''ಇವತ್ತು ಎಲ್ಲದಕ್ಕೂ ಕಷ್ಟ ಅಂತಾರೆ'' ಇದು ರವಿಚಂದ್ರನ್ ಹೃದಯಸ್ಪರ್ಶಿ ಮಾತು

By Naveen

Recommended Video

NAGARAHAAVU :ನಾಗರಹಾವು ಸಿನಿಮಾ ನೋಡಿ ತಂದೆಯನ್ನು ನೆನೆದ ರವಿ ಮಾಮ..!! | Filmibeat Kannada

ನಟ ರವಿಚಂದ್ರನ್ ಅಪ್ಪಟ್ಟ ಸಿನಿಮಾ ಪ್ರೇಮಿ. ಈ ಸಿನಿಮಾ ಪ್ರೇಮಿ ಈಗ ಒಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ಚಿತ್ರವನ್ನು ಹೊಗಳಿದ್ದಾರೆ, ಈ ರೀತಿಯ ಚಿತ್ರವನ್ನು ಇಂದು ಯಾರು ಮಾಡೋಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ರವಿಚಂದ್ರನ್ ಇಷ್ಟು ಖುಷಿಯಿಂದ ಮಾತನಾಡಿರುವುದು ಬೇರೆ ಯಾವುದೊ ಸಿನಿಮಾ ಬಗ್ಗೆ ಅಲ್ಲ 'ನಾಗರಹಾವು' ಬಗ್ಗೆ.

ಪುಟ್ಟಣ್ಣ ಕಣಗಾಲ್ ಅವರ ಮಾಸ್ಟರ್ ಪೀಸ್ ಸಿನಿಮಾ ಈಗ ಮತ್ತೆ ಎಲ್ಲ ದಾಖಲೆಗಳನ್ನು ಪೀಸ್ ಪೀಸ್ ಮಾಡಲು ಬರುತ್ತಿದೆ. ರಾಮಾಚಾರಿ ಮತ್ತೆ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾನೆ. ರವಿಚಂದ್ರನ್ ಅವರ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾದ ಈ ಚಿತ್ರ ಈಗ ಹೊಸ ರೂಪ ತಾಳಿದೆ.

ಅಂದಹಾಗೆ, 'ನಾಗರಹಾವು' ಸಿನಿಮಾದ ಬಗ್ಗೆ ರವಿಚಂದ್ರನ್ ಆಡಿರುವ ಪೂರ್ಣ ಮಾತುಗಳು ಮುಂದಿದೆ ಓದಿ...

ತುಂಬ ನೆನಪುಗಳು ಕಾಡುತ್ತದೆ

ತುಂಬ ನೆನಪುಗಳು ಕಾಡುತ್ತದೆ

''ನಾಗರಹಾವು' ಸಿನಿಮಾವನ್ನು ನೋಡುತ್ತಿದ್ದ ಹಾಗೆ ತುಂಬ ನೆನಪುಗಳು ಕಾಡುತ್ತದೆ. ತಂತ್ರಜ್ಙಾನ ಬಳಸಿ ಮತ್ತೆ 'ನಾಗರಹಾವು' ಚಿತ್ರವನ್ನು ರೀ ಕ್ರಿಯೇಟ್ ಮಾಡಲಾಗಿದೆ ಎನ್ನುವುದು ತುಂಬ ಸಂತೋಷ ವಿಷಯ. ಆದರೆ, ಅದೇ ತಂತ್ರಜ್ಙಾನ ಆ ಸಿನಿಮಾ ಮಾಡಿದವರನ್ನು ರೀ ಕ್ರಿಯೇಟ್ ಮಾಡೋಕ್ಕೆ ಆಗುತ್ತಾ ಎನ್ನುವುದು ತುಂಬ ಕಾಡುತ್ತದೆ. ಈ ಸಿನಿಮಾ ನೋಡುತ್ತಿದ್ದ ಹಾಗೆ ನಮ್ಮ ತಂದೆ ವೀರಸ್ವಾಮಿ ಅವ್ರು, ಪುಟ್ಟಣ್ಣ ಕಣಗಾಲ್ ಅವ್ರು, ತಾ ರ ಸು ಅವ್ರು, ವಿಜಯ ಭಾಸ್ಕರ್ ಹೀಗೆ ಎಲ್ಲರೂ ಮತ್ತೆ ಕಣ್ಣು ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.''

