ಸಂಜೀವ್ ಕುಲಕರ್ಣಿ ನಿಧನ: ಸಂತಾಪ ಸೂಚಿಸಿದ ರವಿಶಂಕರ್, ರಘು ರಾಮ್

ಹಿರಿಯ ನಿರೂಪಕ, ರಂಗಕರ್ಮಿ, ಕಿರುತೆರೆ ನಟ ಸಂಜೀವ್ ಕುಲಕರ್ಣಿ ನಿನ್ನೆ (ಜನವರಿ 25) ನಿಧನ ಹೊಂದಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಿಧಿವಶರಾಗಿದ್ದಾರೆ.

ಸಂಜೀವ್ (49) ನಿಧನಕ್ಕೆ ಅವರ ಕಲಾ ಜೀವನದ ಕೆಲವು ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ರಘು ರಾಮ್ ಹಾಗೂ ನಟ ರವಿಶಂಕರ್ ಗೌಡ ಕಂಬನಿ ಮಿಡಿದಿದ್ದಾರೆ.

''ಅಪ್ಪಟ ಕನ್ನಡದ ಪ್ರತಿಭೆ, ಅಜಾತಶತ್ರು, ಒಳ್ಳೆಯ ಗೆಳೆಯ.. ನೀವು ಬದುಕಬೇಕೆಂಬ ಉತ್ಕಟ ಆಸೆಯಿಂದ ಕನ್ನಡಿಗರು ಪ್ರಾರ್ಥನೆ ಮಾಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರೂ, ವಿಧಿಲಿಖಿತ ಮಾತ್ರ ಬದಲಾಗಲಿಲ್ಲ... ಹೋಗಿ ಬನ್ನಿ ಸಂಜೀವ್ ನಿಮ್ಮ ಆತ್ಮಕ್ಕೆ ರಾಯರು ಚಿರಶಾಂತಿ ನೀಡಲಿ.. ಗೆಳೆಯ ಸಂಜೀವ್ ಕುಲಕರ್ಣಿ ಇನ್ನಿಲ್ಲ..'' ಎಂದು ಟ್ವೀಟ್ ನಟ ರವಿಶಂಕರ್ ಗೌಡ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Ravishankar and Raghu Ram Condolences for Sanjeev Kulakarni Death

''ತಾಯಿಯ ಒಡಲಿನಿಂದ ಬಂದ ಜೀವ ಈಗ ಭೂತಾಯಿಯ ಮಡಿಲಿಗೆ. ಮಿಸ್ ಯೂ ಸಂಜೀವ್ ಸರ್'' ಎಂದು ನಿರ್ದೇಶಕ ರಘು ರಾಮ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಸಂಜೀವ ಕುಲಕರ್ಣಿ ಅವರು ನಾಗಿಣಿ, ನಿಗೂಢ ರಾತ್ರಿ, ರಾಜರಾಣಿ, ಏಟು ಎದಿರೇಟು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು. ಅವರು ಕನ್ನಡ ಭಾಷೆ ಮಾತನಾಡುವ ಶೈಲಿ ಅಧ್ಬುತವಾಗಿತ್ತು.

ಕಳೆದ 15 ವರ್ಷಗಳಿಂದ ಅವರು ಕಾರ್ಡಿಯೋಮಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ಸ್ಮಶಾನದಲ್ಲಿ ಇಂದು (ಭಾನುವಾರ) ನಡೆಯಲಿದೆ.

More from Filmibeat

English summary
Actor Ravishankar and Raghu Ram condolences for Sanjeev Kulakarni. Senior anchor, actor theatre artist Sanjeev Kulakarni (49), passed away in Bengaluru on Saturday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X