For Quick Alerts
  ALLOW NOTIFICATIONS  
  For Daily Alerts

  'ಭಂಡ'ನ ಮನೆಗೆ ಮಗಳ ಮದುವೆ ಆಮಂತ್ರಣ ಹಿಡಿದು ಬಂದ 'ರಣಧೀರ'

  |

  ಸ್ಯಾಂಡಲ್ ವುಡ್ ನ ಕಲಾವಿದ, ಕ್ರೇಜ್ ಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿದ್ದ ರವಿಮಾಮ ಈಗ ಮಗಳ ಮದುವೆ ಕರೆಯೋಲೆಯಲ್ಲಿ ಬ್ಯುಸಿಯಗಿದ್ದಾರೆ. ರವಿಚಂದ್ರನ್ ಮಗಳು ಗೀತಾಂಜಲಿ ಅವರು ಮುಂದಿನ ತಿಂಗಳು 29ರಂದು ಹಸೆಮಣೆ ಏರಲಿದ್ದಾರೆ.

  ದುಬಾರಿ ಬೆಲೆಯ ಆಕರ್ಷಕವಾದ ಮಗಳ ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿರುವ ರವಿಚಂದ್ರನ್ ಈಗ ಸ್ಯಾಂಡಲ್ ವುಡ್ ನ ಗಣ್ಯರು, ಸ್ನೇಹಿತರು, ಕುಟುಂಬದವರಿಗೆ ಮತ್ತು ಆಪ್ತರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ಮಗಳ ಮದುವೆಗೆ ಆಹ್ವಾನ ಮಾಡುತ್ತಿದ್ದಾರೆ.

  'ಮನೆದೇವ್ರು' ಪುತ್ರಿ ಮದ್ವೆ ಸಂಭ್ರಮ : ಸುಧಾರಾಣಿಗೆ ಸಿಕ್ತು ಆಹ್ವಾನ

  ಜ್ರೇಜಿ ಸ್ಟಾರ್ ಇವತ್ತು ನವರಸ ನಾಯಕ ಜಗ್ಗೇಶ್ ಮನೆಗೆ ಹೋಗಿ ಮಗಳ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆ ಆಹ್ವಾನ ಮಾಡಿದ್ದಾರೆ. ಭಂಡನ ಮನೆಗೆ ರಣಧೀರ ಎಂಟ್ರಿ ಕೊಟ್ಟಿರುವ ವಿಶೇಷ ಕ್ಷಣದ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ಸ್ಯಾಂಡಲ್ ವುಡ್ ನ ಭಂಡನ ಮನೆಯಲ್ಲಿ ರಣಧೀರ

  ಸ್ಯಾಂಡಲ್ ವುಡ್ ನ ಭಂಡನ ಮನೆಯಲ್ಲಿ ರಣಧೀರ

  ರವಿಚಂದ್ರನ್ ಮುದ್ದಿನ ಮಗಳ ಮದುವೆ ಪತ್ರಿಕೆಯನ್ನು ನಟ ಜಗ್ಗೇಶ್ ದಂಪತಿಗೆ ನೀಡಿ ಮದುವೆಗೆ ಆಹ್ವಾನ ನೀಡಿದ್ದಾರೆ. ರವಿಚಂದ್ರನ್ ಪುತ್ರ ಮನೋರಂಜನ್ ಜೊತೆ ಜಗ್ಗೇಶ್ ಮನೆಗೆ ತೆರಳಿ ಮದುವೆ ಕರೆಯೋಲೆ ನೀಡಿದ್ದಾರೆ. ಈ ವಿಶೇಷ ಸಂದರ್ಭವನ್ನು ಜಗ್ಗೇಶ್ ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಮತ್ತು ಜಗ್ಗೇಶ್ ಅವರ ಹಳೆಯ ನೆನಪನ್ನು ಹಂಚಿಕೊಳ್ಳುವ ಮೂಲಕ ಕಷ್ಟಕಾಲದಲ್ಲಿ ಜಗ್ಗೇಶ್ ಗೆ ಸಹಾಯ ಮಾಡಿದ ರವಿಮಾಮನ ಸಹಾಯದ ಮನೋಭಾವನ್ನು ಗುಣಗಾನ ಮಾಡಿದ್ದಾರೆ.

