»   » ಕಳೆದ ವರ್ಷವೇ ತಮಗೆ ಮುಪ್ಪಡರಿದೆ ಎಂದು ನೊಂದಿದ್ದ

ಕಳೆದ ವರ್ಷವೇ ತಮಗೆ ಮುಪ್ಪಡರಿದೆ ಎಂದು ನೊಂದಿದ್ದ

Posted By: Super
Subscribe to Filmibeat Kannada

ಬಣ್ಣದ ಕನಸುಗಳನ್ನು ನನಸಾಗಿಸುವ ರಂಗಿನ ಕನಸುಗಾರ ಎಂದು ಕರೆಸಿಕೊಂಡ ಕ್ರೇಜೀಸ್ಟಾರ್‌ ರವಿಚಂದ್ರನ್‌ಗೆ ಈ ಮೇ 29ಕ್ಕೆ 40ವರ್ಷ ತುಂಬುತ್ತಿದೆ. ಕಳೆದ ವರ್ಷವೇ ತಮಗೆ ಮುಪ್ಪಡರಿದೆ ಎಂದು ಮರುಗಿದ್ದ, ರವಿಚಂದ್ರನ್‌ ತಾವು ಚಿತ್ರರಂಗದಲ್ಲಿ ಹೀರೋ ಆಗಿ ಮುಂದುವರಿಯುತ್ತೇನೆ ಎಂಬ ಆಶಾಭಾವನೆಯೇ ಉಡುಗಿದವರಂತೆ ಮಾತನಾಡಿದ್ದರು.

'ನನಗೀಗ 39. ಗಡ್ಡ ಬೆಳ್ಳಗಾಗಿದೆ. 'ಕಲಾವಿದ " ಶೂಟಿಂಗ್‌ ಟೈಮ್‌ ನಲ್ಲಿ ಬಿದ್ದು ಬೆನ್ನಿಗೆ ಗಾಯವಾಗಿದೆ. ಇನ್ನೆಷ್ಟು ದಿನಾಂತ ನಟನೆಯನ್ನೇ ನೆಚ್ಚಿಕೊಂಡಿರುವುದಕ್ಕೆ ಸಾಧ್ಯ ? ಎಂದು ಪ್ರಶ್ನಿಸಿದ್ದರು. ಆದರೆ, ಆನಂತರದ ಒಂದು ವರ್ಷದಲ್ಲಿ ಬಿಡುಗಡೆಯಾದ ರವಿ ಅಭಿನಯದ ಓ ನನ್ನ ನಲ್ಲೆ, ಉಸಿರೆ ಯಶಸ್ವಿಯೂ ಆಯಿತು.

ಈಗ ಕನಸುಗಾರ ಕೂಡ ತೆರೆಗೆ ಸಜ್ಜಾಗುತ್ತಿದೆ. 40ರ ಹರೆಯದ ರವಿಚಂದ್ರನ್‌ ಈ ವರೆಗೆ ನಟಿಸಿರುವ ಚಿತ್ರಗಳ ಸಂಖ್ಯೆ ಅರ್ಧ ಶತಕವನ್ನು ದಾಟಿದೆ. ರವಿಚಂದ್ರನ್‌ ಅಭಿನಯಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ-:

1. ಚಕ್ರವ್ಯೂಹ, 2. ನಾನೇ ರಾಜ, 3. ಪ್ರೇಮಿಗಳ ಸವಾಲ್‌, 4. ಸಾವಿರ ಸುಳ್ಳು, 5. ನಾ ನಿನ್ನ ಪ್ರೀತಿಸುವೆ, 6. ಅಸಂಭವ, 7. ಪಿತಾಮಹ, 8. ಪ್ರಳಯಾಂತಕ, 9. ಖದೀಮ ಕಳ್ಳರು, 10. ಸಂಗ್ರಾಮ, 11. ಸ್ವಾಭಿಮಾನ, 12. ರಾಮಣ್ಣ ಶಾಮಣ್ಣ, 13. ಪ್ರೇಮಲೋಕ, 14. ಅಂಜದಗಂಡು, 15. ರಣಧೀರ, 16. ಯುದ್ಧಕಾಂಡ, 17. ಯುಗಪುರುಷ, 18. ಕಿಂದರ ಜೋಗಿ, 19. ಪೋಲಿ ಹುಡುಗ, 20. ಬಣ್ಣದ ಗೆಜ್ಜೆ, 21. ಅಭಿಮನ್ಯು, 22. ಶಾಂತಿ ಕ್ರಾಂತಿ, 23. ರಾಮಾಚಾರಿ, 24. ಹಳ್ಳಿ ಮೇಸ್ಟ್ರು, 25. ಗೋಪಿ ಕೃಷ್ಣ, 26. ಗುರುಬ್ರಹ್ಮ, 27. ಚಿಕ್ಕೆಜಮಾನ್ರು, 28. ಶ್ರೀರಾಮಚಂದ್ರ, 29. ಗಡಿಬಿಡಿ ಗಂಡ, 30 ಅಣ್ಣಯ್ಯ, 31. ಮನೆ ದೇವ್ರು, 32. ಚಿನ್ನ, 33. ರಸಿಕ, 34. ಜಾಣ, 35. ಪುಟ್ನಂಜ, 36. ಚೆಲುವ, 37. ಕಲಾವಿದ, 38. ಯಾರೇ ನೀನು ಚೆಲುವೆ, 39. ಮಾಂಗಲ್ಯಂ ತಂತು ನಾನೇನಾ, 40. ಪ್ರೀತ್ಸೋದು ತಪ್ಪಾ, 41. ರವಿ ಮಾಮ, 42. ನಾನು ನನ್ನ ಹೆಂಡ್ತೀರು, 43. ಸ್ನೇಹ, 44. ಓ ಪ್ರೇಮವೇ, 45. ಚೋರ ಚಿತ್ತ ಚೋರ, 46. ಸಿಪಾಯಿ, 47. ಮೊಮ್ಮಗ, 48. ಮಹಾತ್ಮ, 49. ನಾನು ನನ್ನ ಹೆಂಡ್ತಿ, 50. ಪ್ರೀತ್ಸು ತಪ್ಪೇನಿಲ್ಲ, 51. ಓ ನನ್ನ ನಲ್ಲೆ, 52. ಉಸಿರೆ, 53. ಕನಸುಗಾರ.
ಈ 53 ಚಿತ್ರಗಳ ಪೈಕಿ, ಪ್ರೇಮಲೋಕ, ರಣಧೀರ, ಸ್ವಾಭಿಮಾನ, ಅಂಜದ ಗಂಡು, ಅಣ್ಣಯ್ಯ, ರಾಮಾಚಾರಿ, ಓ ನನ್ನ ನಲ್ಲೆ ಭಾರಿ ಯಶಸ್ಸು ಕಂಡ ಚಿತ್ರಗಳು. ರಾಮಾಚಾರಿ ಚಿತ್ರದಲ್ಲಿ ರವಿಚಂದ್ರನ್‌ ಅಭಿನಯ ಕಂಡ ವಿಮರ್ಶಕರು, ರವಿಗೆ ಇಷ್ಟೊಂದು ಟ್ಯಾಲೆಂಟ್‌ ಇದೆಯೇ ಎಂದು ಹುಬ್ಬೇರಿಸಿದ್ದರು. ಪ್ರೇಮಲೋಕವಂತೂ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತ್ತು.

ರವಿಚಂದ್ರನ್‌ ಚಿತ್ರಗಳ ಪ್ಲಸ್‌ ಪಾಯಿಂಟ್‌ ವೈಭವ ಹಾಗೂ ಸುಮಧುರ ಗೀತೆಗಳು. ರವಿ ಚಿತ್ರದ ಹಲವು ಗೀತೆಗಳು ಸೂಪರ್‌ ಹಿಟ್‌ ಆಗಿವೆ. ಹಾಲಿ 40 ವರ್ಷದೊಂದಿಗೆ 50 ಚಿತ್ರ ಪೂರೈಸಿರುವ ರವಿ ಶತಚಿತ್ರನಟರಾಗುವರೇ? ವಾರ್ತಾ ಸಂಚಯ

English summary
Full list of Ravichandran films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada