»   » ಸ್ಯಾಂಡಲ್ ವುಡ್ ನಲ್ಲಿ ಹೊಸ ರಣಧೀರನ ಉದಯ

ಸ್ಯಾಂಡಲ್ ವುಡ್ ನಲ್ಲಿ ಹೊಸ ರಣಧೀರನ ಉದಯ

Posted By: ಜೀವನರಸಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡದ ಕ್ರೇಜಿಸ್ಟಾರ್ ರವಿಮಾಮನ ಕುಟುಂಬದ ಮೂರನೇ ತಲೆಮಾರು ಗಾಂಧಿನಗರಕ್ಕೆ ಎಂಟ್ರಿಕೊಡ್ತಿರೋ ಅಭೂತಪೂರ್ವ ದಿನವನ್ನ ನೋಡೋಕೆ ಕನ್ನಡ ಚಿತ್ರರಂಗ ಕಾದುಕುಳಿತಿದೆ. 80ರ ದಶಕದಲ್ಲಿ 'ಶಾಂತಿಕ್ರಾಂತಿ'ಯಂತಹಾ ಸಿನಿಮಾ ಮೂಲಕ ಶ್ರೀಮಂತಿಕೆಯಲ್ಲಿ ತೆಲುಗು, ತಮಿಳಿಗೆ ಮಾದರಿಯಾಗಿದ್ದ ಕ್ರೇಜಿಸ್ಟಾರ್ ಮತ್ತೆ ಫಾರ್ಮ್ಗೆ ಬರ್ತಿದ್ದಾರೆ.

  ರವಿಮಾಮನ ಫಾರ್ಮ್ ಏನಿದ್ದರೂ ಸಿನಿಮಾ. ತನ್ನ ಕಲ್ಪನೆಯ ಕನಸುಗಳನ್ನ ಕನಸುಗಾರ ಬಿತ್ತಿ ಬೆಳೆಯೋದೇ ಇಲ್ಲಿ. ಒಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಸಿನಿಮಾ ರಿಲೀಸಾಗುತ್ತೆ ಅಂದ್ರೆ ತೆಲುಗು ತಮಿಳಿನ ದೊಡ್ಡ ದೊಡ್ಡ ನಿರ್ದೇಶಕರು ಚಿತ್ರದ ಒಂದು ರೀಲನ್ನು ತರಿಸಿಕೊಂಡು ನೋಡೋಕೆ ಕುಳಿತುಬಿಡ್ತಿದ್ರಂತೆ. ನಮ್ಮ ಸಿನಿಮಾವನ್ನ ಈ ತರಹಾ ರಿಚ್ಚಾಗಿ ಹೇಗೆ ತರಬಹುದು ಅಂತ ಯೋಚಿಸ್ತಿದ್ರಂತೆ. ಸಿನಿಮಾ ಅಂದ್ರೇ ಕಣ್ಣಿಗೆ ಹಬ್ಬ ಅಂತ ತೋರಿಸಿಕೊಟ್ಟ ಹಠವಾದಿ ರವಿಚಂದ್ರನ್. [ಪ್ರೇಮಲೋಕದಲ್ಲಿ ರಣಧೀರನಾಗಿ ರವಿಚಂದ್ರನ್ ಪುತ್ರ]

  ಕನ್ನಡದ ಮಲ್ಲನ ಹೊಸ ಕನಸು 'ರಣಧೀರ' ಪ್ರೇಮಲೋಕದಲ್ಲಿ ಚಿತ್ರದ ಮುಹೂರ್ತ ಇವತ್ತು ಸಂಜೆ 6 ಗಂಟೆಗೆ ನೈಸ್ ರಸ್ತೆಯಲ್ಲಿ ಹಾಕಲಾಗಿರೋ ಲಕ್ಷಗಟ್ಟಲೇ ಖರ್ಚು ಮಾಡಿರೋ ಸೆಟ್ ನಲ್ಲಿ ನಡೆಯುತ್ತೆ. ಇಲ್ಲಿ ತೆಲುಗು, ತಮಿಳು ತಾರೆಗಳ ರಂಗು ತುಂಬಿರುತ್ತೆ. ಹಾಗಾದ್ರೆ ಯಾರೆಲ್ಲ ರವಿಮಾಮನ ಕನಸು ಸೆಟ್ಟೇರೋದನ್ನ ನೋಡೋಕೆ ಬರ್ತಾರೆ? ಏನಿರುತ್ತೆ ವಿಶೇಷ ಅನ್ನೋ ಒಂದು ಡೀಟೈಲ್ಸ್ ಇಲ್ಲಿದೆ.

