twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್

    |

    Recommended Video

    Ambareesh : ಅಂಬಿ ಗಲಾಟೆ ನಿಂತು ಹೋಯ್ತು ಅಂತ ಬೀಸರದಿಂದ ನುಡಿದ ರವಿಚಂದ್ರನ್

    'ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ನನ್ನನ್ನು ತುಂಬಾ ಕಾಡುತ್ತಿದೆ. ಅವರನ್ನ ಕೊನೆಯ ಸಮಯದಲ್ಲಿ ನೋಡೋದು ಬೇಡ ಎಂದುಕೊಂಡಿದ್ದೆ' ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬರೀಶ್ ಅವರ ಚಿತ್ರವನ್ನ ನಿರ್ಮಾಣ ಮೂಲದ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರವಿಚಂದ್ರನ್, ಅಂಬಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಇವರಿಬ್ಬರ ಹುಟ್ಟುಹಬ್ಬವೂ ಒಂದು ದಿನ ಮುಂದೆ, ಒಂದು ದಿನ ಹಿಂದೆ ಬರುತ್ತೆ. ಹೀಗಾಗಿ, ಇಬ್ಬರ ಅಭಿಮಾನಿಗಳಿಗೂ ಎರಡು ದಿನ ಭರ್ಜರಿ ಹಬ್ಬ.

    ಅಂಬಿ ಸಾವಿನ ಸುದ್ದಿ ಕೇಳಿ ಮನನೊಂದ ಅಭಿಮಾನಿ ಆತ್ಮಹತ್ಯೆ ಅಂಬಿ ಸಾವಿನ ಸುದ್ದಿ ಕೇಳಿ ಮನನೊಂದ ಅಭಿಮಾನಿ ಆತ್ಮಹತ್ಯೆ

    'ಬ್ರಹ್ಮ ವಿಷ್ಣು ಮಹೇಶ್ವರ', 'ರಾಮಣ್ಣ ಶಾಮಣ್ಣ', 'ಖದೀಮ ಕಳ್ಳರು', 'ನಾನೇ ರಾಜ', 'ಪ್ರೇಮಲೋಕ' ಅಂತಹ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ರವಿ ಮತ್ತು ಅಂಬಿ ಒಂದೇ ಕುಟುಂಬದ ಎರಡು ಸ್ತಂಭಗಳಂತಿದ್ದರು. ಈಗ ಅಂಬಿಯನ್ನ ಕಳೆದುಕೊಂಡ ರವಿ, ರೆಬೆಲ್ ಜೊತೆಗಿನ ಅನುಭವವನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

    ಅಂಬಿ ನೋವನ್ನ ನಾನು ಕಂಡೇ ಇಲ್ಲ

    ಅಂಬಿ ನೋವನ್ನ ನಾನು ಕಂಡೇ ಇಲ್ಲ

    ''ಅಂಬರೀಶ್ ಅವರು ಯಾವತ್ತೋ ನೋವನ್ನ ಕಂಡೇ ಇಲ್ಲ. ಅವರು ನೋವಿನಲ್ಲಿ ಇದ್ದಿದ್ದನ್ನ ನಾನು ಯಾವತ್ತೂ ನೋಡಿಲ್ಲ. ಅವರಿಗೆ ಒಂದು ಇಂಜಕ್ಷನ್ ನೋಡಿದ್ರೆ ಓಡ್ತಿದ್ರು. ಚಕ್ರವ್ಯೂಹ ಶೂಟಿಂಗ್ ವೇಳೆ ಗಾಯವಾಗಿತ್ತು ಅಂತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಇಂಜಕ್ಷನ್ ನೋಡಿ ಓಡಿದ್ರು. ಆದ್ರೆ, ಇತ್ತೀಚಿನ ದಿನಗಳಲ್ಲಿ ಡಯಾಲಿಸಸ್ ಮಾಡೋದಕ್ಕೆ ಇಂಜಕ್ಷನ್ ತಗೊಳ್ತಿದ್ದರು ಅಂದ್ರೆ ಜೀವನ ಹೇಗೆ ಧೈರ್ಯ ನೀಡುತ್ತೆ ಅಲ್ವಾ '' - ರವಿಚಂದ್ರನ್

    ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಶಿಫ್ಟ್, ಆದ್ರೆ ಅಲ್ಲೂ ಸಮಸ್ಯೆ ಇದೆ.!ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಶಿಫ್ಟ್, ಆದ್ರೆ ಅಲ್ಲೂ ಸಮಸ್ಯೆ ಇದೆ.!

