ರವಿ ಬೋಪಣ್ಣನ ಕತೆಯಾ? ರವಿಚಂದ್ರನ್ ಕತೆಯಾ? ಗೊಂದಲಕ್ಕೆ ನೂಕಿದ ಕ್ರೇಜಿ ಸ್ಟಾರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರೇಜಿ ವಿಡಿಯೋ ಒಂದನ್ನು ತಮ್ಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಹಂಚಿಕೊಂಡಿರುವ ಈ ವೀಡಿಯೋ ವೀಕ್ಷಕರಲ್ಲಿ ಗೊಂದಲ ಮಿಶ್ರಿತ ಕುತೂಹಲ ಮೂಡಿಸಿದೆ.

'ಇದು ಕಾಲ್ಪನಿಕ ಕತೆಯಲ್ಲ, ನನ್ನಲ್ಲಿರುವ ಸತ್ಯ. ಮನುಷ್ಯರು ಬಣ್ಣಗಳಾಗಿ, ಬಣ್ಣಗಳು ಭಾವನೆಗಳಾಗಿ' ಎಂಬುವ ಸಾಲಿನೊಂದಿಗೆ ಪ್ರಾರಂಭವಾಗು ವಿಡಿಯೋದಲ್ಲಿ ರವಿಚಂದ್ರನ್ ಹಲವು ಭಿನ್ನ-ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಜೀವನಕ್ಕೆ ಎರಡು ಮುಖಗಳಿವೆ', 'ಪಾಪದ ಕತೆ', 'ಮೂರ್ತತನ ಹಾಗೂ ವಾಸ್ತವ', 'ಸೆನ್ಸಾರ್-ಅನ್‌ಸೆನ್ಸಾರ್ಡ್', 'ನಿಜ-ನಟನೆ', 'ನನ್ನ ಜೀವನದ ತಪ್ಪುಗಳನ್ನು ತೋರಿಸುವ ಸಮಯ ಬಂದಿದೆ', 'ನಿಮ್ಮ ಜೀವನ ಒಂದು ಆಟ ಆದರೆ ಆಡುವುದು ಬೇರೆಯವರು', 'ಜೀವವೇ ಇಲ್ಲದ ಜೀವನ', 'ಜೀವನ ಒಂದು ಸೈಡೆಡ್ ಮ್ಯಾಚ್‌', 'ದೇವರು ಹೃದಯವಿಲ್ಲದವ' ಈ ರೀತಿಯ ಹಲವಾರು ಸಾಲುಗಳು ವಿಡಿಯೋಗಳಲ್ಲಿವೆ.

 Ravichandran Released A Montage Video On YouTube

ರವಿಚಂದ್ರನ್ ಸಹ ರಾಕ್ಷಸ, ನಾಟಕೀಯ , ನಿಜ ವ್ಯಕ್ತಿ ಹೀಗೆ ಮೂರು ಭಿನ್ನ ಶೇಡ್‌ಗಳಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ನಡುವೆ ರವಿಚಂದ್ರನ್ ಮಕ್ಕಳು ಸಹ ಕಾಣಿಸಿಕೊಳ್ಳುತ್ತಾರೆ. ರವಿಚಂದ್ರನ್ ಒಬ್ಬನನ್ನು ಹೊಡೆದು ಕೊಲ್ಲುತ್ತಾರೆ. ಇಂಥಹಾ ಬಿಡಿ-ಬಿಡಿ ದೃಶ್ಯಗಳು ತುಂಬಿವೆ ವಿಡಿಯೋದಲ್ಲಿ.

ಮಾಂಟಾಜ್ ಮಾದರಿ ದೃಶ್ಯಗಳೇ ತುಂಬಿರುವ ವಿಡಿಯೋದಲ್ಲಿ ಕೊನೆಯದಾಗಿ ಸುದೀಪ್ ಸಹ ಕಾಣಿಸಿಕೊಳ್ಳುತ್ತಾರೆ. 'ರವಿ ಬೋಪಣ್ಣ' ಸಿನಿಮಾದ ಪೋಸ್ಟರ್‌ ಸಹ ಕಾಣಿಸಿಕೊಳ್ಳುತ್ತದೆ. ಈ ವಿಡಿಯೋ ರವಿ ಬೋಪಣ್ಣ ಸಿನಿಮಾ ಕುರಿತಾದದ್ದೊ, ಅಥವಾ ರವಿಚಂದ್ರನ್ ಜೀವನದ ಕುರಿತಾಗಿ ಮಾಡುತ್ತಿರುವ ಹೊಸ ಸಿನಿಮಾದ್ದೊ ಅಥವಾ ರವಿ ಬೋಪಣ್ಣ ಸಿನಿಮಾದಲ್ಲಿ ರವಿಚಂದ್ರನ್ ಕತೆ ಮಿಳಿತವಾಗಿದೆಯೇ? ಗೊಂದಲ ಮೂಡುತ್ತದೆ.

Recommended Video

ಸಮಾಜ ಸೇವೆ ಹೆಸರಲ್ಲಿ ಉಪೇಂದ್ರ ಜಾತಿ ಪ್ರೀತಿ ಮೆರೆದಿದ್ದಾರೆ ಅಂದ್ರು ಚೇತನ್ | Filmibeat Kannada

ವಿಡಿಯೋದ ಬಗ್ಗೆ ಪೂರ್ಣ ಸ್ಪಷ್ಟತೆ ರವಿಚಂದ್ರನ್ ಹುಟ್ಟುಹಬ್ಬದಂದು ಸಿಗುವ ಸಾಧ್ಯತೆ ಇದೆ. ನಾಳೆ (ಮೇ 30) ರಂದು ರವಿಚಂದ್ರನ್ ಹುಟ್ಟುಹಬ್ಬ ಇದೆ.

More from Filmibeat

English summary
Actor V Ravichandran released a montage video on YouTube. Ravi Bopanna movie update will reveal on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X