ಲೇ ಲೇ ಲೇ... ರವಿ ಬೋಪಣ್ಣ: ಬರೋಬ್ಬರಿ 7 ನಿಮಿಷಗಳ ಟ್ರೈಲರ್ ಕಣಣ್ಣ!

ಕ್ರೇಜಿಸ್ಟಾರ್‌ ವಿ. ರವಿಚಂದ್ರನ್ ಕ್ರೇಜಿ ಸಿನಿಮಾ 'ರವಿಬೋಪಣ್ಣ'. ಈ ವಾರ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದ್ದು, ಸದ್ಯ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ನಿನ್ನೆಯಷ್ಟೆ (ಆಗಸ್ಟ್ 8) ಪ್ರೀ ರಿಲೀಸ್ ಈವೆಂಟ್ ಯಶಸ್ವಿಯಾಗಿ ನಡೆದಿದ್ದು, ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ.

ಬರೋಬ್ಬರಿ 7 ನಿಮಿಷಗಳ 'ರವಿಬೋಪಣ್ಣ' ಸಿನಿಮಾ ಕ್ರೇಜಿ ಟ್ರೈಲರ್ ರಿಲೀಸ್ ಮಾಡಿ ಕನಸುಗಾರ ಎಲ್ಲರ ಹುಬ್ಬೇರಿಸಿದ್ದಾರೆ. ತಮ್ಮದೇ ಸ್ಟೈಲ್‌ನಲ್ಲಿ ಬಹಳ ವಿಭಿನ್ನವಾಗಿ ಸಿನಿಮಾ ಕಟ್ಟಿಕೊಟ್ಟಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿರೋ ರವಿಚಂದ್ರನ್ 'ರವಿಬೋಪಣ್ಣ' ಆಗಿ ಗೆಲುವಿನ ಲಯಕ್ಕೆ ಮರಳುವ ಸುಳಿವು ಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಟ್ರೈಲರ್‌ ಸಖತ್ ಇಷ್ಟವಾಗಿದೆ.

'ಕರ್ಮ ಈಸ್ ಕ್ರೇಜಿ' ಅನ್ನುವ ವಿಭಿನ್ನ ಅಡಿಬರಹ ಇರುವ 'ರವಿಬೋಪಣ್ಣ' ಸಿನಿಮಾ ಇನ್‌ವೆಸ್ಟಿಗೇಷನ್ ಥ್ರಿಲ್ಲರ್ ಕಥೆ ಒಳಗೊಂಡಿದೆ. ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ಮಿಂಚಿದ್ದಾರೆ. ತೆರೆಮೇಲೆ ಇವರಿಬ್ಬರನ್ನು ಬಹಳ ಸೊಗಸಾಗಿ ತೋರಿಸಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಜಿ.ಎಸ್.ವಿ.ಸೀತಾರಾಮ್ ಛಾಯಾಗ್ರಹಣ ಚಿತ್ರಕ್ಕಿದ್ದು, ರಾಮಕೃಷ್ಣ, ಜೈ ಜಗದೀಶ್, ರವಿಶಂಕರ್ ಗೌಡ, ಮೋಹನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