    ರಾಜಕೀಯಕ್ಕೆ ಹೋದ್ಮೇಲೆ ಸ್ವಲ್ಪ ದೂರ

    ರಾಜಕೀಯಕ್ಕೆ ಹೋದ್ಮೇಲೆ ಸ್ವಲ್ಪ ದೂರ

    ''ಅಂಬರೀಶ್ ಅವರು ರಾಜಕೀಯಕ್ಕೆ ಹೋದ್ಮೇಲೆ ನಾನು ಸ್ವಲ್ಪ ದೂರ ಉಳಿದಿದ್ದೆ. ಯಾಕಂದ್ರೆ, ನಾನು ಯಾವಗಲೂ ಸಿನಿಮಾ ಕೆಲಸದಲ್ಲಿರ್ತಿದೆ. ಆದ್ರೆ, ಅಂಬರೀಶ್ ಎಲ್ಲೇ ಇದ್ರೆ ಆ ಸ್ಥಳದಲ್ಲಿ ರವಿಚಂದ್ರನ್ ಇದ್ದಾನೆ ಅಂದ್ರೆ ಹುಡುಕಿಕೊಂಡು ಬಂದು ಮಾತಾಡಿಸುತಿದ್ರು. ನನ್ನನ್ನು ಕರೆದು ಊಟ ಮಾಡಿಸ್ತಿದ್ರು''

    ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

    ಇನ್ಮುಂದೆ ಬರ್ತಡೇ ನೆನಪಾಗ್ತಾರೆ

    ಇನ್ಮುಂದೆ ಬರ್ತಡೇ ನೆನಪಾಗ್ತಾರೆ

    ''ನನ್ನದು ಮತ್ತು ಅಂಬಿದೂ ಒಟ್ಟಿಗೆ ಬರ್ತಡೇ ಬರುತ್ತೆ. ಹಿಂದೆ ಸ್ವಲ್ಪ ವರ್ಷ ಬರ್ತಡೇ ಆಚರಣೆ ಮಾಡಿಲ್ಲ. ಆಮೇಲೆ ಅಭಿಮಾನಿಗಳ ಒತ್ತಾಯದಿಂದ ಆಚರಣೆ ಮಾಡಬೇಕಾಗಿದೆ. ಇನ್ಮುಂದೆ ಪ್ರತಿವರ್ಷದ ಬರ್ತಡೇಗೂ ಅಂಬರೀಶ ನೆನಪಾಗ್ತಾರೆ''

    ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    ನನ್ನೊಳಗೆ ಜೀವಂತವಾಗಿದ್ದಾರೆ

    ನನ್ನೊಳಗೆ ಜೀವಂತವಾಗಿದ್ದಾರೆ

    ''ಇಂದು ಬರೋದಾ ಬೇಡವಾ ಎಂದು ಮನಸ್ಸಿಗೆ ತುಂಬಾ ಕಾಡ್ತಿತ್ತು. ಅಂಬರೀಶ್ ನನ್ನೊಳಗೆ ಜೀವಂತವಾಗಿಟ್ಟುಕೊಂಡಿದ್ದೇನೆ. ಕೊನೆ ಘಳಿಗೆಯಲ್ಲಿ ಇಲ್ಲಿ ಬಂದು ನೋಡ್ಬೇಕಾ ಬೇಡವಾ, ಒಳಗೆ ಜೀವಂತವಾಗಿರಲಿ ಎಂದು ಅಂದುಕೊಂಡಿದ್ದೆ. ಆದ್ರೆ, ಅದೇನ್ ಮನಸ್ಸು ಬಿಡಲಿಲ್ಲ. ಕೊನೆ ಸಲ ನೋಡೋಣ ಅಂತ ಬಂದೆ. ಸತ್ತ ಮೇಲೆ ಮನುಷ್ಯನನ್ನ ಮರೆತ್ರೆ ಅವರು ನಿಜವಾಗಲೂ ಸತ್ತೋಗ್ತಾರೆ''

    ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

    English summary
    Kannada Actor Former Minister Ambareesh (66) passes away.
    Sunday, November 25, 2018, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X