ಮಗನ ಚಿತ್ರಕ್ಕೆ ಅಪ್ಪನೇ ವಿಲನ್, ಡೈರೆಕ್ಷನ್.! ನಿರೀಕ್ಷಿಸಿ...
ಸ್ಯಾಂಡಲ್ ವುಡ್ ನ ಖ್ಯಾತ ಖಳನಟ ರವಿಶಂಕರ್ ಅವರ ಮಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಎಂಬುದನ್ನ ಸ್ವತಃ ರವಿಶಂಕರ್ ಅವರೇ ಸ್ಪಷ್ಟಪಡಿಸಿದ್ದರು. ಅದಕ್ಕಾಗಿ ತಮ್ಮ ಮಗನನ್ನ ತಯಾರಿ ಮಾಡುತ್ತಿದ್ದು, ಆದಷ್ಟೂ ಬೇಗ ಬೆಳ್ಳಿ ತೆರೆಗೆ ಪರಿಚಯಿಸಲು ಸಿದ್ದತೆ ನಡೆಸುತ್ತಿದ್ದಾರೆ.
ಒಂದು ಕಡೆ ರವಿಶಂಕರ್ ಅವರ ಮಗ ಅದ್ವೈತ ಸಿನಿಮಾ ಪ್ರಪಂಚಕ್ಕೆ ಪರಿಚಯವಾಗ್ತಾರೆ ಎಂಬ ಸುದ್ದಿ ಇದ್ದರೇ, ಮತ್ತೊಂದೆಡೆ ತೆರೆಮೇಲೆ ಅಬ್ಬರಿಸುವ ರವಿಶಂಕರ್ ಅವರು ತೆರೆ ಹಿಂದೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಈಗ ಇವೆರೆಡು ಸುದ್ದಿಗಳು ಒಂದೇ ಚಿತ್ರದ ಮೂಲಕ ನೆರವೇರಲಿದೆಯಂತೆ.
ರವಿಶಂಕರ್ ಅವರ ಮಗ ಅದ್ವೈತ ನಾಯಕನಾಗಿ ಹಾಗೂ ರವಿಶಂಕರ್ ನಿರ್ದೇಶಕರಾಗುವ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.....

ಯುಗಾದಿ ಹಬ್ಬಕ್ಕೆ ಮಗನ ಸಿನಿಮಾ
ಮುಂದಿನ ವರ್ಷದ ಯುಗಾದಿ ಹಬ್ಬಕ್ಕೆ ತಮ್ಮ ಮಗ ಅದ್ವೈತ ಅವರ ಚಿತ್ರವನ್ನ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ ರವಿಶಂಕರ್.

ಮಗನ ಚಿತ್ರಕ್ಕೆ ಅಪ್ಪನೇ ಡೈರೆಕ್ಟರ್
ಮಗನ ಚಿತ್ರವನ್ನ ತಾವೇ ನಿರ್ದೇಶನ ಮಾಡುವುದಾಗಿ ರವಿಶಂಕರ್ ಬಹಿರಂಗಪಡಿಸಿದ್ದಾರೆ. ಮಗನಿಗಾಗಿ ನಾಲ್ಕೈದು ಕಥೆಗಳನ್ನ ಸಿದ್ದ ಮಾಡಿದ್ದು, ಅದರಲ್ಲಿ ಒಂದು ಕಥೆಯನ್ನ ಸಿನಿಮಾ ಮಾಡಲಿದ್ದಾರಂತೆ. ಈ ಮೂಲಕ ಮಗನಿಗೆ ಅಪ್ಪನೇ ಡೈರೆಕ್ಷನ್ ಮಾಡಲಿದ್ದಾರೆ. ಇದಕ್ಕೂ ಮುಂಚೆ ಮಾಲಾಶ್ರೀ ಅಭಿನಯದ 'ದುರ್ಗಿ' ಚಿತ್ರವನ್ನ ರವಿಶಂಕರ್ ನಿರ್ದೇಶನ ಮಾಡಿದ್ದಾರೆ.

ಮಗನ ಎದುರು ವಿಲನ್
ಮಗನ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ವಿಲನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರಬಹುದು ಎಂಬ ಸುದ್ದಿಯನ್ನ ರವಿಶಂಕರ್ ಅವರು ಅಲ್ಲೆಗಳೆದಿಲ್ಲ. 'ಅಂತಹ ಸಂದರ್ಭ ಬಂದರೂ ಬರಬಹುದು' ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಅಮೆರಿಕದಲ್ಲಿ ನಟನೆಯ ತರಬೇತಿ
ಬಿ. ಎ. ಪದವಿ ಮುಗಿಸಿರುವ ಅದ್ವೈತ ಅಮೆರಿಕದಲ್ಲಿ ನಟನೆಯ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಡ್ಯಾನ್ಸ್, ಫೈಟ್, ನಟನೆಯಲ್ಲಿ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜನವರಿಯಲ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ನಂತರ ಯುಗಾದಿ ಹಬ್ಬಕ್ಕೆ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











