ರವಿಚಂದ್ರನ್ ಹಿರಿಯ ಮಗನ ಮದುವೆ: ಬೆಂಗಳೂರಿನ ಆ ಹುಡುಗಿ ಯಾರು?

ಕನ್ನಡ ಚಿತ್ರರಂಗದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರವಿಚಂದ್ರನ್‌ಗೆ 3 ಜನ ಮಕ್ಕಳು. ಅದರಲ್ಲಿ ಮಗಳಿಗೆ ಈಗಾಗಲೇ ಮದುವೆ ಕೊಟ್ಟಿದ್ದಾರೆ. ಸದ್ಯ ಹಿರಿಯ ಮಗ ಮನೋರಂಜನ್ ಮದುವೆಗೆ ಸಜ್ಜಾಗಿದ್ದಾರೆ. ಕಿರಿಯ ಪುತ್ರ ವಿಕ್ರಂ ಮೊದಲ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಗಳ ಮದುವೆಯನ್ನು ರವಿಚಂದ್ರನ್ ಅದ್ಧೂರಿಯಾಗಿ ಮಾಡಿದ್ದರು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ, ಮಗಳ ಮದುವೆಯನ್ನು ಮಾಡಲಾಗಿತ್ತು. 2019ರಲ್ಲಿ ಮಗಳು ಗೀತಾಂಜಲಿ ಮದುವೆ ಆಗಿತ್ತು.

ಕ್ರೇಜಿಸ್ಟಾರ್ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆ ಗಟ್ಟಿದೆ. ಮನೋರಂಜನ್‌ಗೆ ಮದುವೆ ನಿಗದಿಯಾಗಿದ್ದು, ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕುಟುಂಬ ಅಧಿಕೃತವಾಗಿ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಮದುವೆ ತಯಾರಿ ಸುದ್ದಿ ಹೊರ ಬಂದಿದೆ.

ಆಗಸ್ಟ್‌ನಲ್ಲಿ ಮನೋರಂಜನ್ ಮದುವೆ!

ಆಗಸ್ಟ್‌ನಲ್ಲಿ ಮನೋರಂಜನ್ ಮದುವೆ!

ಕ್ರೇಜಿ ಸ್ಟಾರ್ ರವಿಚಂದ್ರನ್ ಸೈಲೆಂಟ್ ಆಗಿಯೇ ಮಗನ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳೇ ಮದುವೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಮದುವೆ ಆಗಸ್ಟ್ 21 ಹಾಗೂ 22ರಂದು ನಡೆಯಲಿದೆ. ಇದೇ ದಿನಾಂಕದಲ್ಲಿ ಮನೋರಂಜನ್ ಹಸೆಮಣೆ ಏರುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹುಡುಗಿ ಯಾರು?

ಹುಡುಗಿ ಯಾರು?

ಇನ್ನು ಹುಡುಗಿ ಯಾರು? ಸಿನಿಮಾರಂಗಕ್ಕೆ ಸಂಬಂಧ ಪಟ್ಟ ಹುಡುಗಿಯೇ ಎನ್ನುವ ಬಗ್ಗೆ ಹಲವು ಕುತೂಹಲ ಹುಟ್ಟಿ ಕೊಳ್ಳುವುದು ಸಹಜ. ರವಿಚಂದ್ರನ್ ಹಿರಿಯ ಸೊಸೆ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮನೋರಂಜನ್ ಕೈ ಹಿಡಿಯುತ್ತಿರುವ ಹುಡುಗಿ ಬೆಂಗಳೂರಿನವರೇ ಅಂತೆ. ವಿಲ್ಸನ್ ಗಾರ್ಡನ್ ನಿವಾಸಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮಾತ್ರವೇ ತಿಳಿದು ಬಂದಿದೆ. ಈ ಬಗ್ಗೆ ಕುಟುಂಬಸ್ಥರೇ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಡಬೇಕು.

ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್!

ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್!

ಮನೋರಂಜನ್ ಸಿನಿಮಾ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಗಂತ್ ಲವ್ ಅಂತೆಲ್ಲಾ ಮನೋರಂಜನ್ ಮುಂದುವರೆದಿಲ್ಲವಂತೆ. ಇದು ಅರೇಂಜ್ಡ್ ಮ್ಯಾರೇಜ್ ಅಂತೆ. ಅಪ್ಪ, ಅಮ್ಮ ಹುಡುಕಿದ ಹುಡುಗಿಯನ್ನೇ ಮನೋರಂಜನ್ ಮದುವೆಯಾಗುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರೇಜಿ ಸ್ಟಾರ್ ಕುಟುಂಬ ಎಲ್ಲಿಯೂ ಮಾಹಿತಿ ರಿವೀಲ್ ಮಾಡಿಲ್ಲ. ಮುಂದಿನ ತಿಂಗಳೇ ಮದುವೆಯಾಗಿದ್ದರಿಂದ ಸದ್ಯದಲ್ಲೇ ಕ್ರೇಜಿ ಕುಟುಂಬ ಮಗನ ಮದುವೆ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಸಾಹೇಬನಾಗಿ ಬಣ್ಣ ಹಚ್ಚಿದ ಮನೋರಂಜನ್!

ಸಾಹೇಬನಾಗಿ ಬಣ್ಣ ಹಚ್ಚಿದ ಮನೋರಂಜನ್!

ರವಿಚಂದ್ರನ್ ಮಕ್ಕಳು ಕೂಡ ಈಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಮನೋರಂಜನ್ 'ಸಾಹೇಬ' ಸಿನಿಮಾದ ಮೂಲಕ ನಾಯಕನಾಗಿ ಹೊರ ಹೊಮ್ಮಿದರು. ನಂತರ 'ಬೃಹಸ್ಪತಿ', 'ಮುಗಿಲು ಪೇಟೆ' ಸಿನಿಮಾಗಳನ್ನು ಮಾಡಿದ್ದಾರೆ. 'ಪ್ರಾರಂಭ' ಕೊನೆಯದಾಗಿ ರಿಲೀಸ್ ಆಗಿರುವ ಮನೋರಂಜನ್ ಸಿನಿಮಾ. ಸದ್ಯ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿರುವ ಮನೋರಂಜನ್ ಮದುವೆಗೆ ಅಣಿಯಾಗಿದ್ದಾರೆ.

More from Filmibeat

English summary
Ravichandran Elder Son Manoranjan Wedding Fix, Bride Is A Doctor, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X