ರವಿಚಂದ್ರನ್ ಹುಟ್ಟುಹಬ್ಬಕ್ಕೆ 'ಕನ್ನಡಿಗ' ಚಿತ್ರತಂಡದಿಂದ ಉಡುಗೊರೆ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿರುವ ಸಿನಿಮಾಗಳ ಪೈಕಿ ಬಹಳ ವಿಶೇಷ ಹಾಗು ವಿಭಿನ್ನತೆಯಿಂದ ಕೂಡಿರುವ ಚಿತ್ರ 'ಕನ್ನಡಿಗ'. ರವಿಚಂದ್ರನ್ ಪಾತ್ರ ಹಾಗು ಅವರ ಲುಕ್ ಈಗಾಗಲೇ ಕನ್ನಡ ಕಲಾರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ.
'ಕನ್ನಡಿಗ' ಸಿನಿಮಾದಲ್ಲಿ ಇದುವರೆಗೂ ನೋಡಿರದ ರವಿಚಂದ್ರನ್‌ರನ್ನು ನೋಡುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ, ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ 'ಕನ್ನಡಿಗ' ಚಿತ್ರತಂಡ ಸರ್ಪ್ರೈಸ್ ಆಗಿ ಉಡುಗೊರೆಯೊಂದನ್ನು ನೀಡಲು ಸಜ್ಜಾಗಿದೆ.
ಮೇ 30 ರಂದು ರವಿಚಂದ್ರನ್ ಜನುಮದಿನ. ಈ ವಿಶೇಷ ದಿನದ ಪ್ರಯುಕ್ತ ಕನ್ನಡಿಗ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಬಿಎಂ ಗಿರಿರಾಜ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಎನ್‌ಎಸ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದು, ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಒಳಗೊಂಡಿದೆ.
ಕನ್ನಡಿಗ ಚಿತ್ರದ ಕುರಿತು
ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತಿದ್ದು, ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಯ ಕಾಲಘಟ್ಟದ ಕಥೆಯ ಇಲ್ಲಿರಲಿದೆ. 1550 ರ ದಶಕದ ಫ್ಲಾಶ್‌ಬ್ಯಾಕ್ ದೃಶ್ಯಗಳು ಸಹ ಈ ಸಿನಿಮಾದಲ್ಲಿ ಬರಲಿದೆ.
ಇನ್ನುಳಿದಂತೆ ರವಿಚಂದ್ರನ್ ನಿರ್ದೇಶಿಸುತ್ತಿರುವ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಸಾಲಿನಲ್ಲಿದೆ. ಉಪೇಂದ್ರ ಜೊತೆ 'ತ್ರಿಶೂಲಂ' ಚಿತ್ರದಲ್ಲಿ ಕ್ರೇಜಿಸ್ಟಾರ್ ನಟಿಸಿದ್ದಾರೆ. ಪಿ ವಾಸು ದೃಶ್ಯಂ 2 ಸಿನಿಮಾ ಆರಂಭಿಸಲಿದ್ದಾರೆ.


Click it and Unblock the Notifications











