twitter
    For Quick Alerts
    ALLOW NOTIFICATIONS  
    For Daily Alerts

    ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ 'ಪಡ್ಡೆಹುಲಿ'ಯಿಂದ ಭರ್ಜರಿ ಗಿಫ್ಟ್

    By Bharath Kumar
    |

    Recommended Video

    ಕ್ರೇಜಿ ಸ್ಟಾರ್ ಬರ್ತ್ಡೇಗೆ 'ಪಡ್ಡೆಹುಲಿ'ಯಿಂದ ಸಿಕ್ಕ ಗಿಫ್ಟ್ ಏನು ?? | Oneindia Kannada

    ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರುವ ರವಿಮಾಮನ ಜನುಮದಿನವನ್ನ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

    ಈ ವಿಶೇಷ ದಿನದಂದು ರವಿಚಂದ್ರನ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಹಿಂದೆಂದೂ ಕಾಣಿಸಿದ ಪಾತ್ರ ಹಾಗೂ ಲುಕ್ ನಲ್ಲಿ ಕನಸುಗಾರ ಮಿಂಚಲಿದ್ದಾರೆ.

    ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ಪಡ್ಡೆಹುಲಿ'. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದು, ರವಿಮಾಮನ ಕ್ಲಾಸಿಕ್ ಲುಕ್ ಬಹಿರಂಗವಾಗಿದೆ.

    ಟಿಬೆಟ್ಟಿಯನ್ನರ ಬಾಯಲ್ಲಿ ರವಿಚಂದ್ರನ್ ಹಾಡು! ನೋಡಿದ್ರೆ ಬೆಕ್ಕಸ ಬೆರಗಾಗ್ತೀರಾ! ಟಿಬೆಟ್ಟಿಯನ್ನರ ಬಾಯಲ್ಲಿ ರವಿಚಂದ್ರನ್ ಹಾಡು! ನೋಡಿದ್ರೆ ಬೆಕ್ಕಸ ಬೆರಗಾಗ್ತೀರಾ!

    Ravichandran first look in padde huli

    ಇದೇ ಮೊದಲ ಬಾರಿಗೆ ರವಿಚಂದ್ರನ್‌ ಅವರು ಕನ್ನಡ ಸಾಹಿತ್ಯಾಭಿಮಾನಿ ಹಾಗೂ ಕನ್ನಡ ಪ್ರೊಫೆಸರ್ ಪಾತ್ರವನ್ನ ನಿವ೯ಹಿಸುತ್ತಿದ್ದಾರೆ. ಈ ಮೂಲಕ ಹಲವು ವಿಭಿನ್ನ ಪಾತ್ರಗಳಲ್ಲಿ ರಂಜಿಸಿರುವ ಕ್ರೇಜಿಸ್ಟಾರ್ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

    ಸದ್ಯ, ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ 'ಪಡ್ಡೆಹುಲಿ', ರವಿಚಂದ್ರನ್ ಬರ್ತಡೇ ಪ್ರಯುಕ್ತ ಟೀಸರ್ ಕೂಡ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

    Ravichandran first look in padde huli

    ಅಂದ್ಹಾಗೆ, ಈ ಚಿತ್ರವನ್ನ ಗುರುದೇಶ ಪಾಂಡೇ ನಿರ್ದೇಶನ ಮಾಡುತ್ತಿದ್ದು, ತೇಜಸ್ವಿನಿ ಎಂಟರ್ ಪ್ರೈಸಸ್" ಬ್ಯಾನರ್ ನಲ್ಲಿ ಎಂ ರಮೇಶ್ ರೆಡ್ಡಿ 'ಪಡ್ಡೆಹುಲಿ' ಚಿತ್ರವನ್ನು ನಿಮಿ೯ಸುತ್ತಿದ್ದಾರೆ. ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.

    English summary
    Kannada actor, crazy star Ravichandran celebrates his 57th birthday with fans. so, Ravichandran birthday special padde huli movie first look poster has released.
    Wednesday, May 30, 2018, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X