ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕೆ ನೋಡಿದ್ರಾ?

ಕನ್ನಡ ಚಿತ್ರರಂಗದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದಿವೆ ಸಂಭ್ರಮ ಜೋರಾಗಿದೆ. ರವಿಚಂದ್ರನ್ ಅವರಿಗೆ 3 ಜನ ಮಕ್ಕಳು. ಅದರಲ್ಲಿ ಮಗಳಿಗೆ ಈಗಾಗಲೇ ಮದುವೆ ಕೊಟ್ಟಿದ್ದಾರೆ. ಸದ್ಯ ಹಿರಿಯ ಮಗ ಮನೋರಂಜನ್ ಮದುವೆಗೆ ಸಜ್ಜಾಗಿದ್ದಾರೆ.

ಮಗಳ ಮದುವೆಯನ್ನು ರವಿಚಂದ್ರನ್ ಅದ್ಧೂರಿಯಾಗಿ ಮಾಡಿದ್ದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ, ಮಗಳ ಮದುವೆಯನ್ನು ಮಾಡಲಾಗಿತ್ತು. 2019ರಲ್ಲಿ ಮಗಳು ಗೀತಾಂಜಲಿ ಮದುಗೆ ಆಗಿತ್ತು.

ಕ್ರೇಜಿಸ್ಟಾರ್ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆ ಗಟ್ಟಿದೆ. ಮನೋರಂಜನ್‌ಗೆ ಮದುವೆ ನಿಗದಿಯಾಗಿದ್ದು, ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕುಟುಂಬ ಅಧಿಕೃತವಾಗಿ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಮದುವೆ ಮದುವೆ ಆಮಂತ್ರಣ ಪ್ರತ್ರಿಕೆಯ ಸೋರಿಕೆ ಆಗಿದೆ.

ಆಮಂತ್ರಣ ಪತ್ರಿಕೆ ವೈರಲ್!

ಆಮಂತ್ರಣ ಪತ್ರಿಕೆ ವೈರಲ್!

ರವಿಚಂದ್ರನ್‌ ಸಿನಿಮಾ ಮಾತ್ರ ಅಲ್ಲ ಅವರು ತಮ್ಮ ಬದುಕಿನಲ್ಲೂ ಕೂಡ ಡಿಫ್ರೆಂಟ್. ಈ ಹಿಂದೆ ಮಗಳ ಮದುವೆ ಪತ್ರಿಕೆಯನ್ನೂ ಕೂಡ ಅತ್ಯಂತ ವಿಶೇಷವಾಗಿ ಮಾಡಿಸಿದ್ದರು. ಈಗ ಮಗನ ಮದುವೆ ಪತ್ರಿಕೆ ಕೂಡ ಅಷ್ಟೇ ವಿಶೇಷವಾಗಿದೆ. ಸದ್ಯ ಮನೋರಂಜನ್ ಮದುವೆ ಪತ್ರಿಕೆಯ ಫೋಟೊ ಸೋರಿಕೆ ಆಗಿದೆ. ಎಲ್ಲೆಲ್ಲೂ ಈ ಫೋಟೋ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗಿಯ ಹೆಸರು ಕೂಡ ಬಹಿರಂಗವಾಗಿದೆ. ಆದರೆ ಈ ವೈರಲ್ ಪತ್ರಿಕೆ ಫೊಟೋ ಬಗ್ಗೆಯೂ ಯಾವುದೇ ರೀತಿಯ ಸ್ಪಷ್ಟನೆ ಕ್ರೇಜಿ ಕುಟುಂಬದಿಂದ ಬಂದಿಲ್ಲ.

ಮದುವೆ ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್!

ಮದುವೆ ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್!

ವೈರಲ್ ಆಗಿರುವ ಈ ಮದುವೆ ಪತ್ರಿಕೆ ಹಲವು ವಿಶೇಷತೆಗಳಿಂದ ಕೂಡಿದೆ. ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ. ಕ್ರೇಜಿಸ್ಟಾರ್ ವಿಭಿನ್ನ ಫೋಟೋವನ್ನು ಇಲ್ಲಿ ಕೆತ್ತಲಾಗಿದೆ. ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮದುಮಗ-ಮದುಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ. ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮದುವೆ ನಡೆಯಲಿದೆ.

ಆಗಸ್ಟ್‌ನಲ್ಲಿ ಮನೋರಂಜನ್ ಮದುವೆ!

ಆಗಸ್ಟ್‌ನಲ್ಲಿ ಮನೋರಂಜನ್ ಮದುವೆ!

