»   » ಶೋ ಮ್ಯಾನ್ ರವಿಚಂದ್ರನ್ ಮಕ್ಕಳಿಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡು!

ಶೋ ಮ್ಯಾನ್ ರವಿಚಂದ್ರನ್ ಮಕ್ಕಳಿಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡು!

Posted By:
Subscribe to Filmibeat Kannada

ಕನ್ನಡದ ಶೋ ಮ್ಯಾನ್ ನಟ ರವಿಚಂದ್ರನ್ ಪುತ್ರರತ್ನರು ಈಗ ಸ್ಯಾಂಡಲ್ ವುಡ್ ಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಅವರ ಮೊದಲ ಪುತ್ರ ಮನೋರಂಜನ್ 'ಸಾಹೇಬ'ನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ಎರಡನೇ ಮಗ ವಿಕ್ರಮ್ 'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾ ಮಾಡುತ್ತಿದ್ದಾರೆ.

ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಕ್ರೇಜಿಸ್ಟಾರ್ ಎರಡನೇ ಪುತ್ರ.!

ರವಿಚಂದ್ರನ್ ಪುತ್ರರಿಬ್ಬರಿಗೂ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಒಂದು ಕಡೆ ಮನೋರಂಜನ್ 'ಸಾಹೇಬ' ಸಿನಿಮಾ ಇದೇ ತಿಂಗಳು 25ಕ್ಕೆ ರಿಲೀಸ್ ಆಗುತ್ತಿದೆ. ಜೊತೆಗೆ ನಂದ ಕಿಶೋರ್ ನಿರ್ದೇಶದಲ್ಲಿ ಬರುತ್ತಿರುವ 'ವಿಐಪಿ' ಚಿತ್ರದ ರಿಮೇಕ್ ಸಿನಿಮಾದ ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇದರ ಜೊತೆಗೆ ಮನೋರಂಜನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.

Ravichandran's son Manoranjan and Vikram are busy with their movies

ಮನೋರಂಜನ್ ನಟನೆಯ ಈ ಹೊಸ ಸಿನಿಮಾಗೆ 'ರಾಕ್ ಸ್ಟಾರ್' ಎಂಬ ಟೈಟಲ್ ಇಡುವ ಸಾಧ್ಯತೆ ಇದೆಯಂತೆ. ಇನ್ನೂ ವಿಕ್ರಮ್ ಸಹ ತಮ್ಮ ಮೊದಲ ಸಿನಿಮಾದ ಮೂಲಕ ಸಖತ್ ಸೌಂಡ್ ಮಾಡುತ್ತಿದ್ದಾರೆ. ವಿಕ್ರಮ್ ನಟನೆಯ 'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಸ್ಟೈಲಿಶ್ ಆಗಿ ವಿಕ್ಕಿ ಕಾಣಿಸಿಕೊಂಡಿದ್ದಾರೆ.

'ಗಣೇಶ'ನ ಜೊತೆ 'ಸಾಹೇಬ'ನ ಎಂಟ್ರಿ

Ravichandran's son Manoranjan and Vikram are busy with their movies
VIP Kannada Movie , A Tragic Incident Happened During Shooting | OneIndia Kannada

ರವಿಚಂದ್ರನ್ ಕನ್ನಡ ಸಿನಿಮಾರಂಗದ ದೊಡ್ಡ ನಟರಲ್ಲಿ ಒಬ್ಬರು. ಅದೇ ರೀತಿ ಅವರ ಮಕ್ಕಳು ಕೂಡ ತಮ್ಮ ಸಿನಿಮಾ ಪ್ರೀತಿಯನ್ನು ಈಗ ತೋರಿಸುತ್ತಿದ್ದಾರೆ.

English summary
Kannada Actor Ravichandran's son Manoranjan and Vikram are busy with their movies.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada