'ದೇವಕಿ' ಸಿನಿಮಾ ನೋಡಿ ರವಿಚಂದ್ರನ್ ಹೇಳಿದ್ದೇನು ?

''ಇಡೀ ಚಿತ್ರತಂಡ ನಿಯತ್ತಾಗಿ ಕೆಲಸ ಮಾಡಿದೆ. ಇಂತಹ ಸಿನಿಮಾಗಳು ಗೆಲ್ಲಬೇಕು...ಇಂತಹ ಸಿನಿಮಾಗಳು ಗೆಲ್ಲಬೇಕು...'' ಇದು ನಟ ರವಿಚಂದ್ರನ್ 'ದೇವಕಿ' ಸಿನಿಮಾ ನೋಡಿದ ಬಳಿಕ ಹೇಳಿದ ಮಾತು.

ರವಿಚಂದ್ರನ್ ಎಲ್ಲ ಸಿನಿಮಾಗಳನ್ನು ನೋಡಲು ಬರುವುದಿಲ್ಲ. ಎಲ್ಲ ಸಿನಿಮಾಗಳನ್ನು ಅವರು ಹೊಗಳುವುದಿಲ್ಲ. ರವಿಚಂದ್ರನ್ ಹೇಳಿದ್ದಾರೆ ಎಂದ ಮೇಲೆ ಆ ಸಿನಿಮಾ ಚೆನ್ನಾಗಿ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿ ಇದೆ.

ರವಿಚಂದ್ರನ್ ಇದೀಗ ಪ್ರಿಯಾಂಕ ಉಪೇಂದ್ರ ನಟನೆಯ 'ದೇವಕಿ' ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಆಯೋಜನೆ ಮಾಡಿದ್ದ, ಪ್ರೀಮೀಯರ್ ಶೋ ನಲ್ಲಿ ರವಿಚಂದ್ರನ್ ಭಾಗಿಯಾಗಿದ್ದು, ಸಿನಿಮಾ ನೋಡಿ ಖುಷಿ ಪಟ್ಟರು.

'ದೇವಕಿ' ಸಿನಿಮಾ ನೋಡಿ ನಟ ರವಿಚಂದ್ರನ್ ಆಡಿದ ಮಾತು ಹೀಗಿದೆ ಓದಿ...

ಎಲ್ಲರ ಕೆಲಸ ತೆರೆ ಮೇಲೆ ಕಾಣಿಸುತ್ತಿದೆ

ಎಲ್ಲರ ಕೆಲಸ ತೆರೆ ಮೇಲೆ ಕಾಣಿಸುತ್ತಿದೆ

''ಒಂದು ಸಿನಿಮಾ ಮಾಡಬೇಕು ಅಂದರೆ ಮನಸು ಇರಬೇಕು. ಬಳಿಕ ಕಾಳಜಿ ಇರಬೇಕು. ಅದು ಈ ಸಿನಿಮಾದಲ್ಲಿ ಕಾಣಿಸುತ್ತದೆ. ಇದು ಇಲ್ಲಿನ ಟೆಕ್ನಿಷಿಯನ್ ಗಳಲ್ಲಿ ಕಾಣುತ್ತದೆ. ಪ್ರಿಯಾಂಕ ಅವರು, ಅವರ ಮಗಳು ಐಶ್ವರ್ಯ ತುಂಬ ಚೆನ್ನಾಗಿ ನಟಿಸಿದ್ದಾರೆ. ತೆರೆ ಮೇಲೆ ಹಾಗೂ ತೆರೆ ಹಿಂದಿನ ಪ್ರತಿಯೊಬ್ಬರ ಕೆಲಸ ಕಾಣಿಸುತ್ತಿದೆ. ಅದೇ ಈ ಸಿನಿಮಾದ ಪ್ಲಾಸ್ ಪಾಯಿಂಟ್ ಆಗಿದೆ.'' - ರವಿಚಂದ್ರನ್, ನಟ, ನಿರ್ದೇಶಕ

ಸಿನಿಮಾ ಹೃದಯಕ್ಕೆ ತಟ್ಟುತ್ತದೆ

ಸಿನಿಮಾ ಹೃದಯಕ್ಕೆ ತಟ್ಟುತ್ತದೆ

''ನಿರ್ದೇಶಕರು ಸಿನಿಮಾ ಶುರು ಮಾಡಿದಾಗ ಮೊದಲು ತಲೆಗೆ ತಟ್ಟುತ್ತದೆ. ಆದರೆ, ಸಿನಿಮಾ ಮುಗಿದಾಗ ಹೃದಯಕ್ಕೆ ತಟ್ಟುತ್ತದೆ. ಯಾವುದೇ ಸಿನಿಮಾ ಆಗಿದ್ದರೂ ಅದಕ್ಕೆ ವಾತಾವರಣ ಮುಖ್ಯ. ಈ ಸಿನಿಮಾವನ್ನು ಬೆಂಗಳೂರಿನಲ್ಲಿ ಏಕೆ ಮಾಡಿಲ್ಲ ಎನ್ನುವುದಕ್ಕಿಂತ, ಕೊಲ್ಕತ್ತಾದಲ್ಲಿ ಶೂಟಿಂಗ್ ಮಾಡಿದ್ದಾರೆ. ಅದೇ ಚಿತ್ರಕ್ಕೆ ಪ್ಲಾಸ್ ಆಗಿದೆ.'' - ರವಿಚಂದ್ರನ್, ನಟ, ನಿರ್ದೇಶಕ

