'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್

Recommended Video

Kurukshetra Movie: ಎಲ್ಲೆಡೆ ಧುರ್ಯೋಧನನ ಬಗ್ಗೆಯೇ ಮಾತು | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪೌರಾಣಿಕ ಚಿತ್ರ ಕುರುಕ್ಷೇತ್ರ ಆಗಸ್ಟ್ 9ರಂದು ಬಿಡುಗಡೆಯಾಗುತ್ತಿದೆ. ದುರ್ಯೋಧನ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದು, ರವಿಚಂದ್ರನ್, ಅಂಬರೀಶ್, ರವಿಶಂಕರ್, ಸೋನು ಸೂದ್, ನಿಖಿಲ್ ಕುಮಾರ್, ಮೇಘನಾ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರದಲ್ಲಿ ಬಹುತೇಕ ಕಲಾವಿದರಿಗೆ ಮೊದಲ ಪೌರಾಣಿಕ ಚಿತ್ರ. ಹಾಗಾಗಿ, ಬಹಳ ಖುಷಿಯಿಂದ, ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅದರಲ್ಲೂ ದುರ್ಯೋಧನ ಪಾತ್ರದಲ್ಲಿ ನಟಿಸಿರುವ ದರ್ಶನ್ ಬಗ್ಗೆ ಘಟಾನುಘಟಿಗಳು ಹಾಡಿ ಹೊಗಳುತ್ತಿದ್ದಾರೆ.

ದುರ್ಯೋಧನ ಪಾತ್ರಕ್ಕೆ ದರ್ಶನ್ ಸೂಕ್ತ ಆಯ್ಕೆ. ಅವರನ್ನ ಬಿಟ್ಟರೇ ಸದ್ಯಕ್ಕೆ ಯಾರೂ ದುರ್ಯೋಧನ ಪಾತ್ರ ನಿರ್ವಹಿಸಲು ಕಷ್ಟ. ಕೌರವನಿಗೆ ಹೇಳಿ ಮಾಡಿಸಿದಂತೆ ದರ್ಶನ್ ರೂಪುಗೊಂಡಿದ್ದಾರೆ ಎಂಬ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

Ravichandran Has Appreciate to Actor Darshan

ಈ ಬಗ್ಗೆ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರವಿಚಂದ್ರನ್ ''ದುರ್ಯೋಧನನ್ನು ನೋಡಿಲ್ಲ, ದರ್ಶನ್ ನೋಡಿದೆ. ಅವರನ್ನ ನೋಡಿದ ಮೇಲೆ ನಾನು ಒಂದೇ ಹೇಳಿದ್ದು, 'ಲೋ ಮಗನೆ ನಿನ್ನ ಬಿಟ್ಟರೆ ಇನ್ನೊಬ್ಬ ದುರ್ಯೋಧನ ಕರ್ನಾಟಕಕ್ಕೆ ಇಲ್ಲ' ಎಂದಿದ್ದರಂತೆ. ಮಾತು ಮುಂದುವರಿಸಿದ ರವಿಚಂದ್ರನ್ ''ಆ ಪರ್ಸನಾಲಿಟಿಗೆ ಆ ಗೆಟಪ್ ಗೆ ಸೂಕ್ತ ಅಂದ್ರೆ ದರ್ಶನ್ ಮಾತ್ರ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Ravichandran Has Appreciate to Actor Darshan

ಅಂದ್ಹಾಗೆ, ಕುರುಕ್ಷೇತ್ರ ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು ಮೂರು ದಶಕಗಳಿಂದ ಇಂಡಸ್ಟ್ರಿಯಲ್ಲಿರುವ ಕ್ರೇಜಿಸ್ಟಾರ್ ಗೆ ಇದು ಮೊದಲ ಪೌರಾಣಿಕ ಚಿತ್ರ. ಹೀಗಾಗಿ, ರವಿಚಂದ್ರನ್ ಅವರ ಮೇಲೂ ಬಹಳ ನಿರೀಕ್ಷೆ ಹುಟ್ಟಿಕೊಂಡಿದೆ.

ಇನ್ನುಳಿದಂತೆ ಮುನಿರತ್ನ ಈ ಚಿತ್ರವನ್ನ ನಿರ್ಮಿಸಿದ್ದು, ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ಒದಗಿಸಿದ್ದು, ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಬಿಡುಗಡೆಯಾಗುತ್ತಿರುವ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬರ್ತಿದೆ.

More from Filmibeat

English summary
Kannada actor Ravichandran has Appreciate to challenging star Darshan. darshan playing duryodhana and ravichandran playing krishna in kurukshetra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X