For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಹಾಗೂ 'ನಾಗರಹಾವು' ಚಿತ್ರಕ್ಕಿರುವ ನಂಟಿನ ಬಗ್ಗೆ ರವಿಚಂದ್ರನ್ ಮಾತು

  By Pavithra
  |

  'ನಾಗರಹಾವು' ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಸುದ್ದಿಗೋಷ್ಟಿಯನ್ನು ಮಾಡಿದಾಗ ವಿಷ್ಣುವರ್ಧನ್ ಬಗ್ಗೆ ರವಿಚಂದ್ರನ್ ಮಾತನಾಡಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ನಾಳೆ ಬಿಡುಗಡೆ ಆಗುತ್ತಿರುವ 'ನಾಗರಹಾವು' ಸಿನಿಮಾ ಬಗ್ಗೆ ರವಿಚಂದ್ರನ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ 'ನಾಗರಹಾವು' ಚಿತ್ರಕ್ಕೂ ವಿಷ್ಣುವರ್ಧನ್ ಅವರಿಗಿದ್ದ ನಂಟಿನ ಬಗ್ಗೆ ತಿಳಿಸಿದ್ದಾರೆ.

  ಅಷ್ಟೇ ಅಲ್ಲದೆ ವೀರಾಸ್ವಾಮಿ ಮತ್ತು ವಿಷ್ಣುವರ್ಧನ್ ಇಬ್ಬರಿಗೂ ಇದ್ದ ಸಂಬಂಧ ಎಂತಹದ್ದೂ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. "ಕೆಲವೇ ದಿನಗಳ ಹಿಂದೆ ಪ್ರೆಸ್ ಮೀಟ್ ನಲ್ಲಿ ನಾನು ವಿಷ್ಣುವರ್ಧನ್ ಬಗ್ಗೆ ಮಾತನಾಡಿಲ್ಲ ಎಂದು ಸಾಕಷ್ಟು ಜನರು ಬೇಸರ ವ್ಯಕ್ತ ಪಡಿಸಿದ್ದರು. 'ನಾಗರಹಾವು' ಚಿತ್ರದ ಬಗ್ಗೆ ನಾನು ಏನೇ ಹೇಳಿದರು ಕಡಿಮೆ"

  'ವಿಷ್ಣುವರ್ಧನ್ ಇಲ್ಲದೆ 'ನಾಗರಹಾವು' ಚಿತ್ರ ಆಗುತ್ತಲೇ ಇರಲಿಲ್ಲ.ಈ ಬಾವನೆ ತಂದೆಯವರಲ್ಲೂ ಇತ್ತು. ವಿಷ್ಣು ಅವರಷ್ಟು ರಾಮಚಾರಿ ಪಾತ್ರಕ್ಕೆ ನ್ಯಾಯ ಒದಗಿಸಲು ಮತ್ಯಾರಿಗೂ ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಮತ್ತು ತಂದೆಯವರು ಉತ್ತಮ ಬಾಂದವ್ಯವನ್ನು ಹೊಂದಿದ್ದರು. ಅವರನ್ನು ನಮ್ಮ ತಂದೆ ನನ್ನ ದೊಡ್ಡ ಮಗ ಎನ್ನುತ್ತಿದ್ದರು"..

  Ravichandran has spoken about Vishnuvardhan

  ಅಷ್ಟರ ಮಟ್ಟಿಗೆ ಇಬ್ಬರ ಬಾಂದವ್ಯ ಬೆಸೆದುಕೊಂಡಿತ್ತು ಎನ್ನುವುದನ್ನು ನಟ ರವಿಚಂದ್ರನ್ ಸಿನಿಮಾ ರೀ ರಿಲೀಸ್ ಆಗುವ ಸಮಯದಲ್ಲಿ ಹೇಳಿಕೊಂಡಿದ್ದಾರೆ.

  English summary
  Kannada actor Ravichandran has spoken about Vishnuvardhan. Ravichandran shared his opinion with a letter about the Nagarahaavu film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X