 ಟ್ರೈಲರ್‌ನಲ್ಲಿ ಕಥೆ ಬಿಟ್ಟುಕೊಟ್ಟಿಲ್ಲ

ಟ್ರೈಲರ್‌ನಲ್ಲಿ ಕಥೆ ಬಿಟ್ಟುಕೊಟ್ಟಿಲ್ಲ

ತಂದೆ ನಿರ್ಮಾಪಕ ವೀರಾಸ್ವಾಮಿಯವರಿಗೆ ಒಂದು ನಿಮಿಷದ ಟ್ರಿಬ್ಯೂಟ್ ಸೇರಿ 7 ನಿಮಿಷಗಳ ಟ್ರೈಲರ್‌ ಅನ್ನು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಕಟ್ ಮಾಡಿದ್ದಾರೆ. ಆದರೆ ಇಷ್ಟು ದೊಡ್ಡ ಟ್ರೈಲರ್‌ನಲ್ಲಿ ಕಥೆಯ ಸಣ್ಣ ಎಳೆ ಬಿಟ್ಟುಕೊಡದೇ ಜಾಗ್ರತೆ ವಹಿಸಿದ್ದಾರೆ. 'ಲೇ ಲೇ ಲೇ ಹ್ಞಾಂ ಬೋಪಣ್ಣ' ಅನ್ನೋ ಡೈಲಾಗ್ ಪದೇ ಪದೇ ಕಿಕ್ ಕೊಡುತ್ತಾ ಹೋಗುತ್ತದೆ. ಸಿನಿಮಾ ಗ್ರಾಮರ್ ಬಿಟ್ಟು ಗ್ಲಾಮರ್ ಜೊತೆಗೆ ಪ್ರೇಕ್ಷಕರನ್ನು ರಂಜಿಸೋಕೆ ಕ್ರೇಜಿಸ್ಟಾರ್ ಬರ್ತಿರೋದು ಗೊತ್ತಾಗುತ್ತಿದೆ.

 ಕರ್ಮ ಈಸ್ ಕ್ರೇಜಿ

ಕರ್ಮ ಈಸ್ ಕ್ರೇಜಿ

"ನಮ್ಮೊಳಗೆ ಒಬ್ಬ ಇರ್ತಾನೆ. ಪ್ರತಿಸಲ ಪ್ರಶ್ನೆ ಮಾಡುತ್ತಿರುತ್ತಾನೆ. ನಮ್ಮನ್ನು ನೋಡಿ ನಗುತ್ತಿರ್ತಾನೆ" ಅನ್ನುವ ತಮ್ಮ ಕಲ್ಪನೆಯನ್ನು ಪಾತ್ರವಾಗಿ ಮಾಡಿ ರವಿಚಂದ್ರನ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ 'ರವಿ ಬೋಪಣ್ಣ"ನ 30 ವರ್ಷ ವಯಸ್ಸಿನಿಂದ 60ವರ್ಷ ವಯಸ್ಸಿನ ನಡುವೆ ನಡೆಯುವ ಕಥೆಯನ್ನು ಹೇಳಲಾಗ್ತಿದೆ. ಅದಕ್ಕೆ ತಕ್ಕಂತೆ 3 ಬೇರೆ ಬೇರೆ ಲುಕ್‌ನಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಂಡಿದ್ದಾರೆ. ಒಮ್ಮೆ ಯಂಗ್‌ ಆಗಿ ಕ್ಲೀನ್‌ ಶೇವ್‌ ಲುಕ್‌ನಲ್ಲಿ ಕಂಡ್ರೆ, ಮತ್ತೊಂದು ಗಿರಿಜಾ ಮೀಸೆ ತಿರುವಿದ್ದಾರೆ. ಇನ್ನುಳಿದಂತೆ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಬಹುತೇಕ ಸಿನಿಮಾ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ.

 ರಚಿತಾ ರಾಮ್ ಮಿಸ್ಸಿಂಗ್!

ರಚಿತಾ ರಾಮ್ ಮಿಸ್ಸಿಂಗ್!

'ರವಿ ಬೋಪಣ್ಣ' ಚಿತ್ರದಲ್ಲಿ ರಚಿತಾ ರಾಮ್ ಸಹ ನಟಿಸಿದ್ದಾರೆ. ಆದರೆ ಇಷ್ಟು ದೊಡ್ಡ ಟ್ರೈಲರ್‌ನಲ್ಲಿ ರಚ್ಚು ಕಾಣಿಸೋದೇ ಇಲ್ಲ. ಇಷ್ಟು ದಿನ ಸಿನಿಮಾ ಟೀಸರ್ ಹಾಗೂ ಸಾಂಗ್‌ಗಳಲ್ಲಿ ಕ್ರೇಜಿಸ್ಟಾರ್ ಜೊತೆ ಕಾವ್ಯಾ ಶೆಟ್ಟಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಟ್ರೈಲರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ದರ್ಶನವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸ್ವೀಟಿ ನಟಿಸಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಕಾವ್ಯಾ ಬಹುತೇಕ ಮಾಡರ್ನ್ ಲುಕ್‌ನಲ್ಲಿ ಬೋಲ್ಡ್‌ ಆಗಿ ದರ್ಶನ ಕೊಟ್ಟಿದ್ದರೆ, ರಾಧಿಕಾ ಸೀರೆಯಲ್ಲಿ ಕಂಗೊಳಿಸಿದ್ದಾರೆ.

