಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ ಮತ್ತು ಸಂಗೀತಾ ಕಾರ್ಯಕ್ರಗಳು ಪ್ರಮುಖವಾಗಿರುತ್ತವೆ. ರವಿಮಾಮನ ಮಗಳ ಮದುವೆಯಲ್ಲು ಮದುವೆ ಶಾಸ್ತ್ರಗಳು ಜೋರಾಗೆ ನಡೆಯುತ್ತಿದೆ.

ಈಗಾಗಲೆ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದೆ. ಕ್ರೇಜಿ ಸ್ಟಾರ್ ಮಗಳ ಮದುವೆ ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಸಹ ಭಾಗಿಯಾಗಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ಮಸ್ತ್ ಹೆಜ್ಜೆ ಹಾಕಿದ್ದಾರೆ ಸಂಭ್ರಮಿಸಿದ್ದಾರೆ. ಮುಂದೆ ಓದಿ..

ಅರಿಶಿಣ ಶಾಸ್ತ್ರದಲ್ಲಿ ಗೀತಾಂಜಲಿ

ಅರಿಶಿಣ ಶಾಸ್ತ್ರದಲ್ಲಿ ಗೀತಾಂಜಲಿ

ರವಿಚಂದ್ರನ್ ಮಗಳು ಗೀತಾಂಜಲಿ ಅವರ ಅರಿಶಿಣ ಶಾಸ್ತ್ರ ತುಂಬಾ ಜೋರಾಗಿ ಮಾಡಲಾಗಿದೆ. ಶಾಸ್ತ್ರಗಳಲ್ಲಿ ಇಡೀ ರವಿಚಂದ್ರನ್ ಕುಟುಂಬ ಭಾಗಿಯಾಗಿತ್ತು. ರವಿಚಂದ್ರನ್ ಮತ್ತು ಪತ್ನಿ ಸುಮತಿ ಇಬ್ಬರ ಸಂತಸಕ್ಕೆ ಪಾರವೆ ಇರಲಿಲ್ಲ. ಸಂತಸ ಸಡಗರದಿಂದ ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ರವಿಮಾಮನ ಮುಖದಲ್ಲಿ ಮಗಳ ಮದುವೆ ಸಂತಸ ಎದ್ದು ಕಾಣುತ್ತಿದೆ.

ಮೆಹಂದಿ ಶಾಸ್ತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

ಮೆಹಂದಿ ಶಾಸ್ತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

ಗೀತಾಂಜಲಿ ಮೆಹಂದಿ ಶಾಸ್ತ್ರದಲ್ಲಿ ಅನೇಕ ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿಯಾಗಿದ್ರು. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಅನುಪ್ರಭಕರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಗೀತಾಂಜಲಿ ಗೋಲ್ಡನ್ ಮತ್ತು ಬ್ಲೂ ಬಣ್ಣದ ಕಾಂಬಿನೇಶನ್ ನ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಪ್ರತಿಯೊಂದು ಶಾಸ್ತರವನ್ನು ಗೀತಾಂಜಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಸಂಗೀತಾ ಕಾರ್ಯಕ್ರಮದಲ್ಲಿ ಭರ್ಜರಿ ಡಾನ್ಸ್

ಸಂಗೀತಾ ಕಾರ್ಯಕ್ರಮದಲ್ಲಿ ಭರ್ಜರಿ ಡಾನ್ಸ್

ಗೀತಾಂಜಲಿ ಸಂಗೀತಾ ಕಾರ್ಯಕ್ರಮದಲ್ಲಿ ಇಡೀ ಕುಟುಂಬ ಮಸ್ತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ರವಿಚಂದ್ರನ್ ಪತ್ನಿ ಮೊದಲ ಬಾರಿಗೆ ಸಖತ್ ಸ್ಟೆಪ್ ಹಾಕಿ ಮಗಳ ಮದುವೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ರವಿಚಂದ್ರನ್ ಇಬ್ಬರು ಗಂಡು ಮಕ್ಕಳಾದ ವಿಕ್ರಮ್ ಮತ್ತು ಮನೋರಂಜನ್ ಕೂಡ ಸಹೋದರಿಯ ಮದುವೆಯಲ್ಲಿ ಸಖತ್ ಸ್ಟೆಪ್ ಹಾಕಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ರವಿಚಂದ್ರನ್ ಕನಸಿನಂತೆ ಮದುವೆ