ಎಲ್ಲರಿಗೂ ಕಷ್ಟನೇ ಕಾಣಿಸುತ್ತದೆ

ಎಲ್ಲರಿಗೂ ಕಷ್ಟನೇ ಕಾಣಿಸುತ್ತದೆ

''ಸಿನಿಮಾನ ರೀ ಕ್ರಿಯೇಟ್ ಮಾಡುವುದು ಕಷ್ಟ ಆಯ್ತು ಅಂತ ಎಲ್ಲರೂ ಹೇಳಿದರು. ಇವತ್ತು ಏನೇ ಮಾಡಿದರು ಎಲ್ಲದಕ್ಕೂ ಕಷ್ಟ ಅಂತ ಹೇಳುತ್ತಾರೆ, ಎಲ್ಲರಿಗೂ ಕಷ್ಟನೇ ಕಾಣಿಸುತ್ತದೆ. ಆದರೆ ಅವತ್ತು ಕಷ್ಟ ಎನ್ನುವ ಪದ ಯಾರಿಗೂ ಗೊತ್ತಿರಲಿಲ್ಲ. ಯಾಕೆಂದರೆ, ಸಿನಿಮಾನ ಅವರು ಅಷ್ಟೊಂದು ಪ್ರೀತಿಸುತ್ತಿದ್ದರು. ಒಂದು ಸಿನಿಮಾ ಮಾಡುವಾಗ ಆಸೆ, ಪ್ರೀತಿ, ಕನಸಿನಿಂದ ಮಾಡುತ್ತಿದ್ದರು.''

ವಾಯ್ಸ್ ಕೇಳಿದರೆ ಮೈ ಜುಮ್ ಎನ್ನುತ್ತದೆ

ವಾಯ್ಸ್ ಕೇಳಿದರೆ ಮೈ ಜುಮ್ ಎನ್ನುತ್ತದೆ

''ನಮ್ಮ ಸೌಂಡ್ ಇಂಜಿನಿಯರ್ 'ನಾಗರಹಾವು' ಚಿತ್ರದ ಪ್ರಿಂಟ್ ನಲ್ಲಿ ತುಂಬ ನಾಯ್ಸ್ ಇತ್ತು ಅಂತ ಹೇಳಿದರು. ಇವತ್ತು ಎಲ್ಲ ಸಿನಿಮಾದಲ್ಲಿ ನಾಯ್ಸ್ ಮಾತ್ರ ತುಂಬಿಕೊಂಡಿದೆ. ಆದರೆ, 'ನಾಗರಹಾವು' ಚಿತ್ರದಲ್ಲಿ ಇದ್ದವರ ವಾಯ್ಸ್ ಕೇಳಿದರೆ ಮೈ ಜುಮ್ ಎನ್ನುತ್ತದೆ. ಈ ಸಿನಿಮಾ ಇವತ್ತಿಗೂ ಫ್ರೆಶ್ ಆಗಿ ಕಾಣಿಸುತ್ತದೆ. ಸಿನಿಮಾದ ಪ್ರತಿ ದೃಶ್ಯ ಮರೆಯುವುದಕ್ಕೆ ಆಗಲ್ಲ.''

