For Quick Alerts
  ALLOW NOTIFICATIONS  
  For Daily Alerts

  15 ಲಕ್ಷ ಬೆಲೆಯ ದುಬಾರಿ ಬೈಕ್ ಖರೀದಿಸಿದ ಕ್ರೇಜಿಸ್ಟಾರ್ ಪುತ್ರ

  |
  ಹಲವು ವರ್ಷಗಳ ನಂತರ ರವಿಮಾಮನ ಮನೆಯಲ್ಲಿ ಈ ಸಂಭ್ರಮ

  ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಚೀಲಂ ಮತ್ತು ಪ್ರಾರಂಭ ಎಂಬ ಎರಡು ಸಿನಿಮಾಗಳನ್ನ ಮಾಡ್ತಿದ್ದು, ಚಿತ್ರೀಕರಣ ಶುರು ಮಾಡಿದ್ದಾರೆ. ಇತ್ತೀಚಿಗಷ್ಟೆ ಸಹೋದರಿಯ ಮದುವೆ ಮುಗಿಸಿದ ಮನೋರಂಜನ್ ಈಗ ಮನೆಗೆ ಮತ್ತೊಬ್ಬ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ.

  ಬಹಳ ಕನಸು ಹೊಂದಿದ್ದ, ಆಸೆ ಇಟ್ಟುಕೊಂಡಿದ್ದ ದುಬಾರಿ ಬೈಕ್ ಖರೀದಿಸಿದ್ದಾರೆ ರವಿಚಂದ್ರನ್ ಪುತ್ರ ಮನೋರಂಜನ್. ಈ ಬಗ್ಗೆ ರವಿಚಂದ್ರನ್ ಪುತ್ರನೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ಬಹುದಿನದ ಆಸೆ ನೆರವೇರಿದ ಸಂಭ್ರಮವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಕ್ರೇಜಿಸ್ಟಾರ್ ಪುತ್ರನ ಪ್ರೇಯಸಿ ಯಾರು? ಇಂದೇ ಸಿಗುತ್ತೆ ಉತ್ತರ ಕ್ರೇಜಿಸ್ಟಾರ್ ಪುತ್ರನ ಪ್ರೇಯಸಿ ಯಾರು? ಇಂದೇ ಸಿಗುತ್ತೆ ಉತ್ತರ

  'ಶಾಲೆಗೆ ಹೋಗುವ ದಿನದಿಂದ ಈ ಬೈಕ್ ಸವಾರಿ ಮಾಡಬೇಕು ಎಂಬ ಆಸೆ, ಆದರೆ ಅದನ್ನ ನಿಜ ಜೀವನದಲ್ಲಿ ನೋಡುವುದಕ್ಕೂ ಸಿಕ್ಕಿರಲಿಲ್ಲ. ಆದರೆ ಇಂದು ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿದೆ. ಇದು ಕನಸಿನ ಬೈಕ್'' ಎಂದು ಟ್ವೀಟ್ ಮಾಡಿದ್ದಾರೆ ಮನೋರಂಜನ್.

  'ಚಿಲಂ' ಚಿತ್ರಕ್ಕಾಗಿ ಮಾಸ್ ರಗಡ್ ಲುಕ್ ನಲ್ಲಿ ಮನೋರಂಜನ್ 'ಚಿಲಂ' ಚಿತ್ರಕ್ಕಾಗಿ ಮಾಸ್ ರಗಡ್ ಲುಕ್ ನಲ್ಲಿ ಮನೋರಂಜನ್

  ಅಂದ್ಹಾಗೆ, ಆ ಬೈಕ್ ಯಾವುದು ಎಂದು ನೋಡಿದಾಗ ಅದರ ಹೆಸರು 'ಡುಕಾಟಿ 959'. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕಿನ ಬೆಲೆ ಸುಮಾರು 15 ಲಕ್ಷ ರೂಪಾಯಿ ಇದೆ.

  ಅಂದ್ಹಾಗೆ, ಡುಕಾಟಿ 959 ಬೈಕ್ 955 ಸಿಸಿ ಹೊಂದಿದೆ. ಸುಮಾರು 200 ಕೆಜಿ ತೂಕ ಇದೆ. ಪೆಟ್ರೋಲ್ ಮಾದರಿ ಬೈಕ್ ಇದಾಗಿದ್ದು, 14 ಕಿಮೀ ಮೈಲೇಜ್ ಕೊಡುತ್ತಂತೆ.

  ಚಂದ್ರಕಲಾ ನಿರ್ದೇಶನ ಮಾಡುತ್ತಿರುವ ಚೀಲಂ ಚಿತ್ರದಲ್ಲಿ ಮನೋರಂಜನ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಕೂಡ 'ಚಿಲಂ' ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಕಬೀರ ಚಿತ್ರ ಖ್ಯಾತಿಯ ನವೀನ್​ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ನೋಬಿನ್ ಪೌಲ್ ಸಂಗೀತ ನೀಡುತ್ತಿದ್ದಾರೆ.

  English summary
  Crazy star Ravichandran son manoranjan bought ducati 959 new bike. this bike price in india 15 lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X