ರವಿಚಂದ್ರನ್ ಕನಸಿನಂತೆ ಮದುವೆ

ರವಿಚಂದ್ರನ್ ಮಗಳ ಮದುವೆ ಅವರ ಕನಸಿನಂತೆ ನಡೆಯುತ್ತಿದೆ. ರವಿಚಂದ್ರನ್ ಅಂದ್ರೇನೆ ಹಾಗೆ. ಏನೇ ಮಾಡಿದ್ರು ವಿಶೇಷ. ಮಗಳ ಅಂದ್ಮೇಲೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದ್ದಾರೆ ಕನಸುಗಾರ. ಹೌದು, ಆರತಕ್ಷತೆಗಾಗಿ ಗಾಜಿನ ವೇದಿಕೆಯನ್ನ ಸಿದ್ಧ ಮಾಡುತ್ತಿದ್ದಾರೆ. ಇದು ಈ ಮದುವೆ ಪ್ರಮುಖ ಆಕರ್ಷಣೆಯಾಗಿರಲಿದೆಯಂತೆ. ಬಹುಶಃ ಮದುವೆ ಆರತಕ್ಷತೆಗಾಗಿ ಗಾಜಿನ ವೇದಿಕೆ ನಿರ್ಮಿಸುತ್ತಿರುವುದು ಕೂಡ ಇದೇ ಮೊದಲು ಎನ್ನಲಾಗಿದೆ.

ಕಾಸ್ಟ್ಯೂಮ್ ಡಿಸೈನ್ ಕೂಡ ಕ್ರೇಜಿಸ್ಟಾರ್

ಕಾಸ್ಟ್ಯೂಮ್ ಡಿಸೈನ್ ಕೂಡ ಕ್ರೇಜಿಸ್ಟಾರ್

ರವಿಚಂದ್ರನ್ ಸಿನಿಮಾಗಳಲ್ಲಿ ಅವರ ಸೆಟ್ ಎಷ್ಟು ಕಲರ್ ಫುಲ್ ಆಗಿರುತ್ತೋ ಅಷ್ಟೇ ಕಲರ್ ಫುಲ್ ಆಗಿ ಮದುವೆ ಮನೆ ಶೃಂಗಾರವಾಗಿರುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಗಳ ಮದುವೆ ಕಾಸ್ಟ್ಯೂಮ್ ಕೂಡ ರವಿಚಂದ್ರನ್ ಅವರೇ ಆಯ್ಕೆ ಮಾಡಿದ್ದಾರಂತೆ. ಮಗಳಿಗಾಗಿ ಗ್ರೀನ್ ಕಲರ್ ಗೌನ್ ಮತ್ತು ಬ್ಲ್ಯಾಕ್ ಕಲರ್ ಗೌನ್ ಮತ್ತು ಬೆಳಗ್ಗೆ ಸೀರೆ ತಯಾರಾಗಿದೆಯಂತೆ. ರವಿಚಂದ್ರನ್ ಆರತಕ್ಷತೆಗೆ ಸೂಟ್ ಮತ್ತು ಮುಹೂರ್ತಕ್ಕೆ ಪಂಚೆ ತೊಡಲಿದ್ದಾರಂತೆ.

ಅರಮನೆ ಮೈದಾನದಲ್ಲಿ ಮದುವೆ

ಅರಮನೆ ಮೈದಾನದಲ್ಲಿ ಮದುವೆ

ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯ ಗಣ್ಯರಿಗೂ ಮಗಳ ಮದುವೆ ಆಮಂತ್ರಣ ನೀಡಿದ್ದಾರೆ. ಮದುವೆಗೆ ಇನ್ನೇನು ಒಂದೇ ದಿನ ಭಾಕಿ ಇದೆ. ಅರಮನೆ ಮೈದಾನದಲ್ಲಿ ಕನಸುಗಾರನ ಕನಸಿನಂತೆ ಅದ್ಧೂರಿಯಾಗಿ ಮಗಳ ಮದುವೆ ನಡೆಯಲಿದೆ. ಈಗಾಗಲೆ ಮಗಳ ಮದುವೆಗೆ ಅದ್ದೂರಿ ವೇದಿಕೆ ಸಿದ್ದವಾಗಿದೆ.

More from Filmibeat

English summary
Kannada actor Ravichandran daughter wedding celebration. Arishina, Mehndi and Sangeet ceremony held at the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X