For Quick Alerts
  ALLOW NOTIFICATIONS  
  For Daily Alerts

  ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ಈ ವರ್ಷ ಮತ್ತೊಂದು ಅದ್ದೂರಿ ಮದುವೆಗೆ ಸಜ್ಜಾಗುತ್ತಿದೆ. ಹೌದು, ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಈ ವರ್ಷ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಮನೋರಂಜನ್ ಸಾಹೇಬ ಮತ್ತು ಬೃಹಸ್ಪತಿ ಸಿನಿಮಾ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬಂದಿದ್ದರು.

  ಇದೀಗ ಮನೋರಂಜನ್ ಮದುವೆ ವಿಚಾರ ಸದ್ದು ಮಾಡುತ್ತಿದೆ. 2011ರಲ್ಲೇ ಮದುವೆ ಆಗುವ ಬಗ್ಗೆ ಮನೋರಂಜನ್ ಮಾಹಿತಿ ನೀಡಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೆ ರವಿಚಂದ್ರನ್ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಮಗಳ ಮದುವೆ ಸಂಭ್ರಮ ಮುಗಿಯುತ್ತಿದ್ದಂತೆ ರವಿಚಂದ್ರನ್ ದಂಪತಿ ಮಗನ ಮದುವೆ ತಯಾರಿ ನಡೆಸಿದ್ದಾರೆ.

  ಲಿಪ್ ಲಾಕ್ ಸೀನ್ ಮಾಡಿದ ಮನೋರಂಜನ್ ರವಿಚಂದ್ರನ್ಲಿಪ್ ಲಾಕ್ ಸೀನ್ ಮಾಡಿದ ಮನೋರಂಜನ್ ರವಿಚಂದ್ರನ್

  2021ರಲ್ಲೇ ನಡೆಯಲಿದೆ ಮನೋರಂಜನ್ ಮದುವೆ

  2021ರಲ್ಲೇ ನಡೆಯಲಿದೆ ಮನೋರಂಜನ್ ಮದುವೆ

  ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡಿರುವ ಮನೋರಂಜನ್ ಇದೀಗ ತನ್ನ ಮದುವೆ ವಿಚಾರ ಬಹಿರಂಗ ಪಡಿಸಿದ್ದಾರೆ. 2021ರಲ್ಲೇ ಮದುವೆ ಆಗುವುದಾಗಿ ಹೇಳಿದ್ದಾರೆ. ಹಾಗಾದರೆ ಲವ್ ಮ್ಯಾರೇಜ್ ಆಗಲಿದ್ದಾರಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಮನೋರಂಜನ್ ಅರೇಂಜ್ ಮ್ಯಾರೇಜ್ ಆಗುವುದಾಗಿ ಹೇಳಿದ್ದಾರೆ. ಅಪ್ಪ-ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತಾರಂತೆ. ನನಗೀಗ 32 ವರ್ಷವಾಗಿದೆ. ಮನೆಯಲ್ಲಿ ಹುಡುಗಿ ಹುಡುಕುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

  ಮುಗಿಲ್ ಪೇಟೆ ಸಿನಿಮಾದಲ್ಲಿ ಮನೋರಂಜನ್ ಬ್ಯುಸಿ

  ಮುಗಿಲ್ ಪೇಟೆ ಸಿನಿಮಾದಲ್ಲಿ ಮನೋರಂಜನ್ ಬ್ಯುಸಿ

  ಸಿನಿಮಾ ವಿಚಾರಕ್ಕೆ ಬರುವುದಾರೆ, ಮನೋರಂಜನ್ ಸದ್ಯ ಮನೋರಂಜನ್ ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸದ್ಯ ಬಹುನಿರೀಕ್ಷೆಯ 'ಮುಗಿಲ್ ಪೇಟೆ' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫೆಬ್ರವರಿ ತಿಂಗಳಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

  'ಸ್ಟಾರ್‌ಗಳ ಮೇಲೆ ಅವಲಂಬನೆ ಆಗೋದು ಬಿಡಿ': ನಿರ್ಮಾಪಕರಿಗೆ ರವಿಚಂದ್ರನ್ ಕಿವಿಮಾತು'ಸ್ಟಾರ್‌ಗಳ ಮೇಲೆ ಅವಲಂಬನೆ ಆಗೋದು ಬಿಡಿ': ನಿರ್ಮಾಪಕರಿಗೆ ರವಿಚಂದ್ರನ್ ಕಿವಿಮಾತು

  ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ

  ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ

  ಮುಗಿಲ್ ಪೇಟೆ ಸಿನಿಮಾದ ಮೇಲೆ ಮನೋರಂಜನ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಹೋದರ ವಿಕ್ರಮ್ ಸಹ ಈ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ್ದಾರೆ. ಲಾಕ್ ಡೌನ್ ಬಳಿಕ ಮುಗಿಲ್ ಪೇಟೆ ಸಿನಿಮಾತಂಡ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ತಯಾರಿಯಲ್ಲಿದ್ದಾರೆ.

  ಪ್ರಭಾಸ್ ಗಾಗಿ ಹೈದರಾಬಾದ್ ಗೆ ಬಂದ Prashanth Neel | Filmibeat Kannada
  ರಿಲೀಸ್ ಗೆ ರೆಡಿ ಇದೆ 'ಪ್ರಾರಂಭ' ಸಿನಿಮಾ

  ರಿಲೀಸ್ ಗೆ ರೆಡಿ ಇದೆ 'ಪ್ರಾರಂಭ' ಸಿನಿಮಾ

  ಇನ್ನು 'ಪ್ರಾರಂಭ' ಎನ್ನುವ ಸಿನಿಮಾ ಕೂಡ ಮನು ಕೈಯಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ರಿಲೀಸ್ ಗೆ ಕಾಯುತ್ತಿದೆ. ಕಳೆದ ವರ್ಷವೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಸಾಧ್ಯವಾಗಿಲ್ಲ. ಈ ಸಿನಿಮಾ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ

  English summary
  Crazy star Ravichandran son Manoranjan Ravichandran talks About his marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X