Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
15 ಲಕ್ಷ ಬೆಲೆಯ ದುಬಾರಿ ಬೈಕ್ ಖರೀದಿಸಿದ ಕ್ರೇಜಿಸ್ಟಾರ್ ಪುತ್ರ
Recommended Video
ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಚೀಲಂ ಮತ್ತು ಪ್ರಾರಂಭ ಎಂಬ ಎರಡು ಸಿನಿಮಾಗಳನ್ನ ಮಾಡ್ತಿದ್ದು, ಚಿತ್ರೀಕರಣ ಶುರು ಮಾಡಿದ್ದಾರೆ. ಇತ್ತೀಚಿಗಷ್ಟೆ ಸಹೋದರಿಯ ಮದುವೆ ಮುಗಿಸಿದ ಮನೋರಂಜನ್ ಈಗ ಮನೆಗೆ ಮತ್ತೊಬ್ಬ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ.
ಬಹಳ ಕನಸು ಹೊಂದಿದ್ದ, ಆಸೆ ಇಟ್ಟುಕೊಂಡಿದ್ದ ದುಬಾರಿ ಬೈಕ್ ಖರೀದಿಸಿದ್ದಾರೆ ರವಿಚಂದ್ರನ್ ಪುತ್ರ ಮನೋರಂಜನ್. ಈ ಬಗ್ಗೆ ರವಿಚಂದ್ರನ್ ಪುತ್ರನೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ಬಹುದಿನದ ಆಸೆ ನೆರವೇರಿದ ಸಂಭ್ರಮವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ಪುತ್ರನ ಪ್ರೇಯಸಿ ಯಾರು? ಇಂದೇ ಸಿಗುತ್ತೆ ಉತ್ತರ
'ಶಾಲೆಗೆ ಹೋಗುವ ದಿನದಿಂದ ಈ ಬೈಕ್ ಸವಾರಿ ಮಾಡಬೇಕು ಎಂಬ ಆಸೆ, ಆದರೆ ಅದನ್ನ ನಿಜ ಜೀವನದಲ್ಲಿ ನೋಡುವುದಕ್ಕೂ ಸಿಕ್ಕಿರಲಿಲ್ಲ. ಆದರೆ ಇಂದು ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿದೆ. ಇದು ಕನಸಿನ ಬೈಕ್'' ಎಂದು ಟ್ವೀಟ್ ಮಾಡಿದ್ದಾರೆ ಮನೋರಂಜನ್.
'ಚಿಲಂ' ಚಿತ್ರಕ್ಕಾಗಿ ಮಾಸ್ ರಗಡ್ ಲುಕ್ ನಲ್ಲಿ ಮನೋರಂಜನ್
ಅಂದ್ಹಾಗೆ, ಆ ಬೈಕ್ ಯಾವುದು ಎಂದು ನೋಡಿದಾಗ ಅದರ ಹೆಸರು 'ಡುಕಾಟಿ 959'. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕಿನ ಬೆಲೆ ಸುಮಾರು 15 ಲಕ್ಷ ರೂಪಾಯಿ ಇದೆ.
ಅಂದ್ಹಾಗೆ, ಡುಕಾಟಿ 959 ಬೈಕ್ 955 ಸಿಸಿ ಹೊಂದಿದೆ. ಸುಮಾರು 200 ಕೆಜಿ ತೂಕ ಇದೆ. ಪೆಟ್ರೋಲ್ ಮಾದರಿ ಬೈಕ್ ಇದಾಗಿದ್ದು, 14 ಕಿಮೀ ಮೈಲೇಜ್ ಕೊಡುತ್ತಂತೆ.
ಚಂದ್ರಕಲಾ ನಿರ್ದೇಶನ ಮಾಡುತ್ತಿರುವ ಚೀಲಂ ಚಿತ್ರದಲ್ಲಿ ಮನೋರಂಜನ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಕೂಡ 'ಚಿಲಂ' ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಕಬೀರ ಚಿತ್ರ ಖ್ಯಾತಿಯ ನವೀನ್ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ನೋಬಿನ್ ಪೌಲ್ ಸಂಗೀತ ನೀಡುತ್ತಿದ್ದಾರೆ.