ಇಡೀ ತಂಡ ನಿಯತ್ತಾಗಿ ಕೆಲಸ ಮಾಡಿದೆ

ಇಡೀ ತಂಡ ನಿಯತ್ತಾಗಿ ಕೆಲಸ ಮಾಡಿದೆ

''ಒಂದು ಸಮಾಜದಲ್ಲಿ ಕೆಟ್ಟ ವ್ಯವಸ್ಥೆಯ ನಡುವೆ ಹೇಗೆ ಒಬ್ಬ ತಾಯಿ ತನ್ನ ಮಗುವನ್ನು ಉಳಿಸಿಕೊಳ್ಳುತ್ತಾಳೆ. ಅದಕ್ಕೆ ಆಕೆ ಮಾಡುವ ಒದ್ದಾಟ, ಕೊನೆಗೆ ಆ ಮಗು ಹೇಳುವ ಕೊನೆಯ ಸಾಲು. ಅಲ್ಲೇ ಆ ಸಿನಿಮಾ ಗೆದ್ದಾಯ್ತು. ಇಡೀ ತಂಡ ನಿಯತ್ತಾಗಿ ಕೆಲಸ ಮಾಡಿದೆ ಅದು ತೆರೆ ಮೇಲೆ ಕಾಣಿಸುತ್ತಿದೆ.'' - ರವಿಚಂದ್ರನ್, ನಟ, ನಿರ್ದೇಶಕ

ಇಂತಹ ಸಿನಿಮಾಗಳು ಗೆಲ್ಲಬೇಕು

ಇಂತಹ ಸಿನಿಮಾಗಳು ಗೆಲ್ಲಬೇಕು

''ಇಡೀ ಚಿತ್ರದಲ್ಲಿ ಎಲ್ಲಿಯೂ ಹಾಡಿಲ್ಲ, ಕಾಮಿಡಿ ಇಲ್ಲ. ಆದರೆ, ಅದೆಲ್ಲ ಬೇಕು ಎನಿಸುವುದಿಲ್ಲ. ಇಡೀ ಸಿನಿಮಾ ಹಾಗೆ ಕೂರಿಸುತ್ತದೆ. ಪದೇ ಪದೇ ಟ್ವಿಸ್ಟ್ ಗಳು ಬರುತ್ತದೆ. ಇಂಟರ್ ವೆಲ್ ನಲ್ಲಿ ಒಳ್ಳೆಯ ತಿರುವು ಇದೆ. ಮಗುವಿನ ಹತ್ತಿರ ಕ್ರೈಮ್ಯಾಕ್ಸ್ ಹೇಳಿಸಿರುವುದು ಚೆನ್ನಾಗಿದೆ.. ಇಂತಹ ಸಿನಮಾಗಳು ಗೆಲ್ಲಬೇಕು... ಇಂತಹ ಸಿನಮಾಗಳು ಗೆಲ್ಲಬೇಕು...'' - ರವಿಚಂದ್ರನ್, ನಟ, ನಿರ್ದೇಶಕ

ಹೇಗಿದೆ 'ದೇವಕಿ' ಸಿನಿಮಾ ?

ಹೇಗಿದೆ 'ದೇವಕಿ' ಸಿನಿಮಾ ?

ಇದು ಅಮ್ಮ ಮಗಳ ಕಥೆ. ಹಾಗೆಂದ ಮಾತ್ರಕ್ಕೆ ಸೆಂಟಿಮೆಂಟ್ ಸಿನಿಮಾ ಅಲ್ಲ... ಇಲ್ಲಿ ರೌಡಿಗಳ ಕೌರ್ಯ ಇದೆ ಹಾಗೆಂದು ಇದು ರೌಡಿಂಸಂ ಸಿನಿಮಾ ಅಲ್ಲ... ಮಾಫಿಯಾ ಜಗತ್ತಿನ ಅನಾವರಣ ಇಲ್ಲಿ ಮಾಡಲಾಗಿದೆ. ಆದ್ರೆ, ಇದು ಅಂಡರ್ ವರ್ಲ್ಡ್ ಸಿನಿಮಾ ಅಲ್ಲವೇ ಅಲ್ಲ.... ಆದರೆ, ಇಷ್ಟೂ ಅಂಶಗಳು ಬೇರೆಯದ್ದೆ ಶೈಲಿಯಲ್ಲಿ ಇರುವ ಪಕ್ಕಾ ರಿಯಲಿಸ್ಟಿಕ್ ಸಿನಿಮಾವೇ 'ದೇವಕಿ'.

More from Filmibeat

English summary
Kannada actor Ravichandran spoke about 'Devaki' kannada movie. The movie released today (July 5th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X