For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಧ್ವನಿಗೆ ರವಿಚಂದ್ರನ್ ಬೋಲ್ಡ್!

  |

  ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ತೆರೆಗೆ ಬಂದು ಹಲವು ದಿನಗಳು ಕಳೆದಿವೆ. ಹಲವು ದಿನಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ರವಿಬೋಪಣ್ಣ ಆಗಿ ಎಂಟ್ರಿ ಕೊಡ್ತಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ಕೂಡ ಹೆಚ್ಚಿನ ಕುತೂಹಲದಿಂದ ಕಾಯುತ್ತಿದ್ದಾರೆ.

  ರವಿಬೋಪಣ್ಣ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ಆಗಸ್ಟ್ 12ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಚಿತ್ರದ ಟ್ರೈಲರ್‌ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಚಿತ್ರವನ್ನು ಮಲ್ಟಿಸ್ಟಾರರ್ ಸಿನಿಮಾ ಎಂದೇ ಕರೆಯಬಹುದು. ಯಾಕೆಂದರೆ ರವಿಚಂದ್ರನ್ ಜೊತೆಗೆ ನಟ ಸುದೀಪ್ ತೆರೆಹಂಚಿಕೊಂಡಿದ್ದಾರೆ.

  ಲೇ ಲೇ ಲೇ... ರವಿ ಬೋಪಣ್ಣ: ಬರೋಬ್ಬರಿ 7 ನಿಮಿಷಗಳ ಟ್ರೈಲರ್ ಕಣಣ್ಣ!ಲೇ ಲೇ ಲೇ... ರವಿ ಬೋಪಣ್ಣ: ಬರೋಬ್ಬರಿ 7 ನಿಮಿಷಗಳ ಟ್ರೈಲರ್ ಕಣಣ್ಣ!

  ರವಿಚಂದ್ರನ್ ಮತ್ತು ಸುದೀಪ್ ಒಟ್ಟಿಗೆ ತೆರೆಹಂಚಿಕೊಳ್ಳುತ್ತಾ ಇರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಜೋಡಿ ಒಟ್ಟಿಗೆ ತೆರೆಯ ಮೇಲೆ ಮಿಂಚಿದೆ. ಈ ಕಾಂಬಿನೇಶನ್ ಮತ್ತೆ ಒಂದಾಗುತ್ತಿದೆ ಎಂದರೆ, ಅದು ಸಹಜವಾಗಿ ಕುತೂಹಲ ಸೃಷ್ಟಿ ಮಾಡುತ್ತದೆ.

  ಸುದೀಪ್ ಲಾಯರ್ ಪಾತ್ರ!

  ಸುದೀಪ್ ಲಾಯರ್ ಪಾತ್ರ!

  ನಟ ಸುದೀಪ್ ತಮ್ಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಾತ್ರ ಅಭಿನಯಿಸುವುದಲ್ಲದೇ, ಅತಿಥಿ ಪಾತ್ರಗಳಲ್ಲೂ ಕೂಡ ಮಿಂಚುತ್ತಾರೆ. ಸದ್ಯ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇರುವ ಸಿನಿಮಾ ಅಂದರೆ ಅದು 'ರವಿ ಬೋಪಣ್ಣ'. ಈ ಚಿತ್ರದಲ್ಲಿ ನಟ ಸುದೀಪ್ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಟ್ರೈರಲ್‌ನಲ್ಲಿ ಅವರ ಪಾತ್ರದ ತುಣುಕನ್ನೂ ಕೂಡ ಪರಿಚಯ ಮಾಡಲಾಗಿದೆ. ಕರಿ ಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ ನಟ ಸುದೀಪ್.

  ಸುದೀಪ್‌ ಧ್ವನಿಗೆ ರವಿಮಾಮ ಫಿದಾ!

  ಸುದೀಪ್‌ ಧ್ವನಿಗೆ ರವಿಮಾಮ ಫಿದಾ!

  ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ಸುದೀಪ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. "ಈ ಚಿತ್ರದಲ್ಲಿ ಒಂದು ಜಾಗದಲ್ಲಿ ಒಂದು ವಾಯ್ಸ್ ಬೇಕು. ಅದು ಧ್ವನಿ ಹೇಳೋದು ಸತ್ಯ. ಅದನ್ನು ಜನ ಒಪ್ಪಬೇಕು. ಆತರ ನಮ್ಮ ಕರ್ನಾಟಕದಲ್ಲಿ ಯಾರದ್ದು ವಾಯ್ಸ್ ಅಂದ್ರೆ, ಅದು ನಮ್ಮ ಸುದೀಪ್ ವಾಯ್ಸ್. ಆ ವಾಯ್ಸ್‌ನಲ್ಲಿ ಕರೆಂಟ್ ಇರಬೇಕು. ಆ ಕರೆಂಟ್ ಸಿನಿಮಾಗೆ ಬೇಕು. ನಾನು ಇಡೀ ಸಿನಿಮಾದಲ್ಲಿ ಇದ್ದರೂ, ಸಿನಿಮಾಗೆ ಜಸ್ಟಿಫೈ ಮಾಡೋದು ಆ ಪಾತ್ರ. ಅದು ಸುದೀಪ್‌ಗೆ ಮಾತ್ರ ಸಾಧ್ಯ ಅನಿಸಿತು." ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.

  ಕಿಚ್ಚನ 'ಹೆಬ್ಬುಲಿ'ಯಲ್ಲಿ ರವಿಚಂದ್ರನ್!

  ಕಿಚ್ಚನ 'ಹೆಬ್ಬುಲಿ'ಯಲ್ಲಿ ರವಿಚಂದ್ರನ್!

  ನಟ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಜೋಡಿ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲಲ್ಲಾ. ಈ ಜೋಡಿ 'ಹೆಬ್ಬುಲಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿ ಕಮಾಲ್ ಮಾಡಿತ್ತು. ಹೆಬ್ಬುಲಿಯಲ್ಲಿ ಈ ಜೋಡಿಯ ಕಂಬಿನೇಶನ್‌ಗೆ ಅಭಿಮಾನಿ ಬಳಗ ಫಿದಾ ಆಗಿತ್ತು. ಈಗ ಮತ್ತೊಮ್ಮೆ 'ರವಿ ಬೋಪಣ್ಣ' ಚಿತ್ರದ ಮೂಲಕ ಸುದೀಪ್ ಮತ್ತು ರವಿಚಂದ್ರನ್ ಒಟ್ಟಿಗೆ ಬರ್ತಿದ್ದಾರೆ. ಹಾಗಾಗಿ ಇವರನ್ನು ಮತ್ತೆ ತೆರೆಯ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಆಗಸ್ಟ್ 12 'ರವಿ ಬೋಪಣ್ಣ' ರಿಲೀಸ್!

  ಆಗಸ್ಟ್ 12 'ರವಿ ಬೋಪಣ್ಣ' ರಿಲೀಸ್!

  'ರವಿ ಬೋಪಣ್ಣ' ಮತ್ತೊಂದು ಪ್ರೇಮಲೋಕ ಎಂದು ಕ್ರೇಜಿಸ್ಟಾರ್ ಹೇಳುತ್ತಿದ್ದಾರೆ ರವಿಚಂದ್ರನ್. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಕೆರಳಿಸಿದೆ. ಈ ಸಿನಿಮಾ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಯೋಗರಾಜ್ ಭಟ್ಟರ 'ಗಾಳಿಪಟ-2' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. 'ರವಿ ಬೋಪಣ್ಣ' ಮೂಲಕ ಸಿನಿಮಾ ರವಿಮಾಮ ಮತ್ತೆ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

  Recommended Video

  ಧಾರಾವಾಹಿ ಪ್ರಿಯರಿಗೆ ಇವರೆಂದರೆ ಬಹಳ ಅಚ್ಚುಮೆಚ್ಚು | Arjun Ramesh | Bigg Boss OTT *Bigg Boss
  English summary
  Ravichandran Roped Sudeep In Ravi Bopanna Film Because Of His Voice, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X