ಯಾರ್ ಯಾರಿಗೆ ತಲುಪಿದೆ ಕ್ರೇಜಿಸ್ಟಾರ್ ಪುತ್ರಿಯ ಮದುವೆ ಆಮಂತ್ರಣ

Recommended Video

ಕನ್ನಡದ ಸ್ಟಾರ್ ಗಳನ್ನ ಮಗಳ ಮದುವೆಗೆ ಆಹ್ವಾನಿಸಿದ ನಟ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆ ಇದೇ ತಿಂಗಳು ನಡೆಯಲಿದೆ. ಮೇ 28 ಮತ್ತು ಮೇ 29ರಂದು ಗೀತಾಂಜಲಿ ಉದ್ಯಮಿ ಅಜಯ್ ಕೈಹಿಡಿಯಲಿದ್ದಾರೆ. ಹಾಗಾಗಿ, ಮಗಳ ಮದುವೆಗಾಗಿ ಕನ್ನಡ ಸಿನಿಮಾ ತಾರೆಯರನ್ನ ಆಹ್ವಾನಿಸುತ್ತಿದ್ದಾರೆ.

3ಡಿ ಸ್ಟೈಲ್ ನಲ್ಲಿ ಮಗಳ ಮದುವೆಯ ಆಮಂತ್ರಣ ಪತ್ರಿಕೆ ಸಿದ್ಧ ಮಾಡಿದ್ದು, ದುಬಾರಿ ವೆಚ್ಚದಲ್ಲಿ ಮಾಡಿಸಲಾಗಿದೆಯಂತೆ. ಈಗಾಗಲೇ ಸ್ಟಾರ್ ನಟರ ಮನೆಗಳಿಗೆ ತೆರಳಿ ಮದುವೆಯ ಕರೆಯೋಲೆ ನೀಡಿ ಬರುತ್ತಿದ್ದಾರೆ ರವಿಚಂದ್ರನ್.

ಕನಸುಗಾರನ ಮನೆಯಲ್ಲಿ ಇದು ಚೊಚ್ಚಲ ಮದುವೆಯಾಗಿದ್ದು, ಸಂಭ್ರಮ ಜೋರಾಗಿದೆ. ಅಷ್ಟಕ್ಕೂ, ರವಿ ಸರ್ ಮಗಳ ಮದುವೆಗೆ ಯಾವೆಲ್ಲಾ ಸ್ಟಾರ್ ಗಳನ್ನ ಆಹ್ವಾನಿಸಿದ್ದಾರೆ ಎಂಬುದನ್ನ ಫೋಟೋಗಳ ಸಮೇತ ನೋಡಿ. ಮುಂದೆ ಓದಿ....

ಗಣೇಶ್ ದಂಪತಿಗೆ ಆಹ್ವಾನ

ಗಣೇಶ್ ದಂಪತಿಗೆ ಆಹ್ವಾನ

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ರವಿಚಂದ್ರನ್ ಮಗಳ ಮದುವೆಯ ಆಹ್ವಾನ ನೀಡಲಾಗಿದೆ. ರವಿಚಂದ್ರನ್ ಮತ್ತು ಪತ್ನಿ ಸುಮತಿ ಮತ್ತು ಮಗ ವಿಕ್ರಂ ಅವರು ಗಣೇಶ್ ಮನೆಗೆ ಖುದ್ದು ಹೋಗಿ ಆಮಂತ್ರಣ ನೀಡಿ ಬಂದಿದ್ದಾರೆ.

ಚಿರು ಸರ್ಜಾ ಕುಟುಂಬ

ಚಿರು ಸರ್ಜಾ ಕುಟುಂಬ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಗೆ ರವಿಚಂದ್ರನ್ ಮಗಳ ಮದುವೆ ಕರೆಯೋಲೆ ಬಂದಿದೆ. ಚಿರು ಸರ್ಜಾ, ಮೇಘನಾ ಮತ್ತು ಧ್ರುವ ಸರ್ಜಾ ಅವರನ್ನ ಭೇಟಿ ಮಾಡಿದ ಕ್ರೇಜಿಸ್ಟಾರ್ ಮಗಳ ಮದುವೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಜಗ್ಗೇಶ್ ಮನೆಗೆ ರವಿ ಸರ್

ಜಗ್ಗೇಶ್ ಮನೆಗೆ ರವಿ ಸರ್

ಈ ಹಿಂದೆಯೇ ತಿಳಿದಿರುವಂತೆ ನಟ ಜಗ್ಗೇಶ್ ಮನೆಗೂ ರವಿಚಂದ್ರನ್ ಭೇಟಿ ನೀಡಿ ಆಹ್ವಾನ ಮಾಡಿ ಬಂದಿದ್ದಾರೆ. ಈ ವೇಳೆ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಅವರ ಕೂಡ ಇದ್ದರು.

ಸುಧಾರಾಣಿಗೂ ಕರೆಯೋಲೆ

ಸುಧಾರಾಣಿಗೂ ಕರೆಯೋಲೆ

ಕನ್ನಡದ ಖ್ಯಾತ ನಟಿ ಸುಧಾರಾಣಿ ಕುಟುಂಬಕ್ಕೆ ರವಿಚಂದ್ರನ್ ಮಗಳ ಮದುವೆ ಆಮಂತ್ರಣ ನೀಡಲಾಗಿದೆ. ಈ ವೇಳೆ ಸುಧಾರಾಣಿ ಮತ್ತು ಮಗಳ ಜೊತೆ ರವಿಚಂದ್ರನ್ ಫೋಟೋಗೆ ಪೋಸ್ ನೀಡಿದ್ದಾರೆ.

ನಿರ್ದೇಶಕ ರಘುರಾಮ್

ನಿರ್ದೇಶಕ ರಘುರಾಮ್

ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಹಾಗೂ ನಟ, ನಿರ್ದೇಶಕ ರಘುರಾಮ್ ಅವರಿಗೂ ರವಿಚಂದ್ರನ್ ಮಗಳ ಮದುವೆ ಆಹ್ವಾನಿಸಿದ್ದಾರೆ. ಇನ್ನು ಅನೇಕರಿಗೆ ರವಿಚಂದ್ರನ್ ಮದುವೆ ಅಮಂತ್ರಣ ನೀಡಿದ್ದಾರೆ. ಆದ್ರೆ, ಸದ್ಯಕ್ಕೆ ಇವರ ಫೋಟೋಗಳು ಮಾತ್ರ ಬಹಿರಂಗವಾಗಿದೆ.

More from Filmibeat

English summary
Crazy star Ravichandran daughter geethanjali marriage will schedule on may 28th and 29th in bangalore. ravichandran has invites ganesh, jaggesh, chiru sarja family and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X