'ಕುರುಕ್ಷೇತ್ರ'ದ ಈ ವಿಚಾರದ ಬಗ್ಗೆ ರವಿಚಂದ್ರನ್ ಗೆ ಬೇಸರ ಇದೆಯಂತೆ

Recommended Video

Kurukshetra Movie : ಕುರುಕ್ಷೇತ್ರ ಸಿನಿಮಾದ ವಿಚಾರಕ್ಕೆ ರವಿಚಂದ್ರನ್ ಗೆ ಬೇಸರ ಯಾಕೆ?

'ಕುರುಕ್ಷೇತ್ರ' ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು. ಆದರೆ, ಈ ಸಿನಿಮಾ ಯಾವಾಗ ಬರುತ್ತೆ ಎನ್ನುವುದು ಈ ವರೆಗೆ ತಿಳಿದಿಲ್ಲ.

'ಕುರುಕ್ಷೇತ್ರ' ಸಿನಿಮಾದ ಹೈಲೈಟ್ ಚಿತ್ರದ ಕಲಾವಿದರ ಪಟ್ಟಿ. ಇಲ್ಲಿ ದರ್ಶನ್ ದುರ್ಯೋದನನ ಪಾತ್ರ ಮಾಡಿದ್ದರೆ, ನಟ ರವಿಚಂದ್ರನ್ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡಿದ್ದಾರೆ. ರವಿಚಂದ್ರನ್ ಮೊದಲ ಬಾರಿಗೆ ಈ ಬಗೆಯ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದೆ.

ಮತ್ತೊಂದು ಕಡೆ ರವಿಚಂದ್ರನ್ ಸಿನಿಮಾದ ಒಂದು ವಿಚಾರಕ್ಕೆ ಬೇಸರವಾಗಿದ್ದಾರೆ. ಆದರೆ, ಅದು ತುಂಬ ಗಂಬೀರ ವಿಷಯಕ್ಕಾಗಿ ಅಲ್ಲ. ಇತ್ತೀಚಿಗಷ್ಟೆ ಪ್ರತಿಕಾಗೋಷ್ಟಿಯೊಂದರಲ್ಲಿ ಮಾತನಾಡಿರುವ ಅವರು ತಮಾಷೆಯಾಗಿ ತಮ್ಮದೆ ಸ್ಟೈಲ್ ನಲ್ಲಿ 'ಕುರುಕ್ಷೇತ್ರ'ದ ಬಗ್ಗೆ ವಿವರಿಸಿದರು. ಮುಂದೆ ಓದಿ....

ಹೀರೋಹಿನ್ ಇಲ್ಲ

ಹೀರೋಹಿನ್ ಇಲ್ಲ

ನಟ ರವಿಚಂದ್ರನ್ ಎಂದ ತಕ್ಷಣ ಅವರ ಹಾಡುಗಳು, ಹಾಡಿನಲ್ಲಿ ಅವರ ಜೊತೆಗೆ ಇರುವ ನಾಯಕಿಯರು ನೆನಪಿಗೆ ಬರುತ್ತಾರೆ. ಆದರೆ, 'ಕುರುಕ್ಷೇತ್ರ' ಸಿನಿಮಾದಲ್ಲಿ ರವಿಚಂದ್ರನ್ ರಿಗೆ ಹೀರೋಯಿನ್ ಇಲ್ಲವಂತೆ. ನನಗೆ ಕೃಷ್ಣನ ಪಾತ್ರ ನೀಡಿದ್ದಾರೆ. ಆದರೆ, ಯಾವುದೇ ಹೀರೋಯಿನ್ ನೀಡಿಲ್ಲ ಎಂದು ರವಿಚಂದ್ರನ್ ಕಾರ್ಯಕ್ರಮದಲ್ಲಿ ನಗೆ ಚಟಾಕಿ ಹಾರಿಸಿದರು.

