For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಪಾಸ್ ಮಾಡಿದ ರವಿಚಂದ್ರನ್ ಅವರ ದೃಶ್ಯ2!

  |

  ಕ್ರೇಜಿಸ್ಟಾರ್​ ವಿ.ರವಿಚಂದ್ರನ್ ಅಭಿನಯದ 'ದೃಶ್ಯ 2' ಚಿತ್ರ ಹಲವು ಕಾರಣಕ್ಕೆ ಹೆಚ್ಚಿನ ಗಮನ ಸೆಳೆದಿದೆ. ದೃಶ್ಯ ಭಾಗ ಒಂದು ಸಿನಿಮಾ ಮಾಡಿರುವ ಮೋಡಿ ಈ ಭಾಗ ಎರಡರ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ರಿಲೀಸ್‌ ಆದ ಚಿತ್ರ ಟ್ರೇಲರ್‌ಗೂ ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು.

  ರಿಲೀಸ್‌ಗೆ ರೆಡಿ ಆಗಿರುವ ಈ ಚಿತ್ರದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಚಿತ್ರ ರಿಲೀಸ್‌ಗೂ ಮುನ್ನ ರವಿಚಂದ್ರನ್‌ ಸಿನಿಮಾದ ಬಗ್ಗೆ ಸಿಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ.

  ಈ ಚಿತ್ರ ಸೆನ್ಸಾರ್ ಪಾಸ್‌ ಮಾಡಿದೆ. ದೃಶ್ಯಂ2 ಚಿತ್ರ ಸೆನ್ಸಾರ್‌ ಪಾಸ್‌ ಆಗಿರುವ ವಿಚಾರವನ್ನು ನಟ ರವಿಚಂದ್ರನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸೆನ್ಸಾರ್ ಮುಗಿಸಿದ ದೃಶ್ಯ2 ಸಿನಿಮಾ!

  ಸೆನ್ಸಾರ್ ಮುಗಿಸಿದ ದೃಶ್ಯ2 ಸಿನಿಮಾ!

  ಡಿಸೆಂಬರ್​ 10ರಂದು ದೃಶ್ಯ2 ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ಚಿತ್ರ ಸೆನ್ಸಾರ್‌ ಪಾಸಾಗಿದೆ. ಈ ವಿಚಾರವನ್ನು ಕ್ರೇಜಿ ಸ್ಟಾರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೆನ್ಸಾರ್‌ ಮಂಡಳಿಯಿಂದ ದೃಶ್ಯ2 ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ದೃಶ್ಯ ಸಿನಿಮಾದ ಮೂಲಕ ಕ್ರೇಜಿ ಸ್ಟಾರ್‌ ರವಿಚಂದ್ರನ್ ಮತ್ತೊಮ್ಮೆ ಅವರ ಅಭಿಮಾನಿಗಳಿಗೆ ಬಲು ಇಷ್ಟ ಆಗಿದ್ದರು. ದೃಶ್ಯ ಸಿನಿಮಾ ರವಿಚಂದ್ರನ್‌ ಅವರ ಸಿನಿಮಾ ಜೀವನದಲ್ಲೇ ವಿಭಿನ್ನವಾದ ಸಿನಿಮಾ. ಹಾಗಾಗಿ ಈಗ ಈ ಚಿತ್ರದ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

  ದೃಶ್ಯ ಚಿತ್ರತಂಡದ ವಿಶೇಷ ಪ್ರಯತ್ನ!

  ದೃಶ್ಯ ಚಿತ್ರತಂಡದ ವಿಶೇಷ ಪ್ರಯತ್ನ!

  ಚಿತ್ರ ಪ್ರೇಮಿಗಳಿಗಾಗಿ ದೃಶ್ಯ ಚಿತ್ರ ತಂಡದಿಂದ ಮತ್ತೆ ದೃಶ್ಯ ಭಾಗ ಒಂದನ್ನು ರಿಲೀಸ್‌ ಮಾಡಿದೆ. 2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ 'ದೃಶ್ಯ'. ಈಗ ಇದೇ ಚಿತ್ರದ ಮುಂದುವರೆದ ಭಾಗ 'ದೃಶ್ಯ2'. ಈ ಚಿತ್ರ ಇದೇ ಡಿಸೆಂಬರ್ 10 ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಇದಕ್ಕೂ ಮುನ್ನ ಇಂದು ಒಂದು ದಿನದ ಮಟ್ಟಿಗೆ ಇದೇ ತಿಂಗಳ 5ರಂದು ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿಚಿತ್ರದ ಮೊದಲ ಭಾಗ ಬಿಡುಗಡೆಯಾಗಿತ್ತು.

  'ದೃಶ್ಯ 2' ಇದೇ ರಿಲೀಸ್‌ ಆಗುತ್ತಿರುವ ಕಾರಣ, ಭಾಗ ಒಂದು ಸಿನಿಮಾವನ್ನು ನೋಡಲು ಬಯಸುವವರಿಗಾಗಿ ಮತ್ತೆ ದೃಶ್ಯ ಚಿತ್ರವನ್ನು ರಿಲೀಸ್‌ ಮಾಡಲಾಗಿತ್ತು. ಇನ್ನು ಭಾಗ ಒಂದು ನೋಡಿದವರು ಭಾಗ ಎರಡು ನೋಡಲು ಅಣಿಯಾಗುತ್ತಾರೆ.

  ರವಿಚಂದ್ರನ್‌ಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

  ರವಿಚಂದ್ರನ್‌ಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

  ಈಗಾಗಲೇ ದೃಶ್ಯ ಚಿತ್ರದ ಟ್ರೇಲರ್ ಮತ್ತು ಹಾಡುಗಳು ರಿಲೀಸ್‌ ಆಗಿವೆ. ಇತ್ತೀಚೆಗೆ 'ಮಳೆಬಿಲ್ಲೇ ಮರೆಯಾಗುವೇ ನೀ ಏಕೆ' ಎಂಬ ಲಿರಿಕಲ್ ಹಾಡನ್ನು ಚಿತ್ರ ತಂಡ ರಿಲೀಸ್‌ ಮಾಡಿದೆ. ಚಿತ್ರದ ಟ್ರೇಲರ್‌ನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಮೊದಲ ದೃಶ್ಯ ಚಿತ್ರದ ಕಥೆಯನ್ನು ಕೇಳಲು ರವಿಚಂದ್ರನ್ ಮೊದಲು ನಿರಾಕರಿಸಿದ್ದರಂತೆ. ಆದರೆ ಕೆಲವು ದಿನಗಳ ನಂತರ ಕಥೆ ಕೇಳಿ ಸಿನಿಮಾ ಶುರು ಮಾಡಿದರು ಎಂದು ನಟ ಸುದೀಪ್ ಹೇಳಿದ್ದರು. ಆದರೆ ಈಗ ದೃಶ್ಯ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಮನೆ ಮಾಡಿವೆ.

  ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಕಮಾಲ್!

  ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಕಮಾಲ್!

  ಮಲಯಾಳಂನಲ್ಲಿ ನಟ ಮೋಹನ್‌ಲಾಲ್‌ ನಟಿಸಿದ್ದ 'ದೃಶ್ಯಂ 2' ಚಿತ್ರದ ರಿಮೇಕ್‌ ಇದಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್‌ ಆಗಿದೆ. ವಿಶೇಷವೆಂದರೆ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್​ ಆಗಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. 'ದೃಶ್ಯ' ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ನವ್ಯಾ ನಾಯರ್​ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಂಡಿದ್ದಾರೆ.

  English summary
  Ravichandran Starrer Drishyam 2 Movie Censor Passed, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X