 ಕ್ರೇಜಿಸ್ಟಾರ್ ಒನ್‌ ಮ್ಯಾನ್ ಶೋ

ಕ್ರೇಜಿಸ್ಟಾರ್ ಒನ್‌ ಮ್ಯಾನ್ ಶೋ

'ರವಿ ಬೋಪಣ್ಣ' ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ 50ನೇ ಸಿನಿಮಾ. ಹಾಗಾಗಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಚಿತ್ರವನ್ನು ರವಿಚಂದ್ರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣ, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದ ಹಾಡುಗಳಿಗೆ ಖುದ್ದು ಸಾಹಿತ್ಯ ಬರೆದಿದ್ದಾರೆ. ರಿಟೈರ್ಡ್ ಪೊಲೀಸ್ ಆಫೀಸರ್ ಹಾಗೂ ಅಂಗಾಂಗ ಕಳ್ಳ ಸಾಗಣೆ ದಂಧೆಯ ಸುತ್ತಾ ಸಿನಿಮಾ ಕಥೆ ಸುತ್ತಲಿದೆ.

 ವಕೀಲನ ಪಾತ್ರದಲ್ಲಿ ಕಿಚ್ಚ

ವಕೀಲನ ಪಾತ್ರದಲ್ಲಿ ಕಿಚ್ಚ

ಮಲಯಾಳಂನ 'ಜೋಸೆಫ್' ಸಿನಿಮಾ ರೀಮೇಕ್‌ ಇದಾಗಿದ್ದು, ಕಥೆಯನ್ನಷ್ಟೇ ತೆಗೆದುಕೊಂಡು ಹೊಸ ರೀತಿಯಲ್ಲಿ ಅದನ್ನು ಕನ್ನಡಕ್ಕೆ ರವಿಚಂದ್ರನ್ ತರ್ತಿದ್ದಾರೆ. ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ವಕೀಲನ ಪಾತ್ರದಲ್ಲಿ ನಟಿಸಿದ್ದು, ಟ್ರೈಲರ್ ಕೊನೆಯಲ್ಲಿ ಬಂದು ಬೊಂಬಾಟ್ ಡೈಲಾಗ್ ಹೇಳಿ ಮಜಾ ಕೊಟ್ಟಿದ್ದಾರೆ.

 ಕ್ರೇಜಿಸ್ಟಾರ್ ಮತ್ತೊಂದು ಪ್ರೇಮಲೋಕ

ಕ್ರೇಜಿಸ್ಟಾರ್ ಮತ್ತೊಂದು ಪ್ರೇಮಲೋಕ

ರವಿಚಂದ್ರನ್ ಎವರ್‌ಗ್ರೀನ್‌ 'ಪ್ರೇಮಲೋಕ' ಸಿನಿಮಾವನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. 'ರವಿ ಬೋಪಣ್ಣ' ಮತ್ತೊಂದು ಪ್ರೇಮಲೋಕ ಎಂದು ಕ್ರೇಜಿಸ್ಟಾರ್ ಹೇಳುತ್ತಾ ಬರುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಕೆರಳಿಸಿದೆ. ಯೋಗರಾಜ್‌ ಭಟ್‌ರ 'ಗಾಳಿಪಟ-2' ಸಿನಿಮಾ ಜೊತೆಗೆ ಥಿಯೇಟರ್‌ಗಳಲ್ಲಿ ಈ ವಾರ 'ರವಿ ಬೋಪಣ್ಣ'ನ ಆರ್ಭಟವೂ ಶುರುವಾಗಲಿದೆ.

More from Filmibeat

English summary
Ravichandran Starrer Ravi Bopanna Movie 7 Minute Long Trailer Released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X