ಚಲನಚಿತ್ರ ಅಕಾಡೆಮಿಗೆ ಕ್ರೇಜಿಸ್ಟಾರ್ ಹೆಸರು
ಸನ್ಮಾನ್ಯ ವಾರ್ತಾ ಸಚಿವರಾದ ಸಂತೋಷ್ ಲಾಡ್ ಅವರು ಸ್ವತಃ ರವಿಚಂದ್ರನ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾಗಿ ಸುದ್ದಿ ಹರಿದಾಡುತ್ತಿದೆ. ಆದರೆ ರವಿಚಂದ್ರನ್ ಕಡೆಯಿಂದ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ ಎಂಬ ಸುದ್ದಿಯೂ ಇದೆ.
ಇನ್ನೊಂದು ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಬಸಂತ್ ಕುಮಾರ್ ಪಾಟೀಲ್ ಹೆಸರು ಕೇಳಿಬರುತ್ತಿದೆ. ಸರ್ಕಾರ ತಮಗೆ ಈ ಅವಕಾಶ ಕೊಟ್ಟರೆ ಖಂಡಿತ ನಿಭಾಯಿಸುತ್ತೇನೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ತಾನೂ ಒಬ್ಬ ಎಂದಿದ್ದಾರೆ ಬಸಂತ್.
ಇದರ ಜೊತೆಗೆ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 7 ಹೆಸರುಗಳನ್ನೂ ಶಿಫಾರಸು ಮಾಡಿದೆ. ಅವರಲ್ಲಿ ಜಯಮಾಲಾ, ಕೆ.ವಿ.ಚಂದ್ರಶೇಖರ್, ಎ.ಆರ್.ರಾಜು, ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಚಿನ್ನೇಗೌಡ, ಬಸಂತ್ ಕುಮಾರ್ ಪಾಟೀಲ್ ಇದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗ ಲವರ್ ಬಾಯ್ ಅಲ್ಲ. ಅವರ ಪುತ್ರರು ಈಗ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಇಂತಹ ನಿರ್ಣಾಯಕ ಹಂತದಲ್ಲಿ ರವಿಚಂದ್ರನ್ ಅವರು ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ.


Click it and Unblock the Notifications