ಪುಟ್ಟಣ್ಣ ರೀತಿಯ ಮತ್ತೊಬ್ಬ ಡೈರೆಕ್ಟರ್ ಹುಟ್ಟಿ ಬರಲ್ಲ

ಪುಟ್ಟಣ್ಣ ರೀತಿಯ ಮತ್ತೊಬ್ಬ ಡೈರೆಕ್ಟರ್ ಹುಟ್ಟಿ ಬರಲ್ಲ

''ಒಂದು ಸಿನಿಮಾದ ಪಾತ್ರ ಹೇಗಿರಬೇಕು ಎನ್ನುವುದನ್ನು ಈ ಚಿತ್ರ ನೋಡಿ ಕಲಿಯಬೇಕು. ಈ ಸಿನಿಮಾದಲ್ಲಿ ಲೊಕೇಷನ್ ಗಳು ಸಹ ಮಾತನಾಡುತ್ತವೆ. ಚಿತ್ರದುರ್ಗದ ಬೆಟ್ಟ ಸಿನಿಮಾದಲ್ಲಿ ಮಾತನಾಡುತ್ತದೆ. ಇಂತಹ ಸಿನಿಮಾವನ್ನು ಇಂದು ಯಾರು ಮಾಡುವುದಕ್ಕೆ ಆಗಲ್ಲ. ಪುಟ್ಟಣ್ಣ ಅವರ ರೀತಿಯ ಮತ್ತೊಬ್ಬ ಡೈರೆಕ್ಟರ್ ಹುಟ್ಟಿ ಬರಲ್ಲ.''

ಇದು ಒಂದು ಮಾಸ್ಟರ್ ಪೀಸ್

ಇದು ಒಂದು ಮಾಸ್ಟರ್ ಪೀಸ್

''ನಾನು ಚಿತ್ರರಂಗದಲ್ಲಿ ಬೆಳದಿದ್ದೇನೆ ಎಂದರೆ ಇಂತಹ ದಿಗ್ಗಜರ ನಡುವೆ ಇದ್ದಿದ್ದರಿಂದ. ಬಾಲಾಜಿ (ರವಿಚಂದ್ರನ್ ಸಹೋದರ) ಒಂದು ವರ್ಷದ ಹಿಂದೆ ಈ ಸಿನಿಮಾವನ್ನು ರೀ ಕ್ರಿಯೇಟ್ ಮಾಡುತ್ತೇನೆ ಎಂದು ಬಂದ. ಆಗ ನಾನು ಈ ಸಿನಿಮಾ ಮತ್ತೆ ರಿಲೀಸ್ ಆದ್ರೆ ಖಂಡಿತ ದಾಖಲೆ ಮಾಡುತ್ತದೆ ಎಂದೆ. ಇದು ಒಂದು ಮಾಸ್ಟರ್ ಪೀಸ್. ಹೇಗೆ ಸಿನಿಮಾ ಮಾಡಬೇಕು ಎಂದು ಕಲಿಸುವ ಸಿನಿಮಾ ಇದು''.

ಐವತ್ತು ವರ್ಷಕ್ಕೆ ಮತ್ತೆ ಬಂದ 'ನಾಗರಹಾವು'

ಐವತ್ತು ವರ್ಷಕ್ಕೆ ಮತ್ತೆ ಬಂದ 'ನಾಗರಹಾವು'

''ಈಶ್ವರಿ ಪ್ರೋಡಕ್ಷನ್ ಶುರುವಾಗಿ 50 ವರ್ಷ ಆಯ್ತು. ಐವತ್ತು ವರ್ಷಕ್ಕೆ ಮತ್ತೆ 'ನಾಗರಹಾವು' ಸಿನಿಮಾ ಬರುತ್ತಿದೆ. ಅವತ್ತು ಮಾಡಿದ ಸಿನಿಮಾ ಇವತ್ತು ಕೂಡ ದಾಖಲೆ ಮಾಡಲಿ.''

More from Filmibeat

English summary
Kannada actor Ravichandran spoke about 'Nagarahaavu' kannada movie The movie will re releasing on july 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X