For Quick Alerts
  ALLOW NOTIFICATIONS  
  For Daily Alerts

  ಕುರುಕ್ಷೇತ್ರದಲ್ಲಿ 'ಡೈಲಾಗ್ ಕಿಂಗ್' ಸಹೋದರರ ಪಾತ್ರಗಳು ಬಹಿರಂಗ

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಶುರುವಾಗಲು ಗಂಟೆಗಳು ಮಾತ್ರ ಬಾಕಿಯಿದ್ದು, ಈ ಮಧ್ಯ ಮತ್ತಷ್ಟು ಕುತೂಹಲಕಾರಿ ಅಂಶಗಳು ಬಯಲಾಗಿದೆ.

  ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತು ಡೈಲಾಗ್ ಕಿಂಗ್ ಸಹೋದರ ರವಿಶಂಕರ್ ಇಬ್ಬರು 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಇವರಿಬ್ಬರ ಪಾತ್ರಗಳ ಬಗ್ಗೆ ಸ್ವತಃ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ.

  ಈ ಮೂಲಕ ಮುನಿರತ್ನ ನಿರ್ಮಾಣ ಹಾಗೂ ನಾಗಣ್ಣ ನಿರ್ದೇಶನದಲ್ಲಿ ಮೂಡಲಿರುವ ಪೌರಾಣಿಕ ಚಿತ್ರದಲ್ಲಿ ಸಹೋದರರಿಬ್ಬರು ಒಂದಾಗಿದ್ದು, ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೆಚ್ಚಿದೆ. ಹಾಗಿದ್ರೆ, 'ಕುರುಕ್ಷೇತ್ರ'ದಲ್ಲಿ ಸಾಯಿಕುಮಾರ್ ಪಾತ್ರವೇನು? ರವಿಶಂಕರ್ ಅವರ ಪಾತ್ರವೇನು? ಮುಂದೆ ಓದಿ.....

  ರವಿಶಂಕರ್ 'ಶಕುನಿ'

  ರವಿಶಂಕರ್ 'ಶಕುನಿ'

  ಕನ್ನಡದ ಖ್ಯಾತ ಖಳನಾಯಕ ರವಿಶಂಕರ್ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಶಕುನಿ ಪಾತ್ರವನ್ನ ನಿರ್ವಹಿಸಿಲಿದ್ದಾರೆ. ಇದನ್ನ ಸ್ವತಃ ರವಿಶಂಕರ್ ಅವರೇ ಬಹಿರಂಗಪಡಿಸಿದ್ದಾರೆ.

  ಹಾಗಿದ್ರೆ, ಸಾಯಿಕುಮಾರ್ ಪಾತ್ರವೇನು?

  ಹಾಗಿದ್ರೆ, ಸಾಯಿಕುಮಾರ್ ಪಾತ್ರವೇನು?

  ಈ ಹಿಂದೆ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಶಕುನಿ ಪಾತ್ರವನ್ನ ಪೋಷಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ರವಿಶಂಕರ್ ಅವರದ್ದು ಶಕುನಿ ಪಾತ್ರ ಖಿಚತವಾಗಿರುವುದರಿಂದ ಸಾಯಿಕುಮಾರ್ ಅವರ ಪಾತ್ರ ಬೇರೆಯದ್ದೇ ಇದೆ.

  'ಶಕುನಿ' ಪಾತ್ರದ ಬಗ್ಗೆ ರವಿಶಂಕರ್ ಹೇಳಿದ್ದೇನು?

  'ಶಕುನಿ' ಪಾತ್ರದ ಬಗ್ಗೆ ರವಿಶಂಕರ್ ಹೇಳಿದ್ದೇನು?

  ''ಬಹಳ ಎಕ್ಸೈಟ್ ಆಗಿದ್ದೇನೆ. ಇಂತಹ ಚಿತ್ರದಲ್ಲಿ ನಟಿಸುವುದು ವಿಶೇಷ. ಇಡೀ ಕುರುಕ್ಷೇತ್ರಕ್ಕೆ ಕಾರಣನೇ ಶಕುನಿ. ಅಂತಹ ಪಾತ್ರ ನನಗೆ ಸಿಕ್ಕಿದ್ದು ನನ್ನ ಅದೃಷ್ಟ'' ಎಂದಿದ್ದಾರೆ ರವಿಶಂಕರ್

  ಕುರುಕ್ಷೇತ್ರ ಕದನದಲ್ಲಿ ಸಹೋದರರ ಸವಾಲ್

  ಕುರುಕ್ಷೇತ್ರ ಕದನದಲ್ಲಿ ಸಹೋದರರ ಸವಾಲ್

  ಈ ಮೂಲಕ 'ಕುರುಕ್ಷೇತ್ರ'ದಲ್ಲಿ ಇಬ್ಬರು ಡೈಲಾಗ್ ಕಿಂಗ್ ಗಳನ್ನ ಒಂದೇ ತೆರೆಯಲ್ಲಿ ನೋಡುವ ಸುವರ್ಣ ಅವಕಾಶ ಕುರುಕ್ಷೇತ್ರ ಸಿನಿಮಾ ಕಲ್ಪಿಸಿಕೊಡುತ್ತಿದೆ.

  ಧೃತರಾಷ್ಟ್ರ ಶ್ರೀನಾಥ್ ಏನಂದ್ರು?

  ಧೃತರಾಷ್ಟ್ರ ಶ್ರೀನಾಥ್ ಏನಂದ್ರು?

  ''ನಾನು ಬಹಳ ಹಿಂದೆ ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದೆ. ಡಾ.ರಾಜ್ ಕುಮಾರ್ ಅವರ ಜೊತೆ 4 ಚಿತ್ರಗಳಲ್ಲಿ ಅಭಿನಯಸಿದ್ದೆ. ಮತ್ತೆ ಈಗ ಅಂಥಹ ಪಾತ್ರದಲ್ಲಿ ನಟಿಸುವುದು ವಿಶೇಷ'' ಎಂದಿದ್ದಾರೆ. ಚಿತ್ರದಲ್ಲಿ ಶ್ರೀನಾಥ್ ಅವರದ್ದು ಧೃತರಾಷ್ಟ್ರನ ಪಾತ್ರ. ಧೃತರಾಷ್ಟ್ರ, ದುರ್ಯೋಧನನ ತಂದೆ.

  English summary
  Kannada Actor Ravishankar to Play Shakuni character in Darshan's 50th Movie Kurukshetra. The Movie Directed by Naganna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X