»   » 'ಪ್ರೇಮಲೋಕ' ಟೈಟಲ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರದಲ್ಲವಂತೆ !

'ಪ್ರೇಮಲೋಕ' ಟೈಟಲ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರದಲ್ಲವಂತೆ !

Posted By:
Subscribe to Filmibeat Kannada

ಸಿನಿಮಾದ ಒಳಗೆ ಒಂದು ಕಥೆ ಇದ್ದರೆ, ಆ ಚಿತ್ರದ ಹುಟ್ಟಿನ ಹಿಂದೆ ಕೂಡ ಒಂದು ಕಥೆ ಇರುತ್ತದೆ. ಇನ್ನು ಕೆಲವು ಸೂಪರ್ ಹಿಟ್ ಸಿನಿಮಾಗಳ ಹಿಂದಿನ ಕಥೆ ಹೇಳುವುದಕ್ಕೆ ತುಂಬ ರೋಚಕವಾಗಿ ಇರುತ್ತದೆ.

ಸದ್ಯ ನಟ ರವಿಚಂದ್ರನ್ ತಮ್ಮ 'ಪ್ರೇಮಲೋಕ' ಸಿನಿಮಾದ ತೆರೆ ಹಿಂದಿನ ಕಥೆಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ರವಿಚಂದ್ರನ್ 'ಪ್ರೇಮಲೋಕ' ಚಿತ್ರದ ಟೈಟಲ್ ಬಗ್ಗೆ ಇದ್ದ ಸ್ವಾರಸ್ಯಕರ ಸಂಗತಿಯನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ. ಮುಂದೆ ಓದಿ...

'ಪ್ರೇಮ ಲೋಕ' ಟೈಟಲ್

''ಒಂದು ಸಿನಿಮಾದ ಹಿಂದೆ ಅನೇಕ ವ್ಯಕ್ತಿಗಳು ಇರುತ್ತಾರೆ. ಸೋಮು ಅಂತ ಒಬ್ಬ ಡೈಲಾಗ್ ರೈಟರ್ ಇದ್ದಾರೆ. ಹೇಳಬೇಕು ಅಂದರೆ 'ಪ್ರೇಮ ಲೋಕ' ಟೈಟಲ್ ಅವರದ್ದು'' - ರವಿಚಂದ್ರನ್, ನಟ

ಎರಡು ಟೈಟಲ್ ಇತ್ತು

''ಒಮ್ಮೆ ಸೋಮು ನನ್ನ ಬಳಿ ಬಂದು ಅವರ ಹೊಸ ಚಿತ್ರಕ್ಕೆ 'ನಾ ನಿನ್ನ ಪ್ರೀತಿಸುವೆ' ಮತ್ತು 'ಪ್ರೇಮಲೋಕ' ಈ ಎರಡು ಟೈಟಲ್ ಗಳಲ್ಲಿ ಯಾವುದು ಚೆನ್ನಾಗಿದೆ ಅಂತ ಹೇಳಿದರು. ನಾನು ಆಗ 'ಪ್ರೇಮಲೋಕ' ಚೆನ್ನಾಗಿದೆ ಆ ಟೈಟಲ್ ಇಡೀ ಅಂತ ಹೇಳಿದೆ'' - ರವಿಚಂದ್ರನ್, ನಟ

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

ಟೈಟಲ್ ರಿಜಿಸ್ಟರ್ ಮಾಡಿದೆ

''ನಾನು 'ಪ್ರೇಮಲೋಕ' ಅಂತ ಹೇಳಿದ ಮೇಲೆ ಆತ ''ಯಾಕೊ ನನಗೆ 'ನಾ ನಿನ್ನ ಪ್ರೀತಿಸುವೆ' ಚೆನ್ನಾಗಿದೆ ಅಂತ ಅನಿಸುತ್ತಿದೆ ನಾನು ಇದೇ ಟೈಟಲ್ ಅನ್ನು ನನ್ನ ಚಿತ್ರಕ್ಕೆ ಇಡುತ್ತೇನೆ'' ಅಂತ ಹೇಳಿದರು. ಆಗ ನಾನು 'ಪ್ರೇಮಲೋಕ' ಟೈಟಲ್ ರಿಜಿಸ್ಟರ್ ಮಾಡಿಕೊಂಡೆ.'' - ರವಿಚಂದ್ರನ್, ನಟ

'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!

ಏಕೆ ನಿರ್ದೇಶನ ಮಾಡಬಾರದು..?

''ಪ್ರೇಮಲೋಕ' ಚಿತ್ರ ಮಾಡುವುದಕ್ಕೆ ಮುಂಚೆ ಕೆಲ ಸಿನಿಮಾಗಳು ನನ್ನನ್ನು ಕಾಡಿತ್ತು. ಕಥೆಯನ್ನು ಹಾಡುಗಳ ಮೂಲಕ ಹೇಳಬೇಕು ಎನ್ನುವಾಗ 'ಪ್ರೇಮಲೋಕ' ಚಿತ್ರದ ಪ್ಲಾನ್ ಬಂತು. ಮೊದಲು ಕೆ.ಸಿ.ಎನ್ ಚಂದ್ರು ನಿನ್ನೆ ಏಕೆ ನಿರ್ದೇಶನ ಮಾಡಬಾರದು ಅಂತ ನನಗೆ ಹೇಳಿದರು.'' - ರವಿಚಂದ್ರನ್, ನಟ

ರವಿಚಂದ್ರನ್ ಮಗನ ಸಿನಿಮಾ ನಿಂತುಹೋಯ್ತಂತೆ.! ಹೌದಾ.?

ಕೊನೆಗೆ 'ಪ್ರೇಮಲೋಕ' ನಮ್ಮ ಸಂಸ್ಥೆಗೆ ಬಂತು

ಮೊದಲು 'ಪ್ರೇಮಲೋಕ' ಚಿತ್ರಕ್ಕೆ ಕೆ.ಸಿ.ಎನ್ ಚಂದ್ರು ಅವರೇ ನಿರ್ಮಾಪಕರಾಗಿದ್ದರು. ನಾನು ನಟನೆ ಮತ್ತು ನಿರ್ದೇಶನ ಮಾತ್ರ ಮಾಡಬೇಕಿತ್ತು. ಅವರು ಬಜೆಟ್ ಹೇಳಿ 60 ಲಕ್ಷ ಅಂತ ಕೇಳಿ ಸಿನಿಮಾ ಬೇಡ ಅಂತ ಕೈ ಬಿಟ್ಟರು. ಬಳಿಕ ಕೆ.ಸಿ.ಎನ್ ಪ್ರೋಡಕ್ಷನ್ ನಿಂದ 'ಪ್ರೇಮಲೋಕ' ನಮ್ಮ ಸಂಸ್ಥೆಗೆ ಬಂತು. ಆಗ 'ಪ್ರೇಮಲೋಕ' ಹುಟ್ಟಿಕೊಂಡಿತು.'' - ರವಿಚಂದ್ರನ್, ನಟ

English summary
Kannada Actor Ravichandran spoke about 'Premaloka' movie in his recent interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada