ಭಾವಿ ಪತ್ನಿ ಬಗ್ಗೆ ಮಾತನಾಡಿದ ಮನೋರಂಜನ್ ರವಿಚಂದ್ರನ್!

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. 2019ರಲ್ಲಿ ಮಗಳ ಮದುವೆ ಅದ್ದೂರಿಯಾಗಿ ಮಾಡಿದ್ದ ರವಿಚಂದ್ರನ್ ಇದೀಗ ಮಗನ ಮದುವೆಗೆ ಸಜ್ಜಾಗಿದ್ದಾರೆ.

ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವೈಯಕ್ತಿಕ ಜೀವನದ ಮತ್ತೊಂದು ಹಂತಕ್ಕೆ ಏರುತ್ತಿದ್ದಾರೆ. ಹೌದು ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕ್ರೇಜಿ ಸ್ಟಾರ್ ಸೈಲೆಂಟ್ ಆಗಿ ಮಗನ ಮದುವೆಗೆ ಸಿದ್ಧತೆ ಮಾಡಿದ್ದು, ಇದೇ ತಿಂಗಳು ನಡೆಯುವ ಮದುವೆ ಸಮಾರಂಭದಲ್ಲಿ ಮನೋರಂಜನ್ ಹಸೆಮಣೆ ಏರುತ್ತಿದ್ದಾರೆ.

ಇನ್ನು ಮದುವೆ ಬಗ್ಗೆ ಇಲ್ಲಿ ತನಕ ಮನೆಯವರು ಎಲ್ಲೂ ಕೂಡ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ. ಈಗ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ಮನೋರಂಜನ್ ಮಾತನಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮನೋರಂಜನ್ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿದ್ದಾರೆ. ಜೊತೆಗೆ ಭಾವಿ ಪತ್ನಿ ಬಗ್ಗೆಯೂ ಮಾತನಾಡಿದ್ದಾರೆ.

ಅಮ್ಮ ನೋಡಿ ಹುಡುಗಿ ಸಂಗೀತಾ!

ಅಮ್ಮ ನೋಡಿ ಹುಡುಗಿ ಸಂಗೀತಾ!

"ನಾನು ನನ್ನ ಪೋಷಕರನ್ನು ಭೇಟಿ ಮಾಡಲು ಯಾರನ್ನೂ ಮನೆಗೆ ಕರೆದುಕೊಂಡು ಬಂದಿಲ್ಲ. ಸ್ವಲ್ಪ ದಿನಗಳಿಂದ ನನ್ನ ತಾಯಿ ನನಗೆ ಹುಡುಗಿ ಹುಡುಕುತ್ತಿದ್ದರು. ಸಂಗೀತಾ ಪ್ರಪೋಸಲ್ ಬಂದಾಗ ಅದನ್ನು ಮುಂದುವರೆಸಬಹುದು ಎಂದು ನಿರ್ಧರಿಸಿದರು, ಮೊದಲು ಅಪ್ಪ- ಅಮ್ಮ ಸಂಗೀತಾ ಅವರನ್ನು ಭೇಟಿಯಾದರು, ನಂತರ ಸಂಗೀತಾ ಮತ್ತು ನಾನು ಭೇಟಿಯಾದೆವು ಎಲ್ಲವೂ ಓಕೆಯಾಯಿತು". ಎಂದಿದ್ದಾರೆ ಮನೋರಂಜನ್.

ಸಂಗೀತಾ ಸ್ವಭಾವ ಇಷ್ಟ ಆಯ್ತು!

ಸಂಗೀತಾ ಸ್ವಭಾವ ಇಷ್ಟ ಆಯ್ತು!

ಮಾತು ಮುಂದುವರೆಸಿದ ಮನೋರಂಜನ್ "ಇದು ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ, ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು ಮತ್ತು ವಿಶೇಷವಾಗಿ ನಾನು ನಟನಾಗಿರುವುದರಿಂದ, ಅವರಿಗೆ ನನ್ನನ್ನು ತಿಳಿದುಕೊಳ್ಳಲು ಸಮಯ ನೀಡಬೇಕು ಎಂದು ನಾನು ಭಾವಿಸಿದೆ, ಸಂಗೀತಾ ತುಂಬಾ ಪ್ರೊಫೆಷನಲ್ ತನಗೆ ಇಷ್ಟವಾದುದ್ದನ್ನು ಮಾಡುತ್ತಾಳೆ.

