For Quick Alerts
  ALLOW NOTIFICATIONS  
  For Daily Alerts

  'ರವಿ ಬೋಪಣ್ಣ' ಟ್ರೇಲರ್ ಬಿಡುಗಡೆ: ಇದು ಹೊಸ ಮಾದರಿ ರವಿಚಂದ್ರನ್!

  |

  'ದೃಶ್ಯ' ಸಿನಿಮಾದಲ್ಲಿ ರಾಜೇಂದ್ರ ಪೊನ್ನಪ್ಪ ಆಗಿ ತನ್ನ ಬುದ್ಧಿವಂತಿಕೆಯಿಂದ ಪೊಲೀಸರ ಕಣ್‌ತಪ್ಪಿಸಿ ಕುಟುಂಬವನ್ನು ಕಾಪಾಡಿಕೊಂಡಿದ್ದ ರವಿಚಂದ್ರನ್ ಈಗ 'ರವಿ ಬೋಪಣ್ಣ' ಅವತಾರದಲ್ಲಿ ಬರುತ್ತಿದ್ದಾರೆ.

  ರವಿಚಂದ್ರನ್ ಅಭಿನಯಿಸಿರುವ 'ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕತೆ' 'ರವಿ ಬೋಪಣ್ಣ' ಸಿನಿಮಾದ ಟ್ರೇಲರ್ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಸ್ಥಾಪಿಸಿದ್ದ ಈಶ್ವರಿ ಕಂಬೈನ್ಸ್‌ 50 ವರ್ಷ ಪೂರೈಸಿದ ಕಾರಣ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

  ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ ಇದೊಂದು 'ಮರ್ಡರ್ ಮಿಸ್ಟರಿ' ಎಂದು, ರವಿಚಂದ್ರನ್ ಅವರು ಕೊಲೆಯ ಜಾಡು ಹಿಡಿದು ಹೋಗುವ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶನ ಮಾಡಿರುವುದು ಕುತೂಹಲ ಇಮ್ಮಡಿಯಾಗಲು ಮುಖ್ಯ ಕಾರಣ. 2016 ರಲ್ಲಿ 'ಅಪೂರ್ವ' ನಿರ್ದೇಶಿಸಿದ್ದ ರವಿಚಂದ್ರನ್ ಐದು ವರ್ಷದ ಬಳಿಕ ಈಗ 'ರವಿ ಬೋಪಣ್ಣ' ಸಿನಿಮಾ ನಿರ್ದೇಶನ ಮಾಡಿದ್ದಾರೆ.

  ಮಲಯಾಳಂನ 'ಫೊರೆನ್ಸಿಕ್‌' ಸಿನಿಮಾದ ಛಾಯೆ ಕಾಣುತ್ತಿದೆಯಾದರೂ ಈಗಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ಮಲಯಾಳಂನ ನಟ ಸಜ್ಜು ಕುರುಪ್ ಸಹ ಸಿನಿಮಾದಲ್ಲಿದ್ದಾರೆ.

  ರವಿಚಂದ್ರನ್ ಅವರು ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಢಾಳಾಗಿ ಬಿಟ್ಟ ಮೀಸೆ ರವಿಚಂದ್ರನ್ ಅವರಿಗೆ ಹೊಸ ಬಗೆಯ ಲುಕ್ ಒದಗಿಸಿದೆ. ಟ್ರೇಲರ್‌ನ ಹಿನ್ನೆಲೆ ಸಂಗೀತವೂ ಅದ್ಭುತವಾಗಿದೆ.

  'ರವಿ ಬೋಪಣ್ಣ' ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶಿಸಿದ್ದಾರೆ. ಸಿನಿಮಾವನ್ನು ನಿರ್ಮಾಣ ಮಾಡಿರುವುದು ಸರ್ಕಾರ್ ಅಜಿತ್. ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಕೊರೊನಾ ಲಸಿಕೆ ವಿವೇಕ್ ಹೃದಯಾಘಾತಕ್ಕೆ ಕಾರಣವಾಯ್ತಾ? | Filmibeat Kannada

  ಉಳಿದಂತೆ, ಮಲಯಾಳಂ ಸಿನಿಮಾ 'ದೃಶ್ಯಂ 2' ನ ಕನ್ನಡ ರೀಮೇಕ್‌ನಲ್ಲಿ ರವಿಚಂದ್ರನ್ ನಟಿಸುವುದು ಖಾತ್ರಿಯಾಗಿದೆ. 'ದೃಶ್ಯಂ' ಸಿನಿಮಾದ ರೀಮೇಕ್ 'ದೃಶ್ಯ'ದಲ್ಲಿ ರವಿಚಂದ್ರನ್ ನಟಿಸಿ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. 'ದ್ರಶ್ಯ' ಸಿನಿಮಾ ನಿರ್ದೇಶನ ಮಾಡಿದ್ದ ಪಿ.ವಾಸು ಅವರೇ 'ದೃಶ್ಯ 2' ಸಹ ನಿರ್ದೇಶನ ಮಾಡಲಿದ್ದಾರೆ.

  English summary
  V Ravichandran's Ravi Bopanna movie trailer released on YouTube. Ravichandran directed this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X