ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ರವಿಚಂದ್ರನ್ ಪತ್ನಿ
ನಟ ರವಿಚಂದ್ರನ್ ಪ್ರೇಮಲೋಕದ ನಿಜವಾದ ರಾಣಿ ಪತ್ನಿ ಸುಮತಿ. ಕ್ರೇಜಿಸ್ಟಾರ್ ಮಡದಿ ಸುಮತಿ ಹೆಚ್ಚು ಮಾತನಾಡುವುದಿಲ್ಲ. ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದನ್ನು ಯಾರೂ ನೋಡಿಲ್ಲ.
ಆದರೆ, ಮೊದಲ ಬಾರಿಗೆ ಸುಮತಿ ರವಿಚಂದ್ರನ್ ವೇದಿಕೆ ಮೇಲೆ ನಿಂತು ಮೈಕ್ ಹಿಡಿದು ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ತಮ್ಮ ಎರಡನೇ ಮಗ ವಿಕ್ರಮ್ ಮೊದಲ ಸಿನಿಮಾ 'ತ್ರಿವಿಕ್ರಮ' ಲಾಂಚ್ ಆಗಿದೆ. ಈ ಚಿತ್ರದ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಇಡೀ ಕುಟುಂಬ ಭಾಗಿಯಾಗಿತ್ತು.

ಕಾರ್ಯಕ್ರಮದ ನಿರೂಪಕ ಅಕುಲ್ ಒತ್ತಾಯಕ್ಕೆ ಮಣಿದ ಸುಮತಿ ಮೈಕ್ ಹಿಡಿದು ಮಾತನಾಡಿದರು. ಮಡದಿಯ ಮಾತುಗಳನ್ನು ಕೇಳಿ ರವಿಚಂದ್ರನ್ ತಮಾಷೆ ಮಾಡಿದರು. ಜೊತೆಗೆ ಇತ್ತೀಚಿಗೆ ಮದುವೆ ಆದ ರವಿಚಂದ್ರನ್ ಪುತ್ರಿ ಗೀತಾಂಜಲಿ ಮತ್ತು ಅಳಿಯ ಅಜಯ್ ಶುಭಾಶಯ ತಿಳಿಸಿದರು.
ಸಹೋದರನಿಗೆ ಆಲ್ ದಿ ಬೆಸ್ಟ್ ಎಂದು ಗೀತಾಂಜಲಿ ವಿಶ್ ಮಾಡಿದ್ರೆ, ಅಜಯ್ 'ಇವರೇ ನನ್ನ ಹೀರೋ' ಎಂದರು. ಕಾರ್ಯಕ್ರಮದಲ್ಲಿ ವಿಕ್ರಂ ಅಣ್ಣ ಮನೋರಂಜನ್ ಕೂಡ ಇದ್ದರು.

ಒಟ್ಟಾರೆ, ಇಡೀ ಕ್ರೇಜಿ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಕ್ರಮ್ ರನ್ನು ಲಾಂಚ್ ಮಾಡಿದೆ.


Click it and Unblock the Notifications











