ರಮೇಶ್ ಅರವಿಂದ್ 101ನೇ ಚಿತ್ರದ ನಿರ್ದೇಶಕ ಯಾರು?
ಚಂದನವನದ 'ಮಿಸ್ಟರ್ ಪರ್ಫೆಕ್ಟ್' ರಮೇಶ್ ಅರವಿಂದ್ ಅವರು ಇದುವರೆಗೂ 100 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಸ್.ರವಿಂದ್ರನಾಥ್ ನಿರ್ದೇಶನದ 'ಪುಷ್ಪಕ ವಿಮಾನ' ರಮೇಶ್ ಅವರ 100ನೇ ಸಿನಿಮಾ. ಈಗ 101ನೇ ಚಿತ್ರ ಯಾವುದು ಎಂಬ ಕುತೂಹಲ ಕಾಡುತ್ತಿದೆ.
'ಪುಷ್ಪಕ ವಿಮಾನ' ಚಿತ್ರದ ನಂತರ ನಿರ್ದೇಶನ ಹಾಗೂ ಕಿರುತೆರೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದ ರಮೇಶ್ ಅವರು ಈಗ ತಮ್ಮ 101ನೇ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ 'ಪುಷ್ಪಕ ವಿಮಾನ' ಖ್ಯಾತಿಯ ಎಸ್. ರವಿಂದ್ರನಾಥ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ಮೂಲಕ ಮತ್ತೊಮ್ಮೆ ಈ ಜೋಡಿ ಒಂದಾಗಲಿದೆ.

'ಪುಷ್ಪಕ ವಿಮಾನ' ಚಿತ್ರವನ್ನ ನಿರ್ಮಾಣ ಮಾಡಿದ್ದ ವಿಖ್ಯಾತ ಬ್ಯಾನರ್ ನಲ್ಲಿ ಈ ಚಿತ್ರವೂ ತಯಾರಾಗಲಿದೆ ಎನ್ನಲಾಗುತ್ತಿದೆ. ಸದ್ಯ, ರಮೇಶ್ ಅರವಿಂದ್ ಅವರು, 'ವೀಕೆಂಡ್ ವಿತ್ ರಮೇಶ್-3' ಮುಗಿಸಿ, 'ಬಟರ್ ಫ್ಲೈ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಅಂದ್ಹಾಗೆ, 'ಬಟರ್ ಫ್ಲೈ' ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಈ ಚಿತ್ರದಲ್ಲಿ ನಟಿ ಪಾರೂಲ್ ಯಾದವ್ ಹಾಗೂ ಆಮಿ ಜಾಕ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ನಂತರ ರಮೇಶ್ ಅವರ 101ನೇ ಚಿತ್ರಕ್ಕೆ ಚಾಲನೆ ದೊರೆಯಲಿದೆ.


Click it and Unblock the Notifications