ಕ್ರೇಜಿ ಸ್ಟಾರ್ ರವಿಚಂದ್ರನ್ ಸೈಲೆಂಟ್ ಆಗಿಯೇ ಮಗನ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳೇ ಮದುವೆ ದಿನಾಂಕ ನಿಗದಿ ಆಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಮದುವೆ ಆಗಸ್ಟ್ 21 ಹಾಗೂ 22ರಂದು ನಡೆಯಲಿದೆ. ಇದೇ ದಿನಾಂಕದಲ್ಲಿ ಮನೋರಂಜನ್ ಹಸೆಮಣೆ ಏರುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಮದುವೆ!

ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಮದುವೆ!

ಇನ್ನು ಮನೋರಂಜನ್ ಮದುವೆ ಎಲ್ಲಿ ಯಾವಾಗ ಎನ್ನುವ ಬಗ್ಗೆಯೂ ಕೂಡ ಪತ್ರಿಕೆಯಲ್ಲಿ ಮಾಹಿತಿ ರಿವೀಲ್ ಆಗಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಪ್ಯಾಲೆಸ್ ಗ್ರೌಂಡ್ಸ್‌ನ ವೈಟ್‌ ಪೆಟಲ್ಸ್‌ನಲ್ಲಿ ಆಗಸ್ಟ್ 21 ಹಾಗೂ 22ರಂದು ಮದುವೆ ನರೆವೇರಲಿದೆ. ಇನ್ನೂ ಈಗಾಗಲೇ ಮದುವೆ ಪತ್ರಿಕೆಯನ್ನು ಗಣ್ಯರಿಗೆ ತಲುಪಿಸುವ ಕಾರ್ಯ ಕೂಡ ಶುರುವಾಗಿದೆ.

ಸಂಗೀತಾ ದೀಕಪ್ ಜೊತೆ ಮನೋರಂಜನೆ ಮದುವೆ!

ಸಂಗೀತಾ ದೀಕಪ್ ಜೊತೆ ಮನೋರಂಜನೆ ಮದುವೆ!

ಇನ್ನು ಹುಡುಗಿ ಯಾರು, ಸಿನಿಮಾರಂಗಕ್ಕೆ ಸಂಬಂಧ ಪಟ್ಟ ಹುಡುಗಿಯೇ ಎನ್ನುವ ಬಗ್ಗೆ ಹಲವು ಕುತೂಹಲವು ಹುಟ್ಟಿ ಕೊಳ್ಳುವುದು ಸಹಜ. ರವಿಚಂದ್ರನ್ ಹಿರಿಯ ಸೊಸೆ ಹೆಸರು ಸಂಗೀತಾ ದೀಪಕ್ ಎಂದು ಈ ಪತ್ರಿಕೆಯಿಂದ ತಿಳಿದು ಬಂದಿದೆ. ಮನೋರಂಜನ್ ಕೈ ಹಿಡಿಯುತ್ತಿರುವ ಸಂಗೀತಾ ಬೆಂಗಳೂರಿನವರೇ ಅಂತೆ. ವಿಲ್ಸನ್ ಗಾರ್ಡನ್ ನಿವಾಸಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮಾತ್ರವೇ ತಿಳಿದು ಬಂದಿದೆ.

ಅರೇಂಜ್ಡ್ ಮ್ಯಾರೇಜ್ ಆಗ್ತಿರುವ ಮನೋರಂಜನ್!

ಅರೇಂಜ್ಡ್ ಮ್ಯಾರೇಜ್ ಆಗ್ತಿರುವ ಮನೋರಂಜನ್!

ಮನೋರಂಜನ್ ಸಿನಿಮಾ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಗಂತ್ ಲವ್ ಅಂತೆಲ್ಲಾ ಮನೋರಂಜನ್ ಮುಂದುವರೆದಿಲ್ಲವಂತೆ. ಇದು ಅರೇಂಜ್ಡ್ ಮ್ಯಾರೇಜ್. ಅಪ್ಪ, ಅಮ್ಮ ಹುಡುಕಿದ ಹುಡುಗಿಯನ್ನೆ ಮನೋರಂಜನ್ ಮದುವೆಯಾಗುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರೇಜಿ ಸ್ಟಾರ್ ಕುಟುಂಬ ಎಲ್ಲಿಯೂ ಮಾಹಿತಿ ರಿವೀಲ್ ಮಾಡಿಲ್ಲ. ಮುಂದಿನ ತಿಂಗಳೆ ಮದುವೆಯಾಗಿದ್ದರಿಂದ ಸದ್ಯದಲ್ಲೇ ಕ್ರೇಜಿ ಕುಟುಂಬ ಮಗನ ಮದುವೆ ಸಂಭ್ರವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Ravichandran Elder Son Manoranjan Wedding Invitation Out, Special Wedding Card Going Viral, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X