For Quick Alerts
  ALLOW NOTIFICATIONS  
  For Daily Alerts

  ಮೂರು ಕಾರಣಗಳಿಗಾಗಿ, ಎರಡು ವರ್ಷದ ಬಳಿಕ ಚಿತ್ರಮಂದಿರಕ್ಕೆ ಬಂದ ರವಿಚಂದ್ರನ್

  |

  ನಟ ರವಿಚಂದ್ರನ್ ಸಿನಿಮಾವನ್ನೇ ಉಸಿರಾಡುವ ಸಿನಿಮಾ ಕರ್ಮಿ. ಕೊರೊನಾ ಲಾಕ್‌ಡೌನ್ ಆಗಿ ಚಿತ್ರೀಕರಣಗಳು ಬಂದ್ ಆಗಿದ್ದ ಸಮಯದಲ್ಲಿಯೂ ಸಹ ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದು ತಾವೇ ಕೆಲವು ದೃಶ್ಯಗಳನ್ನು ಶೂಟ್ ಮಾಡಿ ಅದರಲ್ಲಿ ಹಂಚಿಕೊಂಡಿದ್ದರು. ಚಿತ್ರೀಕರಣ, ಲೈಟ್ಸ್, ಕ್ಯಾಮೆರಾ, ಆಕ್ಷನ್ ಇಲ್ಲದಿದ್ದರೆ ರವಿಚಂದ್ರನ್ ಇರಲಾರರು.

  ಇಂಥಹಾ ರವಿಚಂದ್ರನ್ ಕಳೆದ ಎರಡು ವರ್ಷಗಳಿಂದ ಚಿತ್ರಮಂದಿರಗಳಿಗೆ ಭೇಟಿಯನ್ನೇ ನೀಡಿರಲಿಲ್ಲವಂತೆ. ಹೀಗೆಂದು ಸ್ವತಃ ರವಿಚಂದ್ರನ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಎರಡು ವರ್ಷದ ನಂತರ ತಮ್ಮನ್ನು ಚಿತ್ರಮಂದಿರಕ್ಕೆ ಎಳೆದು ತಂದ ಸಂಗತಿಗಳು ಯಾವುವು ಎಂದು ಸಹ ರವಿಚಂದ್ರನ್ ಹೇಳಿಕೊಂಡಿದ್ದಾರೆ.

  ನಟ ರವಿಚಂದ್ರನ್ ಕೊನೆಗೂ ಚಿತ್ರಮಂದಿರಕ್ಕೆ ಆಗಮಿಸಿದ್ದು, ಎರಡು ವರ್ಷಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಒಂದನ್ನು ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲದೆ ಸಿನಿಮಾವನ್ನು ಎಲ್ಲರೂ ಬಂದು ನೋಡಿ ಎಂದು ಮನವಿ ಮಾಡಿದ್ದಾರೆ. ಯಾವುದಾ ಸಿನಿಮಾ? ರವಿಚಂದ್ರನ್ ಅವರನ್ನು ಚಿತ್ರಮಂದಿರಕ್ಕೆ ಎಳೆದು ತಂದ ಅಂಶಗಳಾವುವು? ಮುಂದೆ ಓದಿ.

  ಮೊದಲ ಕಾರಣ ಸಂಚಾರಿ ವಿಜಯ್

  ಮೊದಲ ಕಾರಣ ಸಂಚಾರಿ ವಿಜಯ್

  ನಟ ರವಿಚಂದ್ರನ್, ಕನ್ನಡದ 'ಪುಕ್ಸಟ್ಟೆ ಲೈಫು' ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಸಿನಿಮಾ ನೋಡಿ ಹೊರಗೆ ಬಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ರವಿಚಂದ್ರನ್, ''ಎರಡು ವರ್ಷವಾದ ಮೇಲೆ ಚಿತ್ರರಂಗಕ್ಕೆ ಬರಲು ಮೂರು ಮುಖ್ಯ ಕಾರಣಗಳಿವೆ ಅದರಲ್ಲಿ ಮೊದಲನೇ ಕಾರಣ ಸಂಚಾರಿ ವಿಜಯ್. ಅವನ ನಟನೆ ನೋಡಲು ಚಿತ್ರಮಂದಿರಕ್ಕೆ ಬಂದೆ. ಬಹಳ ಒಳ್ಳೆಯ ಫರ್ಮಾರ್ಮೆನ್ಸ್ ಅನ್ನು ಸಂಚಾರಿ ವಿಜಯ್ ನೀಡಿದ್ದಾನೆ'' ಎಂದರು ರವಿಚಂದ್ರನ್.

