ರವಿಚಂದ್ರನ್ ಅವರನ್ನ ಈ ರೀತಿ ಯಾರೂ ನೋಡಿರಲ್ಲ.! ಶಿವಣ್ಣನೂ ನೋಡಿಲ್ವಂತೆ

By Bharath Kumar

Recommended Video

ಸೌಂಡ್ ಮಾಡ್ತಿದೆ ರವಿಚಂದ್ರನ್ ಸೆನ್ಸಾರ್ ಇಲ್ಲದ ಮಾತುಗಳು | FIlmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನ ಚಿತ್ರಪ್ರೇಮಿಗಳು ಬಹುತೇಕ ಎಲ್ಲ ಪಾತ್ರಗಳಲ್ಲೂ ನೋಡಿರುತ್ತಾರೆ. ಅದರಲ್ಲಿ, ರಣಧೀರ, ಪ್ರೇಮಲೋಕದ ಸರದಾರ, ಕನಸುಗಾರ, ಏಕಾಂಗಿ, ಮಲ್ಲ.....ಹೀಗೆ ರವಿಚಂದ್ರನ್ ಅವರನ್ನ ಹೆಚ್ಚು ಜನ ಇಷ್ಟಪಟ್ಟಿದ್ದಾರೆ.

ಆದ್ರೆ, ರವಿಚಂದ್ರನ್ ಅವರನ್ನ ಈ ರೀತಿ ಯಾರೂ ನೋಡಿರಲ್ಲ ಎಂಬುದು 'ಬಕಾಸುರ' ಚಿತ್ರದಲ್ಲಿ ಸಾಬೀತಾಗಿದೆ. ಇದನ್ನ ಸ್ವತಃ ಶಿವರಾಜ್ ಕುಮಾರ್ ಕೂಡ ಹೇಳುವ ಮೂಲಕ ಹೊಸ ಕುತೂಹಲ ಹುಟ್ಟಿಸಿದ್ದಾರೆ.

ಹೌದು, ಇತ್ತೀಚಿಗಷ್ಟೆ 'ಬಕಾಸುರ' ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಮತ್ತು ರೋಹಿತ್ ನಟಿಸುತ್ತಿದ್ದಾರೆ. ಮೊದಲ ಟ್ರೈಲರ್ ನಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಗಮನ ಸೆಳೆದಿದ್ದ ರವಿಚಂದ್ರನ್, ಎರಡನೆ ಟ್ರೈಲರ್ ನಲ್ಲಿ ಕೊಂಚ ಡಿಫ್ರೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Ravichandran new style in Bakasura movie

ಅದು ಎಷ್ಟರ ಮಟ್ಟಿಗೆ ಅಂದ್ರೆ, ರವಿಚಂದ್ರನ್ ಅವರ ಡೈಲಾಗ್ ಗಳಲ್ಲಿ ಸತತವಾಗಿ ಬೀಪ್ ಸೌಂಡ್ ನೋಡಬಹುದು. ಅಷ್ಟರ ಮಟ್ಟಿಗೆ ಸೆನ್ಸಾರ್ ಲೆಸ್ ಸಂಭಾಷಣೆ ಬಳಸಿರಬಹುದು ಎಂಬ ಅನುಮಾನ ಕಾಡುತ್ತಿದೆ. ಇನ್ನು ಅದಕ್ಕಿಂತ ದೊಡ್ಡದಾಗಿ ಗಮನ ಸೆಳೆಯುವುದು ರವಿಮಾಮ ಬಳಸುವ 'ಎಫ್' ಎಂಬ ಶಬ್ದಗಳು.

ಒಟ್ನಲ್ಲಿ, ಕ್ರೇಜಿಸ್ಟಾರ್ ಆಗಿ ನೋಡಿದ್ದ ರವಿಚಂದ್ರನ್ ಅವರನ್ನ ಹೊಸ ಟ್ರೆಂಡ್ ನಲ್ಲಿ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ನವನೀತ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಅನಿನಾಶ್ ಸಂಗೀತ ನೀಡಿದ್ದಾರೆ. ಕಿರುತೆರೆ ನಟಿ ಕಾವ್ಯಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ, ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ಬಕಾಸುರ' ಏಪ್ರಿಲ್ 27ಕ್ಕೆ ತೆರೆಗೆ ಬರಲಿದೆ.

More from Filmibeat

English summary
Kannada Bakasura film second trailer was released. Actor Shivaraj Kumar has made a background voice for the trailer. Ravichandran, RJ Rohit has acted in the film Navaneeth directed the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X