ರವಿಚಂದ್ರನ್ ಮಗಳ ಮದುವೆ ಕರೆಯೋಲೆ : ಒಂದು ಕಾರ್ಡ್ ಬೆಲೆ ಇಷ್ಟೊಂದು!
Recommended Video
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಮುಂದಿನ ತಿಂಗಳು ನಡೆಯುತ್ತಿದೆ. ಈಗಾಗಲೇ ಮದುವೆಯ ಆಮಂತ್ರಣ ಪತ್ರಿಕೆ ತಯಾರಾಗಿದ್ದು, ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಮದುವೆ ಕರೆಯೋಲೆ ಕೈ ಸೇರುತ್ತಿದೆ.
ರವಿಚಂದ್ರನ್ ರಿಗೆ ಇರುವುದು ಒಬ್ಬಳೆ ಹೆಣ್ಣು ಮಗಳು. ಹಾಗಾಗಿ ಮುದ್ದಿನ ಮಗಳು ಗೀತಾಂಜಲಿಯ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ. ಸಿನಿಮಾವನ್ನೇ ಶ್ರೀಮಂತಿಕೆಯಿಂದ ಮಾಡುವ ಕ್ರೇಜಿಸ್ಟಾರ್ ಇನ್ನು ಮಗಳ ಮದುವೆಯನ್ನು ಹೇಗೆ ಮಾಡಬಹುದು ಎಂದು ಊಹಿಸಿ.
ಅಂದಹಾಗೆ, ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹದ ಆಮಂತ್ರಣ ಪತ್ರಿಕೆಯ ವಿಶೇಷತೆಗಳು ಮುಂದಿವೆ ಓದಿ..

3D ಆಮಂತ್ರಣ ಪತ್ರಿಕೆ
ಗೀತಾಂಜಲಿ ಹಾಗೂ ಅಜಯ್ ಮದುವೆಗೆ 3D ಆಮಂತ್ರಣ ಪತ್ರಿಕೆಯನ್ನು ಮಾಡಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಸುಂದರ ಚಿತ್ರ ಇದೆ. ಮದುವೆಯ ವಿವರ ಹಾಗೂ ತಮ್ಮ ಕುಟುಂಬದವರ ಹೆಸರು ಅಲ್ಲಿದೆ. ವಿಶೇಷ ಅಂದರೆ, ಈ ರೀತಿ 3D ಮದುವೆ ಆಮಂತ್ರಣ ಪತ್ರಿಕೆಯನ್ನು ಮಾಡಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಂತೆ.

ಒಂದು ಕಾರ್ಡ್ ಬೆಲೆ ಸುಮಾರು 3 ಸಾವಿರ
ಸಾಮಾನ್ಯವಾಗಿ ಒಂದು 3D ಮದುವೆ ಕಾರ್ಡ್ ಬೆಲೆ ಸುಮಾರು 3 ಸಾವಿರ ಆಗುತ್ತದೆ. ಆಮಂತ್ರಣ ಪತ್ರಿಕೆ ಜೊತೆಗೆ ದುಬಾರಿ ಗಿಫ್ಟ್ ಕೂಡ ಅತಿಥಿಗಳಿಗೆ ನೀಡಲಾಗುತ್ತಿದೆ. ಸುಂದರ ಕರೆಯೋಲೆ ಮೂಲಕ ಅತಿಥಿಗಳನ್ನು ಮದುವೆಗೆ ಆತ್ಮೀಯ ಆಮಂತ್ರಣ ನೀಡುತ್ತಿದ್ದಾರೆ ರವಿಚಂದ್ರನ್. ಕಾರ್ಡ್ ನಲ್ಲಿ ಅತಿಥಿಗಳ ಹೆಸರನ್ನು ಸಹ ಪ್ರತ್ಯೇಕವಾಗಿ ಮುದ್ರಿಸಲಾಗಿದೆ.

ಮದುವೆ ಯಾವಾಗ ಎಲ್ಲಿ?
ಗೀತಾಂಜಲಿ ಹಾಗೂ ಅಜಯ್ ವಿವಾಹ ಮೇ ತಿಂಗಳಿನ 28 ಹಾಗೂ 29 ರಂದು ನಡೆಯಲಿದೆ. ಬೆಂಗಳೂರಿನ ಅರಮನೆಯಲ್ಲಿ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ರವಿಚಂದ್ರನ್ ಮಗಳು ಗೀತಾಂಜಲಿ ಉದ್ಯಮಿ ಅಜಯ್ ಮಡದಿ ಆಗಲಿದ್ದಾರೆ. ಕಳೆದ ಫೆಬ್ರವರಿ 23 ರಂದು ಇವರ ನಿಶ್ಚಿತಾರ್ಥ ನಡೆದಿತ್ತು.

ರಘುರಾಮ್ ಕುಟುಂಬಕ್ಕೆ ಆಮಂತ್ರಣ
ನಿರ್ದೇಶಕ ರಘುರಾಮ್ ಮನೆಗೆ ಬಂದು ರವಿಚಂದ್ರನ್ ತಮ್ಮ ಮಗಳ ಮದುವೆಗೆ ಆಮಂತ್ರಣ ನೀಡಿದ್ದಾರೆ. ರಘುರಾಮ್ ರವಿಚಂದ್ರನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಕ್ರೇಜಿಸ್ಟಾರ್ ರೀತಿ ಅವರು ಸಹ ನಿರ್ದೇಶಕರಾಗಿದ್ದಾರೆ. ಈ ವೇಳೆ ರಘುರಾಮ್ ಕುಟುಂಬ ರವಿಚಂದ್ರನ್ ಜೊತೆಗೆ ಫೋಟೋ ತೆಗೆದುಕೊಂಡು ಸಂಭ್ರಮಿಸಿದೆ.


Click it and Unblock the Notifications











