For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿಗಾಗಿ ಸೀರೆಗಳ ವಿನ್ಯಾಸ ಮಾಡಿದ ರವಿಚಂದ್ರನ್!

  By Bhagya.s
  |

  ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ತೆರೆಗೆ ಬಂದು ಹಲವು ದಿನಗಳು ಕಳೆದಿವೆ. ಹಲವು ದಿನಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ರವಿಬೋಪಣ್ಣ ಆಗಿ ಎಂಟ್ರಿ ಕೊಟ್ಟಿದ್ದಾರೆ. ರವಿಚಂದ್ರನ್ ಅಭಿನಯದ ಈ ಸಿನಿಮಾ ರಿಲೀಸ್ ಆಗಿದೆ.

  ಆಗಸ್ಟ್ 12ಕ್ಕೆ ರವಿಬೋಪಣ್ಣ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ರವಿಚಂದ್ರನ್ ತಮ್ಮದೇ ಆದ ಶೈಲಿಯಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ರವಿಮಾಮನ ಲುಕ್ ಕೂಡ ವಿಭಿನ್ನವಾಗಿದೆ.

  ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಒಂದು ಕಾವ್ಯಾ ಶೆಟ್ಟಿ ಮತ್ತೊಂದು ರಾಧಿಕಾ ಕುಮಾರಸ್ವಾಮಿ. ಈ ಇಬ್ಬರು ನಾಯಕಿಯರ ಪಾತ್ರಗಳು ಚಿತ್ರದ ಟ್ರೈಲರ್‌ನಲ್ಲಿ ಹೈಲೈಟ್ ಆಗಿವೆ. ವಿಶೇಷ ಎಂದರೆ, ನಟಿ ರಾಧಿಕ ಕುಮಾರಸ್ವಾಮಿ ಅವರ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಗಳ ಸೀಕ್ರೆಟ್ ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ.

  ರವಿ ಬೋಪಣ್ಣ ಪಕ್ಕ ರವಿಚಂದ್ರನ್ ಸಿನಿಮಾ!

  ರವಿ ಬೋಪಣ್ಣ ಪಕ್ಕ ರವಿಚಂದ್ರನ್ ಸಿನಿಮಾ!

  ನಟ ರವಿಂಚಂದ್ರನ್ ಸಿನಿಮಾಗಳು ಅಂದ್ರೆನೇ ಬೇರೆ ರೀತಿಯಲ್ಲಿ ಗಮನ ಸೆಳೆಯುತ್ತವೆ. ಮೊದಲಿನಿಂದಲೂ ರವಿಮಾಮ ತಮ್ಮದೇ ಸೂತ್ರದಲ್ಲಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಅವ್ರ ಸಿನಿಮಾಗಳು ತೆರೆಗೆಯ ಮೇಲೆ ತುಂಬಾನೆ ಕಲರ್ ಫುಲ್. ಒಂದು ಸೀನ್‌ಗೆ ತಕ್ಕನಾದ ಪ್ರಾಪರ್ಟಿಗಳು, ಮತ್ತು ಕಾಸ್ಟ್ಯೂಂ ಸಿಕ್ಕಾಪಟ್ಟೆ ಹೈಲೈಟ್ ಆಗಿಸುತ್ತವೆ. ರವಿಬೋಪಣ್ಣ ಚಿತ್ರದಲ್ಲೂ ಕೂಡ ಇದು ಇದೆ. ಇನ್ನು ಕಾಸ್ಟೂಂ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಧರಿಸದ ಬಣ್ಣದ ಸೀರೆಗಳನ್ನು ನೀವು ನೋಡಿದ್ದೀರಾ, ಟ್ರೈಲರ್‌ನಲ್ಲೂ ರಾಧಿಕಾ ಸೀರೆಯಲ್ಲಿ ಮಿಂಚಿದ್ದಾರೆ.

  ಸೀರೆ ವಿನ್ಯಾಸ ಮಾಡಿದ ರವಿಚಂದ್ರನ್!

  ಸೀರೆ ವಿನ್ಯಾಸ ಮಾಡಿದ ರವಿಚಂದ್ರನ್!

  ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಉಟ್ಟ ಸೀರೆಗಳ ಬಗ್ಗೆ ಹೇಳೋಕೆ ವಿಶೇಷ ಕಾರಣವಿದೆ. ಈ ಚಿತ್ರದಲ್ಲಿ ಅವರು ತೊಟ್ಟ ಸೀರೆಗಳನ್ನು ರವಿಚಂದ್ರನ್ ಅವರೆ ಡಿಸೈನ್ ಮಾಡಿದ್ದಾರಂತೆ. ಇದನ್ನು ಏಷಿಯಾನೆಟ್ ಸಂದರ್ಶನದಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. "ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ತೊಟ್ಟ ಎಲ್ಲಾ ಸೀರೆಗಳನ್ನು ನಾನೇ ವಿನ್ಯಾಸ ಮಾಡಿದ್ದೇನೆ. ಒಂದು ಸೀರೆಯನ್ನು ಬಿಟ್ಟರೆ ಎಲ್ಲಾ ಸೀರೆಗಳನ್ನು ನಾನೆ ಡಿಸೈನ್ ಮಾಡಿದ್ದೇನೆ. ಆ ಸೀರೆಗಳ ಲುಕ್ಕೇ ಬೇರೆ. ನಾನು ಸೀರೆಗಳನ್ನು ಡಿಸೈನ್ ಮಾಡಲು ಹೊರಟಿದ್ದೆ. ಹೆಣ್ಣು ಮಕ್ಕಳಿಗೆ ನಾನು ಡಿಸೈನ್ ಮಾಡಿರೋ ಸೀರೆಗಳನ್ನು ಕೊಡಬೇಕು ಎಂದು ಕೊಂಡು ಆಗ ಡಿಸೈನ್ ಮಾಡಿದ್ದು".

  'ರವಿ ಬೋಪಣ್ಣ'ನಿಗೆ ಮಿಶ್ರ ಪ್ರಕ್ರಿಯೆ!

  'ರವಿ ಬೋಪಣ್ಣ'ನಿಗೆ ಮಿಶ್ರ ಪ್ರಕ್ರಿಯೆ!

  'ರವಿ ಬೋಪಣ್ಣ' ಮತ್ತೊಂದು ಪ್ರೇಮಲೋಕ ಎಂದು ಕ್ರೇಜಿಸ್ಟಾರ್ ಹೇಳುತ್ತಿದ್ದಾರೆ ರವಿಚಂದ್ರನ್. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿತ್ತು. ಈ ಸಿನಿಮಾ ಆಗಸ್ಟ್ 12ಕ್ಕೆ ರಿಲೀಸ್ ಆಗಿದೆ. ರಿಲೀಸ್ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದರೂ, ರವಿಚಂದ್ರನ್ ಶೈಲಿಯ ಹೂವು, ಪ್ರೇಮ, ಶೃಂಗಾರ ಎಲ್ಲವೂ ಇದೆ.

  ಸುದೀಪ್ ಲಾಯರ್ ಪಾತ್ರ!

  ಸುದೀಪ್ ಲಾಯರ್ ಪಾತ್ರ!

  ನಟ ಸುದೀಪ್ ತಮ್ಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಾತ್ರ ಅಭಿನಯಿಸುವುದಲ್ಲದೇ, ಅತಿಥಿ ಪಾತ್ರಗಳಲ್ಲೂ ಕೂಡ ಮಿಂಚುತ್ತಾರೆ. ಸದ್ಯ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇರುವ ಸಿನಿಮಾ ಅಂದರೆ ಅದು 'ರವಿ ಬೋಪಣ್ಣ'. ಈ ಚಿತ್ರದಲ್ಲಿ ನಟ ಸುದೀಪ್ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಟ್ರೈರಲ್‌ನಲ್ಲಿ ಅವರ ಪಾತ್ರದ ತುಣುಕನ್ನೂ ಕೂಡ ಪರಿಚಯ ಮಾಡಲಾಗಿದೆ. ಕರಿ ಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ ನಟ ಸುದೀಪ್.

  English summary
  Ravichandran Designed Sarees For Radhika Kumaraswamy In Ravi Bopanna Movie, Know More
  Saturday, August 13, 2022, 19:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X