  ಸಿಪಾಯಿಗಾಗಿ ಚಿರಂಜೀವಿ ಸ್ನೇಹಿತ

  ಸಿಪಾಯಿ ಸಿನಿಮಾದಲ್ಲಿ ರವಿಚಂದ್ರನ್ ಗೆ ಚಿರಂಜೀವಿ ಸ್ನೇಹಿತನಾಗಿದ್ದ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ರವಿಚಂದ್ರನ್ ಹಳೆಯ ಸ್ನೇಹಿತ ಹಾಗಾಗಿ ಮುಹೂರ್ತಕ್ಕೆ ಚಿರಂಜೀವಿ ಬರೋ ಸಾಧ್ಯತೆಯಿದೆ.

  ಅಲ್ಲು ಅರ್ಜುನ್,ರಾಮ್ ಚರಣ್ ಗೂ ಆಹ್ವಾನ

  ಚಿರು ಸಂಬಂಧಿ ಅಲ್ಲು ಅರ್ಜುನ್ ಗೆ ಕೂಡ ರವಿಮಾಮ ಆಹ್ವಾನ ನೀಡಿದ್ದು, ಚಿರು ಜೊತೆ ಅಲ್ಲೂ ಅರ್ಜುನ್ ಬಂದ್ರೂ ಅಚ್ಚರಿಯಿಲ್ಲ. ಅಪ್ಪನ ಜೊತೆ ಆಹ್ವಾನದ ಮೇರೆಗೆ ಶೂಟಿಂಗ್ ಇಲ್ಲದಿದ್ರೆ ಬೆಂಗಳೂರು ಕಡೆಗೆ 'ಮಗಧೀರ' ಬಂದ್ರೂ ಬರಬಹುದು.

  ಮಹೇಶ್ ಬಾಬು ಫ್ಯಾಮಿಲಿ ಬರುತ್ತಾ?

  ಹಳೆಯ ಸ್ನೇಹ ಒಡನಾಟದಲ್ಲಿ ಮಹೇಶ್ ಬಾಬು ತಂದೆ ಕೃಷ್ಣ ಮತ್ತು ಮಹೇಶ್ ಬಾಬುರಿಗೂ ಕನ್ನಡದ ಕನಸುಗಾರ ಆಹ್ವಾನ ನೀಡಿದ್ದು ರಣಧೀರನ ಪ್ರೇಮಲೋಕದ ರಂಗು ನೋಡೋಕೆ ತೆಲುಗಿನ ಪ್ರಿನ್ಸ್ ಬರ್ತಾರ ಅಥವಾ ಅವ್ರ ತಂದೆ ಕೃಷ್ಣ ಬರ್ಬಹುದಾ ಅನ್ನೋ ಪ್ರಶ್ನೆಯಿದೆ. ಬಂದ್ರೆ ಅಭಿಮಾನಿಗಳ ಕಣ್ಣಿಗೆ ಹಬ್ಬ.

  ಕಾಲಿವುಡ್ ಸ್ಟಾರ್ ಗಳಿಗೂ ಆಹ್ವಾನ

  ಮಗನ ಚಿತ್ರದ ಮುಹೂರ್ತಕ್ಕೆ ಕಾಲಿವುಡ್ ಸ್ಟಾರ್ ಗಳನ್ನೂ ಭೇಟಿ ಮಾಡಿ ಆಹ್ವಾನ ಕೊಟ್ಟಿರೋ ಕ್ರೇಜಿಸ್ಟಾರ್ ಬರ್ತಡೇ ದಿನ ತಿಮ್ಮಪ್ಪನ ದರ್ಶನ ಪಡೆದು ತಿರುಪತಿಯಿಂದ ಹಿಂದಿರುಗ್ತಿದ್ದಾರೆ.

