ಮಗಳ ಮದುವೆಗೆ ಸಿದ್ಧರಾಮಯ್ಯರನ್ನು ಆಹ್ವಾನಿಸಿದ ರವಿಚಂದ್ರನ್
ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಮದುವೆ ಹತ್ತಿರ ಬರುತ್ತಿದೆ. ಮದುವೆ ಕೆಲಸಗಳ ಜೊತೆಗೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯಕೂಡ ಇನ್ನು ಮುಗಿದಿಲ್ಲ. ಚಿತ್ರರಂಗದವರಿಗೆ ಮಾತ್ರವಲ್ಲದೆ ರಾಜಕೀಯ ರಂಗದ ಗಣ್ಯರಿಗೂ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ ರವಿಚಂದ್ರನ್.
ಬಿಡುವಿಲ್ಲದೆ ಮದುವೆ ಆಮಂತ್ರಣ ನೀಡುತ್ತಿರುವ ರವಿಮಾಮ ಮಾಜಿ ಸಿ ಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಗಳ ಮದುವೆಗೆ ಆಮಂತ್ರಣ ನೀಡಿದ್ದಾರೆ. ಅಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಿರಲ್ಲಿಲ್ಲ. ಅನೇಕ ಕಾಂಗ್ರೇಸ್ ನಾಯಕರು ಜೊತೆಯಲ್ಲಿದ್ದರು.
ದಿನೇಶ್ ಗುಂಡುರಾವ್, ಸಿ ಎಂ ಇಬ್ರಾಹಿಂ, ಕೆ ಸಿ ವೇಣುಗೋಪಾಲ್, ಎಂ ಬಿ ಪಾಟೇಲ್ ಸೇರಿದಂತೆ ಅನೇಕರ ಕಾಂಗ್ರೇಸ್ ನಾಯಕರಿಗೆ ರವಿಚಂದ್ರನ್ ಮಗಳ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯ ಗಣ್ಯರಿಗೂ ಮಗಳ ಮದುವೆ ಆಮಂತ್ರಣ ನೀಡಿದ್ದಾರೆ. ಮದುವೆಗೆ ಇನ್ನೇನು ಒಂದೇ ವಾರ ಭಾಕಿ ಇದೆ. ಇದೆ ತಿಂಗಳು 28 ಮತ್ತು 29ರಂದು ಅರಮನೆ ಮೈದಾನದಲ್ಲಿ ಕನಸುಗಾರನ ಕನಸಿನಂತೆ ಅದ್ಧೂರಿಯಾಗಿ ಮಗಳ ಮದುವೆ ನಡೆಯಲಿದೆ. ಮದುವೆಗೆ ಗಣ್ಯಾತಿಗಣ್ಯರು ಹಾಜರಾಗುವ ಸಾಧ್ಯತೆ ಇದೆ.


Click it and Unblock the Notifications