  ದೇವರ ಮನೆ ನೋಡಿ ಮೂಕವಿಸ್ಮಿತರಾದ ರಣಧೀರ

  ದೇವರ ಮನೆ ನೋಡಿ ಮೂಕವಿಸ್ಮಿತರಾದ ರಣಧೀರ

  ಕಷ್ಟಕಾಲದಲ್ಲಿ ರವಿಚಂದ್ರನ್ ಅವರು ಜಗ್ಗೇಶ್ ಗೆ ನೀಡಿದ ಹಣದಿಂದ ಜಗ್ಗೇಶ್ ದಂಪತಿ ದೇವರ ವಿಗ್ರಹವನ್ನು ತಂದಿದ್ದಾರಂತೆ. ಆ ವಿಗ್ರಹವನ್ನು ದೇವರ ಮನೆಯಲ್ಲಿ ಇಟ್ಟಿದ್ದಾರೆ. ಮಗಳ ಮದುವೆಗೆ ಕರೆಯಲು ಬಂದ ರವಿಚಂದ್ರನ್ ಅವರನ್ನು ದೇವರ ಮನೆಗೆ ಕರೆದುಕೊಂಡು ಹೋಗಿ ತೋರಿಸಿ ಹಳೆಯ ದಿನಗಳನ್ನು ನೆನಪಿಸಿಕೊಟ್ಟಿದ್ದಾರೆ. "ಮಗಳ ಮದುವೆಯ ಮಮತೆಯ ಕರೆಯೋಲೆ ಗಾಗಿ ಬಂದಾಗ ಭಂಡನ ಮಡದಿ ಜೊತೆಯಾದಾಗ. ರಣಧೀರನಿಗೆ ನನ್ನ ದೇವರಮನೆ ತೋರಿ ರಣಧೀರ ಭಂಡನಿಗೆ ಕಷ್ಟಕಾಲದಲ್ಲಿ ಕೊಟ್ಟ ಹಣದಿಂದ ಅಂದು ಕೊಂಡ ದೇವರವಿಗ್ರಹ ತೋರಿದಾಗ ಮೊಕವಿಸ್ಮಿತ ರಣಧೀರ" ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

  ರವಿಚಂದ್ರನ್ ಮಗಳ ಮದುವೆ ಕರೆಯೋಲೆ : ಒಂದು ಕಾರ್ಡ್ ಬೆಲೆ ಇಷ್ಟೊಂದು!

  ನೂರ್ಕಾಲ ಧೀರ್ಘಸುಮಂಗಲಿಯಾಗಿ ಬಾಳಿ

  ನೂರ್ಕಾಲ ಧೀರ್ಘಸುಮಂಗಲಿಯಾಗಿ ಬಾಳಿ

  "ಹೆಮ್ಮೆಯಾಯಿತು, ಸಂಬಳ ಪ್ರೀತಿ ಉತ್ಸಾಹ ನನ್ನ ಬದುಕಿಗೆ ಕೊಟ್ಟು ಭುಜತಟ್ಟಿದ ರಣಧೀರ ಮನೆಗೆ ಆತ್ಮೀಯವಾಗಿ ಬಂದಾಗ. ಭವಿಷ್ಯ ನಾನು ರಣಧೀರ ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ. ಹತ್ತಿದ್ದ ಏಣಿನಾ ಒದಿಬ್ಯಾಡ.ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗು. ಶುಭಹಾರೈಸಿ ರಣಧೀರನ ಮಗಳಿಗೆ ನೂರ್ಕಾಲ ಧೀರ್ಘಸುಮಂಗಲಿಯಾಗಿ ಬಾಳಿ ಎಂದು.ಇಂತಿ ರಣಧೀರನ ಅನ್ನ ಉಂಡವ" ಎಂದು ರವಿಚಂದ್ರನ್ ಬಗ್ಗೆ ಬರೆದುಕೊಂಡಿದ್ದಾರೆ

  ಹೆಚ್ಚು ಸಂಭಾವನೆ ನೀಡಿದ್ದ ರವಿಚಂದ್ರನ್

  ಹೆಚ್ಚು ಸಂಭಾವನೆ ನೀಡಿದ್ದ ರವಿಚಂದ್ರನ್

  1988ರಲ್ಲಿ ರಿಲೀಸ್ ಆಗಿದ್ದ ರಣಧೀರ ಕನ್ನಡ ಚಿತ್ರರಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ರಣಧೀರ ಆ ಕಾಲದ ಸೂಪರ್ ಹಿಟ್ ಸಿನಿಮಾ. ಆ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ನಟ ಜಗ್ಗೇಶ್ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್ ಆಗಷ್ಟೆ ಚಿತ್ರರಂಗದಲ್ಲಿ ಕಣ್ಣು ಬಿಡುತ್ತಿದ್ದ ನಟ. ಆ ಕಷ್ಟದ ದಿನಗಳಲ್ಲಿ ಹೆಚ್ಚು ಸಂಭಾವನೆ ನೀಡಿ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟ ರವಿಚಂದ್ರನ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ನವರಸನಾಯಕ. ರವಿಚಂದ್ರನ್ ಮತ್ತು ಜಗ್ಗೇಶ್ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಕ್ರೇಜಿಸ್ಟಾರ್ ಪುತ್ರಿಯ ನಿಶ್ಚಿತಾರ್ಥ: ಹುಡುಗ ಯಾರು ಗೊತ್ತಾ?

  ಅಜಯ್ ಕೈ ಹಿಡಿಯುತ್ತಿರುವ ಗೀತಾಂಜಲಿ

  ಅಜಯ್ ಕೈ ಹಿಡಿಯುತ್ತಿರುವ ಗೀತಾಂಜಲಿ

  ಮುಂದಿನ ತಿಂಗಳು ಮೇ 28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೀತಾಂಜಲಿ ಮದುವೆ ನಡೆಯುಲಿದೆ. ರವಿಮಾಮನ ಮಗಳ ಅದ್ಧೂರಿ ಮದುವೆ ಸಂಭ್ರಮದಲ್ಲಿ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಕ್ರೇಜಿ ಸ್ಟಾರ್ ಮಗಳು ಗೀತಾಂಜಲಿ ಉದ್ಯಮಿ ಅಜಯ್ ಕೈ ಹಿಡಿಯುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು.

  English summary
  Kannada actor Ravichandran invited Jaggesh to his daughter's wedding. Ravichandran daughter's marriage is next month May 28th and 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X