ಮಗಳ ಮದುವೆಗೆ ಪವರ್ ಸ್ಟಾರ್ ರನ್ನು ಆಹ್ವಾನಿಸಿದ ರವಿಚಂದ್ರನ್
ಮಗಳ ಮದುವೆಯ ಕೆಲಸದಲ್ಲಿ ಬ್ಯುಸಿ ಇರುವ ನಟ ರವಿಚಂದ್ರನ್ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳಿಗೆ ನೀಡುತ್ತಿದ್ದಾರೆ. ಸದ್ಯ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಗೆ ರವಿಚಂದ್ರನ್ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆ ತಲುಪಿದೆ.
ಚಿತ್ರರಂಗದ ಸ್ನೇಹಿತರಿಗೆ ತಾವೇ ಖುದ್ದು ಹೋಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ರವಿಚಂದ್ರನ್ ನೀಡುತ್ತಿದ್ದಾರೆ. ಕಳೆದ ತಿಂಗಳಿನಿಂದ ಇದೇ ಕೆಲಸದಲ್ಲಿ ಅವರು ತೊಡಗಿದ್ದಾರೆ. ಪುನೀತ್ ರಿಗೆ ವಿವಾಹಕ್ಕೆ ಆಹ್ವಾನ ನೀಡಿರುವ ರವಿಚಂದ್ರನ್ ಇಡೀ ಕುಟುಂಬವನ್ನು ಸ್ವಾಗತಿಸಿದ್ದಾರೆ.
ರಾಜ್ ಕುಮಾರ್ ಹಾಗೂ ರವಿಚಂದ್ರನ್ ಕುಟುಂಬ ಬಹಳ ವರ್ಷಗಳಿಂದ ಒಡನಾಟ ಹೊಂದಿದೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಜೊತೆಗೆ ರವಿಚಂದ್ರನ್ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ನಟನೆಯ ಎಷ್ಟೋ ಸಿನಿಮಾಗೆ ರವಿಚಂದ್ರನ್ ಅವರೇ ಕ್ಲಾಪ್ ಮಾಡಿದ್ದಾರೆ.

ಇದೀಗ ಮಗಳ ಮದುವೆಗೆ ಬನ್ನಿ ಎಂದು ಪುನೀತ್ ರಿಗೆ ವಿಶೇಷ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ವೇಳೆ ನಿರ್ದೇಶಕ ರಘುರಾಮ್ ಸಹ ಹಾಜರಿದ್ದರು. ಈ ಫೋಟೋ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ.
ಅಂದಹಾಗೆ, ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಮದುವೆ ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮತ್ತೊಂದು ಕಡೆ ರಾಜ್ ಮೊಮ್ಮಗ ಯುವ ರಾಜ್ ಕುಮಾರ್ ಮದುವೆ ಕೂಡ ಇದೇ ತಿಂಗಳು ನಡೆಯುತ್ತಿದೆ.


Click it and Unblock the Notifications