  ವಿಜಯಕಾಂತ್ ಗೆ ಆಹ್ವಾನ

  ಕಾಲಿವುಡ್ ನಲ್ಲಿ ರವಿಮಾಮನ ಸ್ನೇಹಿತರಿಗೆ ಬರವಿಲ್ಲ. ತಮಿಳು ನಟ ವಿಜಯ್ ಕಾಂತ್ ಗೆ ಕ್ರೇಜಿಸ್ಟಾರ್ ಮಗನ ಮುಹೂರ್ತಕ್ಕೆ ಬರೋಕೆ ಆಹ್ವಾನ ನೀಡಿದ್ದಾರಂತೆ. ತಮಿಳು ಸ್ಟಾರ್ ಗಳು ಬಂದ್ರೆ ಇಂದು ರಾತ್ರಿ ಮತ್ತಷ್ಟು ರಂಗೇರಲಿದೆ.

  ಶರತ್ ಕುಮಾರ್, ವಿವೇಕ್ ಮುಹೂರ್ತಕ್ಕೆ

  ಕಾಲಿವುಡ್ ನಟ ಶರತ್ ಕುಮಾರ್ ಕಾಮಿಡಿಯನ್ ವಿವೇಕ್ ಗೆ ಆಹ್ವಾನವಿದ್ದು ತಮಿಳು ನಾಡಿನ ಕೆಲವು ನಟ ನಟಿಯರು ರವಿಮಾಮನ ಪುತ್ರನ ಹೊಸ ಸಿನಿಮಾಗೆ ಸಾಕ್ಷಿಯಾಗೋದು ಖಂಡಿತ ಅಂತಿದೆ ಗಾಂಧಿನಗರ.

  ಪುನೀತ್, ಶಿವಣ್ಣ, ರಾಘಣ್ಣ

  ಕನ್ನಡ ಚಿತ್ರರಂಗದ ಹೆಚ್ಚಿನ ನಟ ನಟಿಯರು ನೈಸ್ ರಸ್ತೆಯಲ್ಲಿ 'ಮಲ್ಲ'ನ ಮಗನ ಸಿನಿಮಾಗೆ ಸಾಥ್ ಕೊಡಲಿದ್ದಾರೆ. ಅದ್ರಲ್ಲೂ ರವಿಚಂದ್ರನ್ ಗೆ ಒಳ್ಳೆಯ ಸ್ನೇಹಿತರಾಗಿರೋ ಶಿವಣ್ಣ, ಜೊತೆಗೆ ರಾಘವೇಂದ್ರರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಕೂಡ ಬರ್ತಾರೆ ಅನ್ನೋ ಮಾತು ಕೇಳಿಬರ್ತಿದೆ

  ಚಾಲೆಂಜಿಂಗ್ ಸ್ಟಾರ್ ಇರ್ತಾರೆ, ಕಿಚ್ಚ ಇಲ್ಲ

  ರವಿಚಂದ್ರನ್ ಅವರನ್ನು ಗೌರವಿಸೋ ದರ್ಶನ್ ಕೂಡ ಮುಹೂರ್ತದಲ್ಲಿ ಇರ್ತಾರೆ. ಆದರೆ ಕಿಚ್ಚ ವಿದೇಶದಲ್ಲಿರೋದ್ರಿಂದ ಬರೋದು ಅನುಮಾನ ಅನ್ನೋ ಸುದ್ದಿ ಇದೆ.

  ಹೆಚ್ಚಿನ ಸ್ಯಾಂಡಲ್ ವುಡ್ ತಾರೆಯರು

  ಕನ್ನಡ ಚಿತ್ರರಂಗದ ತಾರೆಯರ ಸಮಾಗಮ ಇವತ್ತು ಸಂಜೆ ನೈಸ್ ರಸ್ತೆಯಲ್ಲಾಗಲಿದ್ದು ರವಿಮಾಮಮನ ಕನಸುಗಳ ಬುತ್ತಿ ಬಿಚ್ಚಲಿದೆ. ಎನಿವೇ ಹ್ಯಾಪಿ ಬರ್ತಡೇ ಅಂಡ್ ಆಲ್ ದ ಬೆಸ್ಟ್ ರವಿಮಾಮ.

  English summary
  A handsome hunk with good height and looks R Manoranjan first son of dream merchant of Kannada cinema V Ravichandran was launched to silver screen via 'Ranadheera', which is touted be a romantic film is likely to recreate the magic of Ravichandran's early movie. 
 

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more