ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ 'ಪಡ್ಡೆಹುಲಿ'ಯಿಂದ ಭರ್ಜರಿ ಗಿಫ್ಟ್
Recommended Video

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರುವ ರವಿಮಾಮನ ಜನುಮದಿನವನ್ನ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಈ ವಿಶೇಷ ದಿನದಂದು ರವಿಚಂದ್ರನ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಹಿಂದೆಂದೂ ಕಾಣಿಸಿದ ಪಾತ್ರ ಹಾಗೂ ಲುಕ್ ನಲ್ಲಿ ಕನಸುಗಾರ ಮಿಂಚಲಿದ್ದಾರೆ.
ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ಪಡ್ಡೆಹುಲಿ'. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದು, ರವಿಮಾಮನ ಕ್ಲಾಸಿಕ್ ಲುಕ್ ಬಹಿರಂಗವಾಗಿದೆ.

ಇದೇ ಮೊದಲ ಬಾರಿಗೆ ರವಿಚಂದ್ರನ್ ಅವರು ಕನ್ನಡ ಸಾಹಿತ್ಯಾಭಿಮಾನಿ ಹಾಗೂ ಕನ್ನಡ ಪ್ರೊಫೆಸರ್ ಪಾತ್ರವನ್ನ ನಿವ೯ಹಿಸುತ್ತಿದ್ದಾರೆ. ಈ ಮೂಲಕ ಹಲವು ವಿಭಿನ್ನ ಪಾತ್ರಗಳಲ್ಲಿ ರಂಜಿಸಿರುವ ಕ್ರೇಜಿಸ್ಟಾರ್ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಸದ್ಯ, ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ 'ಪಡ್ಡೆಹುಲಿ', ರವಿಚಂದ್ರನ್ ಬರ್ತಡೇ ಪ್ರಯುಕ್ತ ಟೀಸರ್ ಕೂಡ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

ಅಂದ್ಹಾಗೆ, ಈ ಚಿತ್ರವನ್ನ ಗುರುದೇಶ ಪಾಂಡೇ ನಿರ್ದೇಶನ ಮಾಡುತ್ತಿದ್ದು, ತೇಜಸ್ವಿನಿ ಎಂಟರ್ ಪ್ರೈಸಸ್" ಬ್ಯಾನರ್ ನಲ್ಲಿ ಎಂ ರಮೇಶ್ ರೆಡ್ಡಿ 'ಪಡ್ಡೆಹುಲಿ' ಚಿತ್ರವನ್ನು ನಿಮಿ೯ಸುತ್ತಿದ್ದಾರೆ. ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.


Click it and Unblock the Notifications