ಅವರಿಗೆ ಬೇರೆ ಯಾರು ಕಾಣಿಸಲಿಲ್ಲ

ಅವರಿಗೆ ಬೇರೆ ಯಾರು ಕಾಣಿಸಲಿಲ್ಲ

''ಕನ್ನಡದಲ್ಲಿ ನನ್ನನ್ನು ಬಿಟ್ಟರೆ ಬೇರೆ ಕೃಷ್ಣನೇ ಇರಲಿಲ್ಲ. ಅದಕ್ಕೆ ಹೊಟ್ಟೆ ಇದ್ದರೂ ನನಗೆ ಆ ಪಾತ್ರ ನೀಡಿದರು. ನನ್ನ ಇಮೇಜ್ ಆದರೂ ಕೃಷ್ಣನ ಪಾತ್ರಕ್ಕೆ ವರ್ಕ್ ಔಟ್ ಆಗುತ್ತದೆ ಅಂತ.'' ಆದರೆ, ಕೃಷ್ಣ ಪಾತ್ರ ಮಾಡಿಸಿದರೂ ಜೊತೆಗೆ ಒಂದು ಹುಡುಗಿನೂ ಕೊಟ್ಟಿಲ್ಲ. ಒಂದು ಸೀನ್ ನಲ್ಲಿ ಹುಡುಗಿ ಇದ್ದರೂ ಅಷ್ಟು ಕೆಲಸ ಇಲ್ಲ. ಎಲ್ಲರೂ ದ್ರಾಕ್ಷಿ ಅಂತ ನನ್ನ ಬಗ್ಗೆ ಹೇಳ್ತಾರೆ, ಇಲ್ಲಿ ದಾಕ್ಷಿ ತಿಸಿಸುವುದು ಇಲ್ಲ.'' ಎಂದು ರವಿಚಂದ್ರನ್ ತಮ್ಮ ಸ್ಟೈಲ್ ನಲ್ಲಿ ಮಾತನಾಡಿದರು.

ಕೃಷ್ಣ ಇಂಟರ್ ವೆಲ್ ನಂತರ ಬರುತ್ತಾನೆ

ಕೃಷ್ಣ ಇಂಟರ್ ವೆಲ್ ನಂತರ ಬರುತ್ತಾನೆ

ರವಿಚಂದ್ರನ್ ಅವರ ಪಾತ್ರ 'ಕುರುಕ್ಷೇತ್ರ' ಸಿನಿಮಾದಲ್ಲಿ ಇಂಟರ್ ವೆಲ್ ಬರುತ್ತದೆಯಂತೆ. ''ನಾನೇ ಕುರುಕ್ಷೇತ್ರದಲ್ಲಿ ಫಿಟ್ಟಿಂಗ್ ಮಾಸ್ಟರ್. ನನ್ನ ಪಾತ್ರ ಇಂಟರ್ ವೆಲ್ ನಂತರ ಬರುತ್ತದೆ. ಇಲ್ಲಿ ನಾನೇ ಯುದ್ಧ ಶುರು ಮಾಡಿಸುವುದು'' ಎಂದು ರವಿಚಂದ್ರನ್ ತಮ್ಮ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಈಗಾಗಲೇ ಅವರ ಪಾತ್ರದ ಶೂಟಿಂಗ್ ಮುಗಿದಿದೆಯಂತೆ.

ಹೊಟ್ಟೆ ಕೃಷ್ಣ ಎಂದರು ಬೇಜಾರ್ ಇಲ್ಲ

ಹೊಟ್ಟೆ ಕೃಷ್ಣ ಎಂದರು ಬೇಜಾರ್ ಇಲ್ಲ

''ಕೃಷ್ಣನ ಪಾತ್ರ ಮಾಡಿದ್ದರು ರವಿಚಂದ್ರನ್ ರಿಗೆ ಈ ಸಿನಿಮಾದಲ್ಲಿ ಹೊಟ್ಟೆ ಸ್ವಲ್ಪ ಇದೆಯಂತೆ. ಈ ಬಗ್ಗೆ ಹೇಳಿರೋ ಅವರು ಚಿತ್ರಕ್ಕಾಗಿ ತೆಳಗೆ ಆಗಿದ್ದೆ, ಆದರೂ ನಾನು ಸಿನಿಮಾದಲ್ಲಿ ಸ್ವಲ್ಪ ದಪ್ಪ ಕಾಣಿಸುತ್ತೇನೆ, ಗ್ರಾಫಿಕ್ ನಲ್ಲಿ ಬ್ಯಾಲೆನ್ಸ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ನಾನಿನ್ನು ಅದನ್ನು ನೋಡಿಲ್ಲ. ಮುನಿರತ್ನ ತುಂಬ ಆಸಕ್ತಿಯಿಂದ ಚಿತ್ರವನ್ನು ಮಾಡುತ್ತಿದ್ದಾರೆ.'' ಎಂದು ಕೃಷ್ಣನನ್ನು ರವಿ ವಿವರಿಸಿದರು.

More from Filmibeat

English summary
Actor Ravichandran spoke about 'Kurukshetra' movie krishna role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X