'ವಿಕ್ರಾಂತ್ ರೋಣ ನೋಡ್ತಾಯಿದ್ರೆ ಜೀವ ನಡುಗತ್ತೆ': ಡಬ್ಬಿಂಗ್ ಅನುಭವ ಬಿಚ್ಚಿಟ್ಟ ರವಿಶಂಕರ್
ಕಿಚ್ಚ ಸುದೀಪ್ ನಟಿಸಿರುವ 'ವಿಕ್ರಾಂತ್ ರೋಣ' ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಬಹುಶಃ ಕೊರೊನಾ ಬಿಕ್ಕಟ್ಟು ಇಲ್ಲವಾಗಿದ್ದರೆ ಇಷ್ಟೊತ್ತಿಗಾಲೇ ವಿಕ್ರಾಂತ್ ರೋಣ ಸಿನಿಮಾ ಥಿಯೇಟರ್‌ಗೆ ಬರ್ತಿತ್ತು. ಆರಂಭದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರ ಈಗ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ.
ಬಹಳ ವಿಶೇಷ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಫಸ್ಟ್ ಲುಕ್ ಪೋಸ್ಟರ್ ಹಾಗೂ ದುಬೈನ ಬುರ್ಜ್ ಖಲೀಫಾ ಕಟ್ಟಡ ಮೇಲೆ ಬಿಡುಗಡೆಯಾದ ಟೀಸರ್ ನೋಡಿದ್ಮೇಲೆ ಪ್ರೇಕ್ಷಕರು ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿರೀಕ್ಷೆ ಯಾವುದೇ ಕಾರಣಕ್ಕೆ ಹುಸಿಯಾಗಲ್ಲ ಎಂದು ನಟ ರವಿಶಂಕರ್ ಗೌಡ ಬಹಿರಂಗಪಡಿಸಿದ್ದಾರೆ. ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿರುವ ರವಿಶಂಕರ್ ಗೌಡ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಫ್ಯಾನ್ಸ್ ಸಖತ್ ಎಂಜಾಯ್ ಮಾಡ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

ವಿಕ್ರಾಂತ್ ರೋಣ ನೋಡಿದ ಅನುಭವ
''ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾದ್ಯವಿಲ್ಲ ಕುತೂಹಲದ ಮಹಾಪೂರ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲಾ. ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ. ಹಾಗೂ ಜಾಕ್ ಮಂಜು ಸಾರ್'' ಎಂದು ರವಿಶಂಕರ್ ಗೌಡ ಡಬ್ಬಿಂಗ್ ಮಾಡಿದ ಅನುಭವ ಬಿಚ್ಚಿಟ್ಟಿದ್ದಾರೆ.

ನೋಡ್ತಿದ್ರೆ ಜೀವ ನಡುಗತ್ತೆ
''ಇಡಿ ಸಿನಿಮಾ ನೋಡ್ತಾಯಿದ್ದರೆ ಜೀವ ನಡುಗತ್ತೆ. ನಿರ್ದೇಶಕ ಅನೂಪ್ ಬಂಡಾರಿಗೆ ಹಾಗೂ ನಿರ್ಮಾಪಕ ಜಾಕ್ ಮಂಜು ಸಾರ್ ಗೆ ಅಭಿನಂದಿಸಿ'' ಎಂದು ರವಿಶಂಕರ್ ಗೌಡ ವಿಕ್ರಾಂತ್ ರೋಣ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಫ್ಯಾಂಟಮ್ ಹೆಸರು ಬದಲಾವಣೆ
ಈ ಮೊದಲು ಚಿತ್ರಕ್ಕೆ ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ಇದೇ ಹೆಸರಿನಲ್ಲಿ ಇಡೀ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಈ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ವಿಕ್ರಾಂತ್ ರೋಣ. ತದನಂತರ ಫ್ಯಾಂಟಮ್ ಬದಲು ನಾಯಕನ ಹೆಸರನ್ನೇ ಚಿತ್ರದ ಹೆಸರು ಆಗಿಸೋಣ ಎಂದು ನಿರ್ಧರಿಸಿದ ಚಿತ್ರತಂಡ ''ವಿಕ್ರಾಂತ್ ರೋಣ'' ಎಂದು ಬದಲಾಯಿಸಿತು.
Recommended Video

ಬಿಡುಗಡೆ ಯಾವಾಗ?
ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ಅಶೋಕ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಗೌಡ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಜಾಕ್ ಮಂಜು ನಿರ್ಮಾಣ ಮಾಡಿದ್ದು, ಬಿಡುಗಡೆ ಬಗ್ಗೆ ಸದ್ಯಕ್ಕೆ ಅಪ್‌ಡೇಟ್ ಇಲ್ಲ. ಇದಕ್ಕೂ ಮುಂಚೆ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಬೇಕಿದೆ.


Click it and Unblock the Notifications