ಅವಳು ಮದುವೆಯಾಗುತ್ತಿರುವುದು ಅನೇಕ ನಾಯಕಿಯರೊಂದಿಗೆ ಕೆಲಸ ಮಾಡುವ ಮತ್ತು ಸದಾ ಚಿತ್ರೀಕರಣದಲ್ಲಿರುವ ನಟನನ್ನು. ಹಾಗಾಗಿ ಅರಿತುಕೊಳ್ಳುವುದು ಇದೆ." ಎಂದಿದ್ದಾರೆ ಮನೋರಂಜನ್.

ನನಗೆ ತಕ್ಕ ಹುಡುಗಿ- ಮನೋರಂಜನ್!

ನನಗೆ ತಕ್ಕ ಹುಡುಗಿ- ಮನೋರಂಜನ್!

ಭಾವಿ ಪತ್ನಿಯನ್ನು ಹೆಚ್ಚಾಗಿ ಮೆಚ್ಚಿದ ಮನೋರಂಜನ್ "ಹೆಚ್ಚು ತಿಳುವಳಿಕೆ ಮತ್ತು ಕಾಳಜಿಯುಳ್ಳ ವ್ಯಕ್ತಿಯನ್ನು ನಾನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಜೊತೆಗೆ ನಾನು ಸರಳ ವ್ಯಕ್ತಿಯನ್ನು ಬಯಸಿದ್ದೆ ಮತ್ತು ಸಂಗೀತಾ ಅದನ್ನು ಸಾಕಾರಗೊಳಿಸಿದ್ದಾಳೆ. ಅವಳು ನನ್ನ ಮೇಲೆ ಇಟ್ಟಿರುವ ನಂಬಿಕೆ ನನಗೆ ತುಂಬಾ ಇಷ್ಟ ಆಯ್ತು. ನನ್ನ ಪರ ನಿಲ್ಲುತ್ತಾಳೆ ಎನ್ನುವ ನಂಬಿಕೆ ಇದೆ." ಎಂದು ಮನೋರಂಜನ್ ಹೇಳಿಕೊಂಡಿದ್ದಾರೆ.

ಆಗಸ್ಟ್ 21ರಂದು ಮದುವೆ, 22ಕ್ಕೆ ಆರತಕ್ಷತೆ!

ಆಗಸ್ಟ್ 21ರಂದು ಮದುವೆ, 22ಕ್ಕೆ ಆರತಕ್ಷತೆ!

ಆಗಸ್ಟ್ 21ರಂದು ವಿವಾಹ ನಡೆಯಲಿದೆ, ಇದಕ್ಕೂ ಮೊದಲು, ಆಗಸ್ಟ್ 20 ರಂದು ಆರತಕ್ಷತೆಯನ್ನು ನಡೆಯಲಿದೆ. ನಂತರ ಆಗಸ್ಟ್ 22 ರಂದು ರವಿಚಂದ್ರನ್ ಅವರು ಆಯೋಜಿಸುವ ಮತ್ತೊಂದು ಆರತಕ್ಷತೆ ಇದೆ. "ನನ್ನ ತಂಗಿ ವಿವಾಹವು ಅದ್ಧೂರಿಯಾಗಿತ್ತು, ಏಕೆಂದರೆ ಹುಡುಗಿಯ ಕಡೆಯಿಂದ ನಾವು ಅದನ್ನು ಆ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಸಂಗೀತಾ ಅವರ ಕುಟುಂಬವು ಚಲನಚಿತ್ರಗಳಿಂದ ದೂರವಿದೆ ಮತ್ತು ಕಡಿಮೆ-ಪ್ರೊಫೈಲ್ ಮದುವೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ನಾವು ಅವರ ಆಶಯಗಳನ್ನು ಗೌರವಿಸಲು ಬಯಸುತ್ತೇವೆ" ಎಂದು ಹೇಳಿಕೊಂಡಿದ್ದಾರೆ ಮನೋರಂಜನ್.

More from Filmibeat

English summary
Ravichandran Elder Son Manoranjan Talk about his marriage and future Wife, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X