Just In
Don't Miss!
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್ ಗೆ ಮಗಳ ಮದುವೆ ಆಮಂತ್ರಣ ನೀಡಿದ ರವಿಚಂದ್ರನ್
ಕ್ರೇಜಿ ಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಆಮಂತ್ರಣ ಪತ್ರಿಕೆ ಹಂಚುವ ಕೆಲಸದಲ್ಲಿ ನಿರತರಾಗಿರುವ ರವಿಮಾಮ ಚಿತ್ರರಂಗದ ಮತ್ತು ರಾಜಕೀಯ ಗಣ್ಯರಿಗೆ ಮಗಳ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.
ಈಗಾಗಲೆ ಸಾಕಷ್ಟು ನಟ-ನಟಿಯರಿಗೆ ಮಗಳ ವಿವಾಹ ಆಹ್ವಾನ ಪತ್ರಿಕೆ ನೀಡಿರುವ ರವಿಚಂದ್ರನ್ ಈಗ ರಾಕಿಂಗ್ ಸ್ಟಾರ್ ಯಶ್ ಗೆ ಮದುವೆಯ ಕರೆಯೋಲೆ ನೀಡಿದ್ದಾರೆ. ಇತ್ತೀಚಿಗಷ್ಟೆ ರವಿಚಂದ್ರನ್ ದಂಪತಿಸಮೇತರಾಗಿ ಯಶ್ ಮನೆಗೆ ತೆರಳಿ ಮದುವೆ ಪತ್ರಿಕೆ ಕೊಟ್ಟಿದ್ದಾರೆ.
ಮಗಳ ಮದುವೆಗೆ ಪವರ್ ಸ್ಟಾರ್ ರನ್ನು ಆಹ್ವಾನಿಸಿದ ರವಿಚಂದ್ರನ್
ಯಶ್ ಮತ್ತು ರವಿಂದ್ರನ್ ನಡುವೆ ಉತ್ತಮವಾದ ಗೆಳೆತನವಿದೆ. ರಾಧಿಕಾ ಪಂಡಿತ್ ಮತ್ತು ಯಶ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವ ರವಿಮಾಮ ಪತ್ನಿ ಸುಮತಿ ಜೊತೆ ಯಶ್ ಮನೆಗೆ ತೆರಳಿ ಆಮಂತ್ರಣ ನೀಡಿದ್ದಾರೆ.
ಅಂದ್ಹಾಗೆ ರವಿಚಂದ್ರನ್ ಮಗಳು ಗೀತಾಂಜಲಿ ಮತ್ತು ಅಜಯ್ ಮದುವೆ ಇದೇ ತಿಂಗಳು ಮೇ 28 ಹಾಗೂ 29ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುವ ವಿವಾಹ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ.