For Quick Alerts
  ALLOW NOTIFICATIONS  
  For Daily Alerts

  ಪತ್ನಿ 'ಸಂಗೀತಾ' ಬಗ್ಗೆ 'ಮನೋರಂಜನ್' ಪ್ರೀತಿಯ ಪೋಸ್ಟ್!

  |

  ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಸ್ವತ: ರವಿಚಂದ್ರನ್ ಪುತ್ರನ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.

  ಎರಡು ದಿನ ಕ್ರೇಜಿ ಪುತ್ರ ಮನೋರಂಜನ್ ಮದುವೆ ನಡೆಯುತ್ತಿದೆ. ಆಗಸ್ಟ್ 20ರಂದು ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಆಗಸ್ಟ್ 21 ಮನೋರಂಜನ್ ರವಿಚಂದ್ರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾರೊಂದಿಗೆ ಹೊಸ ಜೀವನ ಆರಂಭ ಆಗಿದೆ.

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರೇಜಿ ಪುತ್ರ ಮನೋರಂಜನ್ ರವಿಚಂದ್ರನ್!ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರೇಜಿ ಪುತ್ರ ಮನೋರಂಜನ್ ರವಿಚಂದ್ರನ್!

  ಆಗಸ್ಟ್ 20 ನಡಿದಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್, ಅಕುಲ್ ಬಾಲಾಜಿ, ರಾಘವೇಂದ್ರ ರಾಜ್‌ಕುಮಾರ್, ಹಂಸಲೇಖ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ಇಂದು ಇರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಮನೋರಂಜನ್ ಹಾಗೂ ಸಂಗೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಪತ್ನಿ ಬಗ್ಗೆ ಮನೋರಂಜನ್ ಪೋಸ್ಟ್!

  ಪತ್ನಿ ಬಗ್ಗೆ ಮನೋರಂಜನ್ ಪೋಸ್ಟ್!

  ನಟ ಮನೋರಂಜನ್ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಮನೋರಂಜನ್ ಟ್ವಿಟ್ಟರ್‌ನಲ್ಲಿ ಮದುವೆ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗ ತಮ್ಮ ಪತ್ನಿ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೊ ಹಂಚಿಕೊಂಡ ಮನೋರಂಜನ್, "ನಮ್ಮ ಕಥೆ ಈಗಷ್ಟೇ ಪ್ರಾರಂಭವಾಗಿದೆ... ಪ್ರೀತಿ, ನಗು, ಸಂತಸ ಇನ್ನು ಮುಂದೆ ಎಂದೆಂದಿಗೂ" ಎಂದು ಬರೆದುಕೊಂಡಿದ್ದಾರೆ.

  ಮನು- ಸಂಗೀತಾ ಅದ್ಧೂರಿ ಆರತಕ್ಷತೆ: ಶಿವಣ್ಣ, ರಾಘಣ್ಣ, ಖುಷ್ಬೂ ಶುಭ ಹಾರೈಕೆಮನು- ಸಂಗೀತಾ ಅದ್ಧೂರಿ ಆರತಕ್ಷತೆ: ಶಿವಣ್ಣ, ರಾಘಣ್ಣ, ಖುಷ್ಬೂ ಶುಭ ಹಾರೈಕೆ

  ಮದುವೆಯಾದ ಮನೋರಂಜನ್!

  ಮದುವೆಯಾದ ಮನೋರಂಜನ್!

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್ ಮನೋರಂಜನ್ ಮನೆಯಲ್ಲಿ ಹುಡುಕಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ. ಕೆಲವು ದಿನಗಳ ಹಿಂದೆನೇ ರವಿಚಂದ್ರನ್ ದಂಪತಿ ಮನೋರಂಜನ್‌ಗೆ ಹುಡುಗಿ ಹುಡುಕಿದ್ದರು. ಕಳೆದ ವರ್ಷವೇ ಮನೋರಂಜನ್ ಮದುವೆ ನಡೆಯುತ್ತೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಹೆಚ್ಚು ಕಡಿಮೆ ಒಂದು ವರ್ಷ ತಡವಾಗಿ ಮದುವೆಯಾಗಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗಿದ್ದರೂ, ಒಬ್ಬರನ್ನೊಬ್ಬರು ಅರಿತುಕೊಂಡ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಸಂಗೀತಾ ಕೈ ಹಿಡಿದ ಮನೋರಂಜನ್!

  ಸಂಗೀತಾ ಕೈ ಹಿಡಿದ ಮನೋರಂಜನ್!

  ಮನೋರಂಜನ್ ಮದುವೆಯಾಗಿರುವ ಹುಡುಗಿ ಸಂಗೀತಾ ದೂರದ ಸಂಬಂಧಿ. ಮನೆಯವರೇ ನೋಡಿ ಇಬ್ಬರ ಮದುವೆ ನಿಶ್ಚಯ ಮಾಡಿದ್ದರು. ಅವರ ಇಚ್ಚೆಯಂತೆ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡುಗಿ ಒಪ್ಪಿಗೆಯಾದ ಬಳಿಕ ಮನೋರಂಜನ್ ಮದುವೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಸಿನಿಮಾರಂಗದಲ್ಲಿ ಇರೋದ್ರಿಂದ ಅವರಿಗೆ ಅರ್ಥ ಮಾಡಿಕೊಳ್ಳಲು ಸಮಯ ನೀಡಿದ್ರು. ಅವರಿಗೂ ಮನೋರಂಜನ್ ಓಕೆ ಅಂತ ಅನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಮದುವೆಯಲ್ಲಿ ತಾರಾ ಬಳಗ!

  ಮದುವೆಯಲ್ಲಿ ತಾರಾ ಬಳಗ!

  ಆಗಸ್ಟ್ 21 ಮನೋರಂಜನ್ ಹಾಗೂ ದೀಪಿಕಾ ಜೋಡಿಯ ರಿಸೆಪ್ಷನ್ ಬಹಳ ಅದ್ಧೂರಿಯಾಗಿ ನೆರವೇರಿದೆ. ವೇದಿಕೆಯಲ್ಲಿ ಮನೋರಂಜನ್ ಕಪ್ಪು ಬಣ್ಣದ ಸೂಟ್‌ ಧರಿಸಿದ್ರೆ, ದೀಪಿಕಾ ಪಿಂಕ್‌ ಕಲರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಶಿವರಾಜ್‌ಕುಮಾರ್ ದಂಪತಿ, ರಾಘವೇಂದ್ರ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ ದಂಪತಿ, ಬಹುಭಾಷಾ ನಟಿ ಖುಷ್ಬೂ, ನಿರೂಪಕ, ನಟ ಮಾಸ್ಟರ್ ಆನಂದ್, ನಿರೂಪಕ ಅಕುಲ್ ಬಾಲಾಜಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ನಾಗಾಭರಣ, ಹಿರಿಯ ನಟ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಉಮಾಶ್ರೀ, ನಿರ್ಮಾಪಕ ಕೆ. ಮಂಜು, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಸೇರಿದಂತೆ ಸಾಕಷ್ಟು ಗಣ್ಯರು ರಿಸೆಪ್ಷನ್‌ನಲ್ಲಿ ಭಾಗಿಯಾಗಿದ್ದರು

  English summary
  Ravichandran Elder Son Manoranjan Lovely Post About wife Sangeetha, Know more,
  Friday, August 26, 2022, 15:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X