For Quick Alerts
  ALLOW NOTIFICATIONS  
  For Daily Alerts

  35 ವರ್ಷದ ರವಿಚಂದ್ರನ್ ಕನಸಿನ ಸಿನಿಮಾ ಶುರು ಆಗ್ತಿದೆ

  |

  ರವಿಚಂದ್ರನ್ ಕನ್ನಡ ಚಿತ್ರರಂಗದ ಕನಸುಗಾರ. ಕನಸುಗಾರನ ಒಂದು ಕನಸು ಎಂಬ ಟ್ಯಾಗ್ ಲೈನ್ ನಲ್ಲಿ ಬರುವ ಡೈರೆಕ್ಟರ್ ರವಿಚಂದ್ರನ್, ಇದೀಗ ಮತ್ತೊಂದು ಹೊಸ ಕನಸಿಗೆ ಸಿನಿಮಾ ರೂಪ ನೀಡುತ್ತಿದ್ದಾರೆ.

  ರವಿಚಂದ್ರನ್ ರಿಗೆ 35 ವರ್ಷಗಳಿಂದ ಒಂದು ಆಸೆ ಇತ್ತು. ಅದು ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂಬುದು. 'ಪ್ರೇಮಲೋಕ' ಸಿನಿಮಾದ ನಂತರ ಅದೇ ರೀತಿಯಾದ ಸಂಗೀತಮಯ ಸಿನಿಮಾ ಮಾಡಬೇಕು ಎನ್ನುವುದು ರವಿಚಂದ್ರನ್ ಅವರ ದೊಡ್ಡ ಕನಸಾಗಿತ್ತು.

  ಡಾಕ್ಟರೇಟ್ ಪಡೆದ ರವಿಚಂದ್ರನ್: ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್ಡಾಕ್ಟರೇಟ್ ಪಡೆದ ರವಿಚಂದ್ರನ್: ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್

  ಮಗಳ ಮದುವೆಯ ನಂತರ ರವಿಚಂದ್ರನ್ ಆಸೆ ಈಡೇರಿದೆ. ಅವರ ಬಹುದಿನದ ಕನಸು ನನಸಾಗುತ್ತಿದೆ. ಅಕ್ಟೋಬರ್ 18ಕ್ಕೆ ಆ ಸಿನಿಮಾದ ಕಥೆ ಒಂದು ಹಂತಕ್ಕೆ ಮುಗಿದಿದೆ. ಹೀಗಾಗಿ ಈ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಅದಷ್ಟು ಬೇಗ ಈ ಸಿನಿಮಾ ಪ್ರಾರಂಭ ಮಾಡುತ್ತಾರಂತೆ.

  ''ಪುತ್ರಿಯ ಮದುವೆ ಮಾಡಿದ ಬಳಿಕ ಭಾರ ಕಡಿಮೆ ಆಗಿದೆ, ವೇಗ ಹೆಚ್ಚಾಗಿದೆ. ಇನ್ನು ಮುಂದೆ ನಾನು ನೀಡುವ ಸಿನಿಮಾಗಳು ಬೇರೆಯದ್ದೆ ರೀತಿ ಇರುತ್ತದೆ. ಮತ್ತೆ 'ಪ್ರೇಮಲೋಕ' ದಿನಕ್ಕೆ ಹೋಗಿದ್ದೇನೆ'' ಎಂದು ರವಿಚಂದ್ರನ್ ಹೇಳಿದ್ದಾರೆ.

  ರವಿಚಂದ್ರನ್ ತಂದೆ ನೆನೆದು ಕಣ್ಣೀರು ಹಾಕಿದ ದ್ವಾರಕೀಶ್ರವಿಚಂದ್ರನ್ ತಂದೆ ನೆನೆದು ಕಣ್ಣೀರು ಹಾಕಿದ ದ್ವಾರಕೀಶ್

  ಅಂದಹಾಗೆ, ನಿನ್ನೆ ನಟ ರವಿಚಂದ್ರನ್ ರಿಗೆ ಸಿ ಎಂ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ

  English summary
  Actor Ravichandran spoke about his dream project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X