  ಚಿತ್ರಮಂದಿರಕ್ಕೆ ಬರದೆ ಎರಡು ವರ್ಷವಾಗಿತ್ತು: ರವಿಚಂದ್ರನ್

  ಚಿತ್ರಮಂದಿರಕ್ಕೆ ಬರದೆ ಎರಡು ವರ್ಷವಾಗಿತ್ತು: ರವಿಚಂದ್ರನ್

  ಮತ್ತೊಂದು ಕಾರಣವೆಂದರೆ ಚಿತ್ರಮಂದಿರಕ್ಕೆ ಬರಬೇಕೆಂಬ ಹಪಹಪಿ. ಎರಡು ವರ್ಷಗಳಾಗಿದ್ದವು ಚಿತ್ರಮಂದಿರಕ್ಕೆ ಬಂದು, ಚಿತ್ರಮಂದಿರಕ್ಕೆ ಬರಲೇ ಬೇಕು ಎಂಬ ಕಾರಣಕ್ಕೆ ಬಂದೆ. ಕನ್ನಡ ಸಿನಿಮಾ ನೋಡಿದೆ. ಖುಷಿ ಪಟ್ಟೆ. ಮೂರನೇ ಕಾರಣ ನನ್ನ ಸ್ನೇಹಿತ ನಾಗರಾಜು ಮತ್ತು ಸಿನಿಮಾದ ನಿರ್ದೇಶಕ ಅರವಿಂದ್ ಕಪ್ಲಿಕರ್ ಸಿನಿಮಾ ನೋಡಬೇಕು ಎಂದು ಮನವಿ ಮಾಡಿದರು ಹಾಗಾಗಿ ಬಂದೆ'' ಎಂದರು ರವಿಚಂದ್ರನ್.

  ಹಲವು ತಿರುವು, ರೋಚಕತೆಗಳು ಸಿನಿಮಾದಲ್ಲಿವೆ: ರವಿಚಂದ್ರನ್

  ಹಲವು ತಿರುವು, ರೋಚಕತೆಗಳು ಸಿನಿಮಾದಲ್ಲಿವೆ: ರವಿಚಂದ್ರನ್

  ''ಸಿನಿಮಾದ ಹೆಸರು ಕೇಳಿದಾಗ ಇದೊಂದು ತಮಾಷೆಯೇ ಪ್ರಧಾನವಾಗಿರುವ ಸಿನಿಮಾ ಎನಿಸುತ್ತದೆ. ಸಿನಿಮಾ ಪ್ರಾರಂಭವೂ ತಮಾಷೆಯ ದೃಶ್ಯಗಳಿಂದಲೇ ಆರಂಭವಾಗುತ್ತದೆ. ಆದರೆ ಸಿನಿಮಾ ಸಾಗಿದಂತೆ ಒಂದು ಗಂಭೀರತೆ ಆವರಿಸಿಕೊಳ್ಳುತ್ತದೆ. ದ್ವೀತೀಯಾರ್ಧದಲ್ಲಿ ಹಲವು ತಿರುವುಗಳು, ರೋಚಕತೆಯನ್ನು ನಿರ್ದೇಶಕರು ಇರಿಸಿದ್ದಾರೆ. ಎಲ್ಲ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ತಮಾಷೆ ಮಾಡುತ್ತಲೇ ಗಂಭೀರವಾದ ವಿಷಯಗಳನ್ನು ಹೇಳಿದ್ದಾರೆ. ಅವು ಏನೆನ್ನುವುದನ್ನು ಚಿತ್ರಮಂದಿರದಲ್ಲಿಯೇ ನೋಡಿಯೇ ತಿಳಿಯಬೇಕು'' ಎಂದು ರವಿಚಂದ್ರನ್ ಹೇಳಿದರು.

  ಚಿತ್ರಮಂದಿರಗಳಿಗೆ ಪ್ರೇಕ್ಷಕರು ವಾಪಸ್ಸಾಗಬೇಕು: ರವಿಚಂದ್ರನ್

  ಚಿತ್ರಮಂದಿರಗಳಿಗೆ ಪ್ರೇಕ್ಷಕರು ವಾಪಸ್ಸಾಗಬೇಕು: ರವಿಚಂದ್ರನ್

  ''ಚಿತ್ರಮಂದಿರಗಳಿಗೆ ಸಿನಿಮಾ ಪ್ರೇಕ್ಷಕರು ವಾಪಸ್ ಬರಬೇಕು. ಅವರು ವಾಪಸ್ ಬರಬೇಕೆಂದರೆ ಈ ಥರಹದ ಸಿನಿಮಾಗಳು ಬರಬೇಕು. ಇದೊಂದು ಒಳ್ಳೆಯ ಸಿನಿಮಾ ಆಗಿದ್ದು, ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿರಿ. ಚಿತ್ರತಂಡಕ್ಕೆ ಪ್ರೋತ್ಸಾಹ ಕೊಡಿ ಎಲ್ಲರಿಗೂ ಒಳ್ಳೆಯದಾಗಲಿ'' ಎಂದಿದ್ದಾರೆ ರವಿಚಂದ್ರನ್.

  'ಪುಕ್ಸಟ್ಟೆ ಲೈಫು' ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ

  'ಪುಕ್ಸಟ್ಟೆ ಲೈಫು' ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ

  'ಪುಕ್ಸಟ್ಟೆ ಲೈಫು' ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. ಸಿನಿಮಾ ಬಹಳ ಚೆನ್ನಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಜೋಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದರು, 'ಸ್ಟಾರ್ ನಟರುಗಳು ಇಂಥಹಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ಬೆಂಬಲಿಸಬೇಕು. ಇಂಥಹಾ ಒಳ್ಳೆಯ ಸಿನಿಮಾವನ್ನು ಸಾಯಲು ಬಿಡಬಾರದು' ಎಂದಿದ್ದರು. ಅದರ ಬೆನ್ನಲ್ಲೆ ರವಿಚಂದ್ರನ್, ಹೊಸ ನಿರ್ದೇಶಕರೊಬ್ಬರ ಸಿನಿಮಾ ನೋಡಲು ಬಂದು ಬೆಂಬಲ ನೀಡಿದ್ದಾರೆ.

  English summary
  Actor Ravichandran came to theater after two years he watched Puksatte Lifu movie along with other audience. He praised the movie.
  Friday, October 1, 2021, 10:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X