40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾಗೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಧಿಕೃತ ಖಾತೆ ಹೊಂದಿಲ್ಲದೇ ಇದ್ದ ರವಿಮಾಮ ಈಗ ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮೂಲಕ ಜನರಿಗೆ ಹತ್ತಿರವಾಗಲು ನಿರ್ಧರಿಸಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ 1n1ly Ravichandran ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋವೊಂದು ಹಂಚಿಕೊಂಡಿರುವ ರವಿಚಂದ್ರನ್ 40, 50, 60ರ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. 40, 50, 60 ನನಗೆ ಅಭ್ಯಾಸ ಇಲ್ಲ ಎಂದು ಹೇಳುವ ರವಿಚಂದ್ರನ್ ಅದರ ಹಿಂದಿನ ಸೀಕ್ರೆಟ್ ಏನು ಎಂದು ವಿವರಿಸಿದ್ದಾರೆ.

Ravichandran shares about Eswari Production journey in Simple Words

* 40 - ರವಿಚಂದ್ರನ್ ಅವರು ಈ ಸಿನಿಮಾ ಲೋಕಕ್ಕೆ ಬಂದು 40 ವರ್ಷ ಆಗಿದೆ.

* 50 - ರವಿಚಂದ್ರನ್ ರಾಜಾಜಿನಗರದ ಮನೆಗೆ ಬಂದು 50 ವರ್ಷ ಆಯಿತು. ಈಶ್ವರಿ ಪ್ರೊಡಕ್ಷನ್‌ಗೆ 50 ವರ್ಷ ಆಯಿತು.

* 60 - ಮೇ 30ಕ್ಕೆ ರವಿಚಂದ್ರನ್ ಅವರ ವಯಸ್ಸು 60 ವರ್ಷ ಆಗುತ್ತದೆ.

''ನನ್ನ ಜರ್ನಿ ಶುರುವಾಗಿದ್ದು ನಮ್ಮ ಅಪ್ಪ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆಯಿಂದ. ಅದು ಇಷ್ಟು ದೂರು ಬಂದಿದ್ದು ನೀವು ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆಯಿಂದ. ಈ ಪ್ರೀತಿ ಹಾಗೆ ಮುಂದುವರಿಯಲಿ. ಎಲ್ಲರೂ ಸೇರಿ ಆಚರಿಸೋಣ'' ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ.

ಬಹಳ ವಿಶೇಷ ಹಾಗೂ ವಿಭಿನ್ನವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಿದ ಕ್ರೇಜಿಸ್ಟಾರ್, ಇನ್ಮುಂದೆ ತಮ್ಮ ಸಿನಿಮಾ ಹಾಗು ತಮ್ಮ ಬದುಕಿನ ಹಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ.

ಪ್ರಸ್ತುತ, ರಾಜೇಂದ್ರ ಪೊನ್ನಪ್ಪ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಪಿ ವಾಸು ಜೊತೆ ದೃಶ್ಯ 2 ಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

More from Filmibeat

English summary
Crazy Star Ravichandran shares about Eswari Production and journey in Simple Words.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X